ನವದೆಹಲಿ: ವಕ್ಫ್ ಆಸ್ತಿ (Waqf Property) ಕಬಳಿಕೆ ಸೇರಿ ಹಲವು ವಿಷಯಗಳ ಕುರಿತು ಕರ್ನಾಟಕ, ಉತ್ತರ ಪ್ರದೇಶ ಸೇರಿ ವಿವಿಧ ರಾಜ್ಯಗಳಲ್ಲಿ ಚರ್ಚೆ, ವಿವಾದ ನಡೆಯುತ್ತಿರುವ ಬೆನ್ನಲ್ಲೇ “ಮುಂಬೈನಲ್ಲಿ ಮುಕೇಶ್ ಅಂಬಾನಿ ಅವರು ವಕ್ಫ್ ಆಸ್ತಿಯಲ್ಲಿ ಅಂಟಿಲಿಯಾ (Antilia) ಮನೆ ನಿರ್ಮಿಸಿಕೊಂಡಿದ್ದಾರೆ” ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಗಂಭೀರ ಆರೋಪ ಮಾಡಿದ್ದಾರೆ.
ಮುಸ್ಲಿಮರು ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಅರವಿಂದ ಕೇಜ್ರಿವಾಲ್ ಮಾತನಾಡಿರುವ ವಿಡಿಯೊ ವೈರಲ್ ಆಗಿದೆ. “ನಾವು ತನು ಮನ ಧನದೊಂದಿಗೆ ವಕ್ಫ್ ಬೋರ್ಡ್ ಜತೆಗಿದ್ದೇವೆ. ದೇಶದಲ್ಲೇ ಶ್ರೀಮಂತರೆನಿಸಿದ ವ್ಯಕ್ತಿಯೊಬ್ಬರ ಮನೆಯನ್ನು ಮುಂಬೈನಲ್ಲಿ ವಕ್ಫ್ ಬೋರ್ಡ್ ಆಸ್ತಿಯಲ್ಲಿ ನಿರ್ಮಿಸಲಾಗಿದೆ. ಇದರ ವಿರುದ್ಧ ಕ್ರಮ ತೆಗೆದುಕೊಳ್ಳಲು ಮಹಾರಾಷ್ಟ್ರ ಸರ್ಕಾರಕ್ಕೆ ಧೈರ್ಯವಿಲ್ಲ. ನಮ್ಮ ಸರ್ಕಾರವೇನಾದರೂ ಅಲ್ಲಿದ್ದಿದ್ದರೆ ಕ್ರಮ ತೆಗೆದುಕೊಳ್ಳದೆ ಬಿಡುತ್ತಿರಲಿಲ್ಲ” ಎಂದು ಹೇಳಿದ್ದಾರೆ. ಈ ವಿಡಿಯೊವನ್ನು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಕಾರ್ಯದರ್ಶಿ ತಜಿಂದರ್ ಪಾಲ್ ಸಿಂಗ್ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
“ನಾವು ವಕ್ಫ್ ಬೋರ್ಡ್‌ಗೆ ಸಕಲ ರೀತಿಯಲ್ಲಿ ನೆರವು ನೀಡುತ್ತಿವೆ. ಆದರೆ, ಮುಂಬೈನಲ್ಲಿ ವಕ್ಫ್ ಆಸ್ತಿಯಲ್ಲಿಯೇ ಮನೆ ನಿರ್ಮಿಸಲಾಗಿದೆ. ನಿಜ ತಾನೆ” ಎಂದು ಪ್ರಶ್ನಿಸಿದ್ದಾರೆ. ಆಗ ಅಲ್ಲಿದ್ದವರೆಲ್ಲ “ಹೌದು” ಎಂದಿದ್ದಾರೆ. 2006ರಲ್ಲಿ ಮುಕೇಶ್ ಅಂಬಾನಿಯವರು ಅಂಟಿಲಿಯಾ ಮನೆ ನಿರ್ಮಿಸಲು ಆರಂಭಿಸಿದರು. ೨೦೧೨ರಲ್ಲಿ ಅವರು ಕುಟಂಬ ಸಮೇತ ನೂತನ ಮನೆ ಪ್ರವೇಶಿಸಿದರು. ಈಗ ಈ ಮನೆಯನ್ನು ವಕ್ಫ್ ಆಸ್ತಿಯಲ್ಲಿ ನಿರ್ಮಿಸಲಾಗಿದೆ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.
ಇದನ್ನೂ ಓದಿ | Mukesh Ambani | ತಿರುಪತಿ ದೇವಾಲಯಕ್ಕೆ 1.5 ಕೋಟಿ ರೂ. ಕಾಣಿಕೆ ನೀಡಿದ ಮುಕೇಶ್ ಅಂಬಾನಿ