Site icon Vistara News

Mukhtar Ansari | ಯುಪಿ ಗ್ಯಾಂಗ್‌ಸ್ಟರ್- ರಾಜಕಾರಣಿ ಮುಖ್ತಾರ್ ಅನ್ಸಾರಿಗೆ 10 ವರ್ಷ ಜೈಲು ಶಿಕ್ಷೆ, ಏನಿದು ಪ್ರಕರಣ?

Mukhtar Ansari

ನವದೆಹಲಿ: ಗ್ಯಾಂಗ್‌ಸ್ಟರ್ ಕಾಯ್ದೆಯಡಿ ಜೈಲಿನಲ್ಲಿರುವ, ಉತ್ತರ ಪ್ರದೇಶದ ರಾಜಕಾರಣಿಯೂ ಆಗಿರುವ ಗ್ಯಾಂಗ್‌ಸ್ಟರ್ ಮುಖ್ತಾರ್ ಅನ್ಸಾರಿಗೆ ನ್ಯಾಯಾಲಯವು ಮತ್ತೊಂದು ಪ್ರಕರಣದಲ್ಲಿ ಗುರುವಾರ 10 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಘಾಜಿಪುಟ್‌ನಲ್ಲಿ ಎಎಸ್‌ಪಿ ಮೇಲಿನ ದಾಳಿಯ ಕುರಿತು 1996ರಲ್ಲಿ ದಾಖಲಿಸಲಾದ ಪ್ರಕರಣ ಸೇರಿದಂತೆ ಹಲವಾರು ಪ್ರಕರಣಗಳ ಸಂಬಂಧ ಶಿಕ್ಷೆ ನೀಡಲಾಗಿದೆ ಎನ್ನಲಾಗಿದೆ.

ಸದ್ಯ ಮುಖ್ತಾರ್ ಅನ್ಸಾರಿ ಉತ್ತರ ಪ್ರದೇಶದ ಬಂದಾ ಜೈಲಿನಲ್ಲಿದ್ದಾರೆ. ಹಲವು ಕ್ರಿಮಿನಲ್ ಕೇಸ್ ಎದುರಿಸುತ್ತಿದ್ದಾರೆ. ನ್ಯಾಯಾಲಯವು ಮುಖ್ತಾರ್ ಅನ್ಸಾರಿಗೆ 10 ವರ್ಷಗಳ ಕಠಿಣ ಶಿಕ್ಷೆಯ ಜತೆಗೆ, 5 ಲಕ್ಷ ರೂ. ದಂಡ ಕೂಡ ವಿಧಿಸಿದೆ. ಅನ್ಸಾರಿ ವಿರುದ್ಧ 59ಕ್ಕೂ ಅಧಿಕ ಕ್ರಿಮಿನಲ್ ಪ್ರಕರಣಗಳಿದ್ದು, ಎಲ್ಲದರಲ್ಲೂ ವಿಚಾರಣೆ ಎದುರಿಸುತ್ತಿದ್ದಾರೆ. ಮತ್ತೆ ಕೆಲವು ಪ್ರಕರಣಗಳಲ್ಲಿ ಅವರು ಶಿಕ್ಷೆಯನ್ನು ಕೂಡ ಅನುಭವಿಸುತ್ತಿದ್ದಾರೆ.

ಬುಧವಾರ ಇ.ಡಿ ಬಂಧಿಸಿತ್ತು!
ಅಕ್ರಮ ಹಣ ವರ್ಗಾವಣೆ ಸಂಬಂಧ, ಮುಖ್ತಾರ್ ಅನ್ಸಾರಿಯನ್ನು (Mukhtar Ansari) ಜಾರಿ ನಿರ್ದೇಶನಾಲಯವು (ಇ.ಡಿ) ಬುಧವಾರವಷ್ಟೇ ಬಂಧಿಸಿತ್ತು. ಪೂರ್ವ ಉತ್ತರ ಪ್ರದೇಶದ ಘಾಜಿಪುರ ಮೂಲದ ಅನ್ಸಾರಿ, ಮವು ಸದರ್ ಕ್ಷೇತ್ರವನ್ನು 5 ಬಾರಿ ಪ್ರತಿನಿಧಿಸಿದ್ದರು. ಎರಡು ಬಾರಿ ಬಿಎಸ್‌ಪಿ ಮತ್ತು ಮೂರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಶಾಸಕರಾಗಿ ಆಯ್ಕೆಯಾಗಿದ್ದರು. 2021ರ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ಅನ್ಸಾರಿ ಅವರನ್ನು ವಿಚಾರಣೆ ನಡೆಸಿತ್ತು. ಅನ್ಸಾರಿ ವಿರುದ್ಧ ಉತ್ತರ ಪ್ರದೇಶ ಸರ್ಕಾರವು ಅನೇಕ ಎಫ್ಐಆರ್‌ಗಳನ್ನು ದಾಖಲು ಮಾಡಿದೆ. ಅದೇ ರೀತಿ, ಅನ್ಸಾರಿ ಪತ್ನಿ ನಡೆಸುತ್ತಿರುವ ವಿಕಾಸ್ ಕನ್ಸ್‌ಟ್ರಕ್ಷನ್ ಕಂಪನಿ ವಿರುದ್ಧ ಎರಡು ಎಫ್ಐಆರ್ ದಾಖಲಾಗಿದ್ದವು. ಈ ಹಿನ್ನೆಲೆಯಲ್ಲಿ ಅನ್ಸಾರಿಯನ್ನು ವಿಚಾರಣೆ ನಡೆಸಲಾಗಿತ್ತು.

ಇದನ್ನೂ ಓದಿ | Mukhtar Ansari | ಮಾಜಿ ಶಾಸಕ ಮುಖ್ತಾರ್‌ ಅನ್ಸಾರಿಗೆ 7 ವರ್ಷ ಜೈಲು, ಏನಿದು ಪ್ರಕರಣ?

Exit mobile version