ಉತ್ತರಪ್ರದೇಶದ (uttaradesh) ಆಯೋಧ್ಯೆಯಲ್ಲಿ (ayodhya) ರಾಮ ಮಂದಿರವನ್ನು (ram mandir) ನಿರ್ಮಿಸಿದ ಮೇಲೂ ಬಿಜೆಪಿಗೆ (bjp) ಲೋಕಸಭಾ ಚುನಾವಣೆಯಲ್ಲಿ (loksabha election) ಸೋಲಾಗಿರುವುದು ಹಲವರ ಅಚ್ಚರಿಗೆ ಕಾರಣವಾಗಿದೆ. ಕೆಲವು ದಿನಗಳ ಹಿಂದೆ ಈ ಕುರಿತು ಪ್ರತಿಕ್ರಿಯಿಸಿದ್ದ ರಾಮಾಯಣದ (ramayana) ಲಕ್ಷಣ ಪಾತ್ರಧಾರಿ ಅಯೋಧ್ಯೆ ಜನರು ದ್ರೋಹ ಮಾಡಿದ್ದಾರೆ ಎಂದು ಹೇಳಿದ್ದರು. ಇದೀಗ ಮಹಾಭಾರತ (mahabharatha) ಖ್ಯಾತಿಯ ಭೀಷ್ಮ ಪಾತ್ರಧಾರಿ ಮುಖೇಶ್ ಖನ್ನಾ (Mukesh Khanna) ಈ ಕುರಿತು ಪ್ರತಿಕ್ರಿಯಿಸಿದ್ದಾರೆ.
ಬಿ.ಆರ್. ಚೋಪ್ರಾ ಅವರ ನಿರ್ದೇಶನದ ಮಹಾಭಾರತದಲ್ಲಿ ಭೀಷ್ಮ ಪಾತ್ರಕ್ಕೆ ಹೆಸರುವಾಸಿಯಾದ ಮುಖೇಶ್ ಖನ್ನಾ 2024ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸೋಲಿಗೆ ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು. ಜೂನ್ 4ರಂದು ಘೋಷಿಸಲಾದ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಅಭ್ಯರ್ಥಿ ಲಲ್ಲು ಸಿಂಗ್ ಅವರು ಫೈಜಾಬಾದ್ ಕ್ಷೇತ್ರದಲ್ಲಿ ಸಮಾಜದ ಪಕ್ಷದ ಸೌಜೇಶ್ ಪ್ರಸಾದ್ ವಿರುದ್ಧ ಸೋಲು ಅನುಭವಿಸಿದ್ದರು.
ಈ ಕುರಿತು ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಅಭಿಪ್ರಾಯ ಹಂಚಿಕೊಂಡ ಮುಖೇಶ್ ಖನ್ನಾ, ಅಯೋಧ್ಯೆಯಲ್ಲಿನ ಚುನಾವಣೆಯಲ್ಲಿ ಬಿಜೆಪಿಯ ಸೋಲು ಭವ್ಯವಾದ ದೇವಾಲಯದ ಜೊತೆಗೆ ಸರ್ಕಾರ ಸುತ್ತಮುತ್ತಲಿನ ಜನ ಜೀವನವನ್ನು ಸುರಕ್ಷಿತಗೊಳಿಸಲು ಪ್ರಯತ್ನಿಸಬೇಕು ಎನ್ನುವುದನ್ನು ಕಲಿಸುತ್ತದೆ. ಲಕ್ಷಾಂತರ ಜನರು ಅಲ್ಲಿ ವಾಸಿಸುತ್ತಿದ್ದಾರೆ. ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಬೇಕು. ಇಲ್ಲಿ ಸಾಮಾನ್ಯ ಜನರನ್ನು ಬಿಜೆಪಿ ನಿರ್ಲಕ್ಷಿಸಿರುವುದು ಸೋಲಿಗೆ ಕಾರಣ ಎಂದು ತಿಳಿಸಿದ್ದಾರೆ.
ಅಯೋಧ್ಯೆ ಚುನಾವಣಾ ಸೋಲಿನಿಂದ ನಾವು ಕಲಿಯಬೇಕು. ಭವ್ಯ ಮಂದಿರದ ಜೊತೆಗೆ ಹತ್ತಿರದ ಪಟ್ಟಣವಾಸಿಗಳ ಜೀವನವನ್ನು ಅದ್ದೂರಿಯಾಗಿ ಮಾಡಲು ಪ್ರಯತ್ನಿಸಬೇಕು. ಕೋಟಿಗಟ್ಟಲೆ ಬಜೆಟ್ ನಲ್ಲಿ ರಾಮಮಂದಿರವಾಗಲಿ, ಚಾರ್ ಧಾಮವಾಗಲಿ, ಜೈಪುರದ ಬಳಿಯಿರುವ ಖಾತು ಶಾಮ್ ಮಂದಿರವಾಗಲಿ ಅಲ್ಲಿಯ ಜನರ ಸಮಸ್ಯೆಗಳ ಪರಿಹಾರಕ್ಕೆ ಒಂದಿಷ್ಟು ಕೋಟಿಗಳನ್ನು ಇಡಬೇಕು ಎಂದು ಹೇಳಿದ್ದಾರೆ.
ಈ ವರ್ಷದ ಜನವರಿಯಲ್ಲಿ ರಾಮ್ ಮಂದಿರ ಉದ್ಘಾಟನೆಯ ಪವಿತ್ರ ಸಮಾರಂಭವು ಅದ್ದೂರಿಯಾಗಿ ನೆರವೇರಿತ್ತು. ಈ ಬಳಿಕ ಅಯೋಧ್ಯೆ ಇರುವ ಫೈಜಾಬಾದ್ ಕ್ಷೇತ್ರದಲ್ಲಿ ಬಿಜೆಪಿಯ ಸೋಲು ಅನೇಕರಿಗೆ ದೊಡ್ಡ ಆಘಾತವಾಗಿದೆ.
ಅಯೋಧ್ಯೆಯಲ್ಲಿ ಬಿಜೆಪಿಯ ಸೋಲಿಗೆ ಸಂಬಂಧಿಸಿದಂತೆ ಹಲವಾರು ಮಂದಿ ತಮ್ಮದೇ ಆದ ಅಭಿಪ್ರಾಯಗಳನ್ನು ಹೇಳಿಕೊಳ್ಳುತ್ತಿದ್ದಾರೆ. ರಾಮಾನಂದ್ ಸಾಗರ್ ಅವರ ರಾಮಾಯಣದ ಲಕ್ಷ್ಮಣನ ಪಾತ್ರಕ್ಕೆ ಹೆಸರುವಾಸಿಯಾದ ಸುನಿಲ್ ಲಹ್ರಿ ಅವರು ಅಯೋಧ್ಯೆಯ ಮತದಾನದ ಬಗ್ಗೆ ನಿರಾಶೆ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: Parliament Session 2024: ಜೂನ್ 24ರಿಂದ ಸಂಸತ್ ವಿಶೇಷ ಅಧಿವೇಶನ; ಸ್ಪೀಕರ್ ಆಯ್ಕೆ ಸೇರಿ ಏನೆಲ್ಲ ತೀರ್ಮಾನ?
ಇನ್‌ಸ್ಟಾಗ್ರಾಮ್‌ನಲ್ಲಿ ಸುನಿಲ್ ಮಾತನಾಡಿ, ಅಯೋಧ್ಯೆ ಜನರು ಸೀತಾ ದೇವಿಯನ್ನು ಗಡಿಪಾರು ಮಾಡಿದ ಅನಂತರವೂ ಸೀತಾ ದೇವಿಯನ್ನು ಅನುಮಾನಿಸಿದ್ದರು ಎಂಬುದನ್ನು ನಾವು ಮರೆಯುತ್ತಿದ್ದೇವೆ. ಸ್ವಾರ್ಥಿಗಳು ಅಯೋಧ್ಯೇಯ ನಾಗರಿಕರು. ಅವರು ಯಾವಾಗಲೂ ದ್ರೋಹ ಮಾಡಿದ್ದಾರೆ ಎಂಬುದಕ್ಕೆ ಇತಿಹಾಸವು ಪುರಾವೆಯಾಗಿದೆ ಎಂದು ಹೇಳಿದ್ದರು.
ಇನ್ನೊಂದು ಪೋಸ್ಟ್ ನಲ್ಲಿ ಅವರು, ಅಯೋಧ್ಯೆಯ ಪ್ರಿಯ ನಾಗರಿಕರೇ, ನಿಮ್ಮ ಹಿರಿಮೆಗೆ ನಾವು ನಮಸ್ಕರಿಸುತ್ತೇವೆ. ಸೀತಾದೇವಿಯನ್ನು ಸಹ ಬಿಡದ ನೀವು, ಶ್ರೀರಾಮನು ಆ ಸಣ್ಣ ಟೆಂಟ್ ನಿಂದ ಹೊರಬರುವಂತೆ ಮಾಡಿದ ವ್ಯಕ್ತಿಗೆ ನೀವು ದ್ರೋಹ ಬಗೆದುದರಲ್ಲಿ ಅಚ್ಚರಿಯಿಲ್ಲ. ಡೇರೆ ಇದ್ದ ಜಾಗದಲ್ಲಿ ಸುಂದರವಾದ ದೇವಾಲಯದಲ್ಲಿ ಸ್ಥಾಪಿಸಲಾಯಿತು. ಇಡೀ ರಾಷ್ಟ್ರವು ನಿಮ್ಮನ್ನು ಮತ್ತೆ ಗೌರವದಿಂದ ನೋಡುವುದಿಲ್ಲ ಎಂದು ಹೇಳಿದ್ದರು.