Site icon Vistara News

Multiple Blasts: ಭಾರೀ ಸ್ಫೋಟ; ಇಬ್ಬರು ಸ್ಥಳದಲ್ಲೇ ಸಾವು-ವಿಡಿಯೋ ನೋಡಿ

multiple blasts

ಗುರುಗ್ರಾಮ: ಅಗ್ನಿ ಶಾಮಕ ಸಾಧನ ತಯಾರಕ ಕಂಪನಿಯಲ್ಲಿ ಭಾರೀ ಸ್ಫೋಟ(Multiple blasts)ವೊಂದು ಸಂಭವಿಸಿದ್ದು, ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹರ್ಯಾಣ(Haryana)ದ ಗುರುಗ್ರಾಮದಲ್ಲಿ ನಡೆದಿದೆ. ಇನ್ನು ಘಟನೆಯಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ದೌಲತಾಬಾದ್‌ನಲ್ಲಿರುವ ಕೈಗಾರಿಕಾ ಪ್ರದೇಶದಲ್ಲಿ ಈ ಸ್ಫೋಟ ಸಂಭವಿಸಿದ್ದು, 12ಕ್ಕೂ ಅಧಿಕ ಅಗ್ನಿ ಶಾಮಕ ಸಾಧನಗಳಿಗೆ ಬೆಂಕಿ ತಗುಲಿದ್ದು, ಬಳಿಕ ಭಾರೀ ಸ್ಫೋಟಗೊಂಡಿದೆ.

ಘಟನೆ ಬಗ್ಗೆ ಡಿಸಿಪಿ ಕರಣ್‌ ಗೋಯೆಲ್‌ ಮಾಹಿತಿ ನೀಡಿದ್ದು, ಶನಿವಾರ ಬೆಳಗ್ಗೆ ಸುಮಾರು 3 ಗಂಟೆಗೆ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು, ಮೂರರಿಂದ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅದೂ ಅಲ್ಲದೇ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಇನ್ನು ಬೆಂಕಿ ನಂದಿಸುವಲ್ಲಿ ಅಗ್ನಿ ಶಾಮಕ ದಳ ಯಶಸ್ವಿಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಇನ್ನು ಘಟನೆ ಬಗ್ಗೆ ಅಗ್ನಿ ಶಾಮಕ ದಳದ ಅಧಿಕಾರಿ ರಮೇಶ್‌ ಕುಮಾರ್‌ ಮಾಹಿತಿ ನೀಡಿದ್ದು, ರಾತ್ರಿ ಸ್ಫೋಟ ಸಂಭವಿಸಿರುವ ಬಗ್ಗೆ ದೂರು ಬಂದಿತ್ತು. ತಕ್ಷಣ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಗೆ ಮುಂದಾದೆವು. ಸುಮಾರು 24 ಅಗ್ನಿ ಶಾಮಕ ದಳ ಸ್ಥಳಕ್ಕೆ ದೌಡಾಯಿಸಿದೆ. ಸ್ಫೋಟದಿಂದಾಗಿ ಪಕ್ಕದ ಕಟ್ಟಡಗಳು ಹಾನಿಗೊಳಗಾಗಿವೆ. ನಾವು ಸ್ಥಳಕ್ಕೆ ಧಾವಿಸುವ ಮುನ್ನವೇ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿಲಾಗಿತ್ತು ಎಂದು ಹೇಳಿದ್ದಾರೆ.

ಎರಡು ದಿನಗಳ ಹಿಂದೆಯಷ್ಟೇ ಹರ್ಯಾಣದ ಬಹುದ್ದೂರ್​ಗಢದ ಡಾಬಾದಲ್ಲಿ ಅವಳಿ ಸಿಲಿಂಡರ್​ ಸ್ಫೋಟಗೊಂಡಿದ್ದು, 9 ಮಂದಿ ಗಾಯಗೊಂಡಿದ್ದರು. ಈ ಪೈಕಿ ಐವರ ಸ್ಥಿತಿ ಚಿಂತಾಜನಕವಾಗಿದೆ. ಮಾಡರ್ನ್ ಇಂಡಸ್ಟ್ರಿಯಲ್ ಏರಿಯಾದ ಮೆಟ್ರೋ ಪಿಲ್ಲರ್ 770 ಬಳಿ ಈ ಘಟನೆ ನಡೆದಿದೆ. ಸಿಲಿಂಡರ್ ಸ್ಫೋಟದ ಘಟನೆಯಲ್ಲಿ ಗಾಯಗೊಂಡವರಲ್ಲಿ ಡಾಬಾದಲ್ಲಿದ್ದ ಕೆಲಸಗಾರರು ಮತ್ತು ಆ ಪ್ರದೇಶದಲ್ಲಿ ಓಡಾಡುತ್ತಿದ್ದ ಜನರು ಕೂಡ ಸೇರಿದ್ದಾರೆ.

ಗಾಯಾಳುಗಳು ಜೆಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ ಐವರ ಸ್ಥಿತಿ ಚಿಂತಾಜನಕವಾಗಿದ್ದು, ಶೇ.50ರಷ್ಟು ಸುಟ್ಟ ಗಾಯಗಳಾಗಿವೆ ಎನ್ನಲಾಗಿದೆ.

ಇದನ್ನೂ ಓದಿ: Deep fake Scam: ಮುಖೇಶ್‌ ಅಂಬಾನಿಯ ಡೀಪ್‌ ಫೇಕ್‌ ವಿಡಿಯೋ; ನಿಜವೆಂದೇ ನಂಬಿದ್ದ ವೈದ್ಯೆಗೆ 7 ಲಕ್ಷ ರೂ ವಂಚನೆ

Exit mobile version