Site icon Vistara News

ಮುಂಬೈ ಕಟ್ಟಡ ಕುಸಿತ ಓರ್ವ ಸಾವು, 16 ಮಂದಿಗೆ ಗಂಭೀರ ಗಾಯ

mumbai building collpse

ಮುಂಬೈ : ಮನೆಯೊಂದು ಕುಸಿದು ಓರ್ವ ಸಾವನ್ನಪ್ಪಿದ್ದು, 16 ಜನರಿಗೆ ಗಂಭೀರಗಳಾಗಿರುವ ಘಟನೆ ಮುಂಬೈನ ಶಾಸ್ತ್ರಿ ನಗರದಲ್ಲಿ ನಿನ್ನೆ ರಾತ್ರಿ ಸಂಭವಿಸಿದೆ.

ನಿನ್ನೆ ತಡರಾತ್ರಿ ಸಮಯದಲ್ಲಿ ಜಿ ಪ್ಲಸ್‌ 2 ರಚನೆಯ ಮನೆ ಕುಸಿತಗೊಂಡಿದ್ದು, ಕಟ್ಟಡದಲ್ಲಿದ್ದ 16 ಕ್ಕೂ ಹೆಚ್ಚು ಜನರು ಅವಶೇಷಗಳಡಿ ಸಿಲುಕಿಕೊಂಡಿದ್ದರು. ಕೂಡಲೇ ಸ್ಥಳೀಯರು ರಕ್ಷಣಾ ದಳಗೆ ಮಾಹಿತಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿ 16 ಮಂದಿಯನ್ನು ಹೊರಗೆ ತೆಗೆದಿದ್ದು, ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನು ಓದಿ| ಮುಂಬೈನಲ್ಲಿ ಸಿಕ್ಕಸಿಕ್ಕವರಿಗೆ ಚಾಕುವಿನಿಂದ ಇರಿದ ನೈಜೀರಿಯಾ ವ್ಯಕ್ತಿ; 8 ಮಂದಿಗೆ ಗಾಯ

ಈ ಕುರಿತು ಬೃಹನ್‌ ಮುಂಬೈ ಮುನ್ಸಿಪಲ್‌ ಕಾಪೋರೇಶನ್‌ ಟ್ವೀಟ್‌ ಮಾಡಿ ಮಾಹಿತಿ ನೀಡಿದ್ದು, ಬುಧವಾರ ರಾತ್ರಿ ಶಾಸ್ತ್ರಿ ನಗರದಲ್ಲಿರುವ ಜಿ ಪ್ಲಸ್‌ 2 ರಚನೆಯ ಮನೆ ಕುಸಿತಗೊಂಡಿದೆ. ಘಟನೆಯಲ್ಲಿ ಓರ್ವ ವ್ಯಕ್ತಿ ಪ್ರಾಣ ಕಳೆದುಕೊಂಡಿದ್ದು, 16 ಮಂದಿಗೆ ಗಂಭೀರಗಳಾಗಿದೆ. ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯಕ್ಕೆ ಕಟ್ಟಡದ ಅವಶೇಷಗಳಡಿ ಮೂರ್ನಾಲ್ಕು ಮಂದಿ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ರಕ್ಷಣಾ ಕಾರ್ಯಾಚರಣೆ ಮಾಡಲಾಗುತ್ತಿದೆ ಎಂದು ಬಿಎಂಸಿ ಟ್ವೀಟ್‌ನಲ್ಲಿ ತಿಳಿಸಿದೆ.

ಇದನ್ನು ಓದಿ| IPL 2022 | ಮುಂಬೈ ಗೆಲುವಿಗೆ ಪ್ರಾರ್ಥಿಸಬೇಕು ಆರ್‌ಸಿಬಿ!

Exit mobile version