ಮುಂಬೈ, ಮಹಾರಾಷ್ಟ್ರ: ವಲಸಿಗರಿಗೆ ದೇಶದ ಅತಿಹೆಚ್ಚು ದುಬಾರಿ ನಗರ ಯಾವುದು ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ. ದೇಶದ ಹಣಕಾಸಿನ ರಾಜಧಾನಿ ಎನಿಸಿಕೊಂಡಿರುವ ಮುಂಬೈ (Mumbai) ವಲಸಿಗರಿಗೆ ದುಬಾರಿ ನಗರವಾಗಿದೆ(most costly Indian city). ನಂತರದ ಸ್ಥಾನದಲ್ಲಿ ದೇಶದ ರಾಜಧಾನಿ ನವದೆಹಲಿ ಮತ್ತು ಭಾರತದ ಸಿಲಿಕಾನ್ ಸಿಟಿಯಾಗಿರುವ ಬೆಂಗಳೂರು ನಗರಗಳಿವೆ. ಮರ್ಸರ್‌ನ 2023ರ ಜೀವನದ ವೆಚ್ಚದ ಸಮೀಕ್ಷೆಯನ್ನು ಬಿಡುಗಡೆ ಮಾಡಲಾಗಿದ್ದು, ಅದರಲ್ಲಿ ಈ ಮಾಹಿತಿ ವ್ಯಕ್ತವಾಗಿದೆ. ಏತನ್ಮಧ್ಯೆ, ಬೆಂಗಳೂರು(Bengaluru), ಚೆನ್ನೈ (Chennai) ಮತ್ತು ಹೈದರಾಬಾದ್‌ನಲ್ಲಿ (Hyderabad) ಮದ್ಯದ ಬೆಲೆಯಲ್ಲಿ ಹೆಚ್ಚಳ ಕಂಡುಬಂದಿದೆ. ಆದರೆ, ಈ ವಿಷಯದಲ್ಲಿ ಚೆನ್ನೈ ನಗರ ಟಾಪ್ ಸ್ಥಾನದಲ್ಲಿದೆ(Mercer Survey).
ಮರ್ಸರ್ ವರದಿಯ ಪ್ರಕಾರ, ಚೆನ್ನೈ, ಹೈದರಾಬಾದ್, ಕೋಲ್ಕೊತಾ ಮತ್ತು ಪುಣೆ ನಗರಗಳು ಮುಂಬೈಗಿಂತ 50 ಪ್ರತಿಶತದಷ್ಟು ಕಡಿಮೆ ವಸತಿ ವೆಚ್ಚವನ್ನು ನೀಡುತ್ತವೆ. ಅಂದರೆ, ಮುಂಬೈಗಿಂತಲೂ ಅರ್ಧದಷ್ಟು ದುಬಾರಿಯಾಗಿವೆ ಎಂದರ್ಥ. ಸಮೀಕ್ಷೆ ನಡೆಸಿದ ನಗರಗಳಲ್ಲಿ ಕೋಲ್ಕೊತಾದಲ್ಲಿ ವೆಚ್ಚ ತುಂಬಾ ಕಡಿಮೆಯಾಗಿದೆ. ಕೋಲ್ಕೊತಾ ನಗರವು ವಲಸಿಗರಿಗೆ ಕಡಿಮೆ ವೆಚ್ಚದ ವಸತಿ ಸೌಕರ್ಯವನ್ನು ಹೊಂದಿದ್ದು, ನಿವಾಸಿಗಳು ಮತ್ತು ವಲಸಿಗರಿಗೆ ಹೆಚ್ಚು ಕೈಗೆಟುಕುವ ಆಯ್ಕೆಯನ್ನು ಒದಗಿಸುತ್ತದೆ ಎಂದು ಸಮೀಕ್ಷೆ ಹೇಳಿದೆ.
ಐದು ಖಂಡಗಳಾದ್ಯಂತ 227 ನಗರಗಳನ್ನು ಒಳಗೊಂಡಿರುವ ಮರ್ಸರ್‌ನ ಸಮೀಕ್ಷೆಯು ಮುಂಬೈ ಮತ್ತು ದೆಹಲಿಯು ವಲಸಿಗರಿಗೆ ಏಷ್ಯಾದ ಟಾಪ್ 35 ಅತ್ಯಂತ ದುಬಾರಿ ನಗರಗಳಲ್ಲಿ ಸ್ಥಾನ ಪಡೆದಿ. ಆದಾಗ್ಯೂ, ಏಷ್ಯಾದ ಇತರ ನಗಗಳಿಗೆ ಹೋಲಿಸಿದರೆ, ಮುಂಬೈ 27ನೇ ಸ್ಥಾನಕ್ಕೆ ಇಳಿಕೆ ಕಂಡಿದೆ.
ಈ ಸುದ್ದಿಯನ್ನೂ ಓದಿ: NCRB Report | ಗುರುತು ಮಾಹಿತಿ ಕಳ್ಳತನ: ದೇಶದಲ್ಲೇ ಬೆಂಗಳೂರು ನಗರ ನಂಬರ್ 1
ವಸತಿ, ಸಾರಿಗೆ, ಆಹಾರ, ಬಟ್ಟೆ, ಗೃಹೋಪಯೋಗಿ ವಸ್ತುಗಳು ಮತ್ತು ಮನರಂಜನೆ ಸೇರಿದಂತೆ ಪ್ರತಿ ಸ್ಥಳದಲ್ಲಿ 200 ಕ್ಕೂ ಹೆಚ್ಚು ವಸ್ತುಗಳ ತುಲನಾತ್ಮಕ ವೆಚ್ಚವನ್ನು ಅಳೆದು ಸಮೀಕ್ಷೆಯನ್ನು ಮರ್ಸರ್ ಸಿದ್ದಪಡಿಸಿದೆ. 2022ಕ್ಕೆ ಹೋಲಿಸಿದರೆ ಮುಂಬೈ ಅತ್ಯಂತ ಗಮನಾರ್ಹ ಏರಿಕೆಯೊಂದಿಗೆ 13-15 ಪ್ರತಿಶತದಷ್ಟು ಹೆಚ್ಚಳಕ್ಕೆ ಸಾಕ್ಷಿಯಾಗಿದೆ. ಸಮೀಕ್ಷೆ ನಡೆಸಿದ ಎಲ್ಲಾ ಭಾರತೀಯ ನಗರಗಳಲ್ಲಿ ಬಾಡಿಗೆ ಬೆಲೆಗಳು ಮೇಲ್ಮುಖ ಪ್ರವೃತ್ತಿಯನ್ನು ತೋರಿಸಿದೆ ಎಂದು ಸಮೀಕ್ಷೆ ಹೇಳಿದೆ.
ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.