Site icon Vistara News

Viral Video: ಮೊಮ್ಮಗನೊಂದಿಗೆ ಸ್ವಾತಂತ್ರ್ಯೋತ್ಸವ ಆಚರಿಸಿದ ಮುಕೇಶ್​ ಅಂಬಾನಿ, ನೀತಾ ಅಂಬಾನಿ

Mukesh Ambani

ಮುಂಬೈ: ರಿಲಯನ್ಸ್​ ಇಂಡಸ್ಟ್ರೀಸ್​ ಲಿಮಿಟೆಡ್​ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಕೇಶ್​ ಅಂಬಾನಿ (Mukesh Ambani) ಮತ್ತು ಅವರ ಪತ್ನಿ ನೀತಾ ಅಂಬಾನಿ ಇಂದು ವಿಶೇಷವಾಗಿ ಸ್ವಾತಂತ್ರ್ಯೋತ್ಸವ ಆಚರಿಸಿದರು. ತಮ್ಮ ಮೊಮ್ಮಗ ಪ್ರಥ್ವಿ ಅಂಬಾನಿ ಜತೆ ಸೇರಿ ರಾಷ್ಟ್ರಧ್ವಜವನ್ನು ಹಿಡಿದು ಹಾರಾಡಿಸುತ್ತ ಫುಲ್​ ಖುಷಿಯಾಗಿ ಸ್ವಾತಂತ್ರ್ಯ ದಿನವನ್ನು ಸಂಭ್ರಮಿಸಿದ್ದಾರೆ. ಈ ವಿಡಿಯೋ ಈಗ ಸಿಕ್ಕಾಪಟೆ ವೈರಲ್​ ಆಗುತ್ತಿದೆ. ಮುಕೇಶ್​ ಅಂಬಾನಿ ಪುತ್ರ ಆಕಾಶ್​ ಅಂಬಾನಿ ಮತ್ತು ಶ್ಲೋಕಾ ಮೆಹ್ತಾ ಪುತ್ರ ಪ್ರಥ್ವಿ ಅಂಬಾನಿ ಹುಟ್ಟಿದ್ದು 2020ರ ಡಿಸೆಂಬರ್​ 10ರಂದು.

ರಿಲಯನ್ಸ್​ ಇಂಡಿಯಾ ಲಿಮಿಟೆಡ್​ ಇಂದು ತನ್ನೆಲ್ಲ ಕಚೇರಿ, ಶಾಖೆ, ವಿಭಾಗಗಳಲ್ಲೂ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸುತ್ತಿದೆ. ಆರ್​ಐಎಲ್​ ಕಾರ್ಪೋರೇಟ್​ ಆಫೀಸ್​, ನವೀ ಮುಂಬೈನಲ್ಲಿರುವ ರಿಲಯನ್ಸ್​ ಕಾರ್ಪೋರೇಟ್​ ಪಾರ್ಕ್​ (ಆರ್​ಸಿಪಿ), 1072 ಜಿಯೋ ಸೆಂಟರ್​ಗಳು, 6000 ಜಿಯೋ ಪಾಯಿಂಟ್​​ಗಳು, ರಿಲಯನ್ಸ್​ ರಿಟೇಲ್​​ ಸ್ಟೋರ್ಸ್​​ಗಳಲ್ಲೆಲ್ಲ ಧ್ವಜಾರೋಹಣ ಮಾಡಿ, ಸ್ವಾತಂತ್ರ್ಯೋತ್ಸವ ಆಚರಿಸಲಾಗಿದೆ. ಅದರಲ್ಲೂ ರಿಲಯನ್ಸ್ ಕಾರ್ಪೋರೇಟ್​ ಪಾರ್ಕ್​​ನಲ್ಲಿ ನಡೆದ ಇಂಡಿಪೆಂಡೆನ್ಸ್​ ಡೇ ಸಂಭ್ರಮದಲ್ಲಿ ಉದ್ಯೋಗಿಗಳು ತಮ್ಮ ಕುಟುಂಬದವರೊಂದಿಗೆ ಪಾಲ್ಗೊಂಡು ಸಂಭ್ರಮಿಸಿದರು. ಆರ್​ಐಎಲ್​ ಇಂದು ಮಾಜಿ ಸೈನಿಕರನ್ನೂ ಗೌರವಿಸಿದೆ. ಆರ್​ಐಎಲ್​​ನ ಎಲ್ಲ ಕಚೇರಿಗಳಲ್ಲೂ ಮಾರ್ಚ್​ ಪಾಸ್ಟ್​ ನಡೆಸಲಾಗಿದೆ. ವಿವಿಧೆಡೆ ಸಸಿಗಳನ್ನು ನೆಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಿಹಿ ಕೂಡ ವಿತರಿಸಲಾಗಿದೆ.

ಇದನ್ನೂ ಓದಿ: Mukesh Ambani | ಮುಕೇಶ್‌ ಅಂಬಾನಿ ಕುಟುಂಬಕ್ಕೆ ಬೆದರಿಕೆ ಕರೆ, ಒಬ್ಬನ ಸೆರೆ

Exit mobile version