Site icon Vistara News

ಗುಂಡಿನ ಮತ್ತೇ ಗಮ್ಮತ್ತು, ಮುಂಬೈನಲ್ಲಿ ಕುಳಿತು ಬೆಂಗಳೂರಿನ ಹೋಟೆಲ್‌ನಿಂದ ಬಿರ್ಯಾನಿ ಆರ್ಡರ್‌ ಮಾಡಿದ ಯುವತಿ

Zomato Bizarre Order

ಮುಂಬೈ: ಕಂಠಮಟ್ಟ ಮದ್ಯಪಾನ ಮಾಡಿದ ಬಳಿಕ ತುಂಬ ಜನರ ವರ್ತನೆಯೇ ಬದಲಾಗುತ್ತದೆ. ಕೆಲವೊಬ್ಬರು ಇಂಗ್ಲಿಷ್‌ನಲ್ಲಿ ಮಾತನಾಡಲು ಶುರು ಮಾಡುತ್ತಾರೆ. ಇನ್ನೂ ಕೆಲವೊಬ್ಬರು ಮಾಜಿ ಪ್ರಿಯತಮೆಯೋ, ಪ್ರಿಯತಮನಿಗೋ ಕರೆ ಮಾಡಿ ಕೊರೆಯುತ್ತಾರೆ. ಆದರೆ, ಮುಂಬೈನಲ್ಲಿ ಯುವತಿಯೊಬ್ಬಳು ಕುಡಿದ ಮತ್ತಿನಲ್ಲಿ ಜೊಮ್ಯಾಟೋದಲ್ಲಿ ಬೆಂಗಳೂರಿನ ಹೋಟೆಲ್‌ನಿಂದ ಬಿರಿಯಾನಿ ಆರ್ಡರ್‌ ಮಾಡಿದ್ದಾಳೆ. ಈ ಸುದ್ದಿ ಈಗ ವೈರಲ್‌ ಆಗಿದೆ.

ಮುಂಬೈನ ಸುಬಿ ಎಂಬ ಯುವತಿಯು ಬೆಂಗಳೂರಿನ ಮೇಘನಾ ಫುಡ್ಸ್‌ ಹೋಟೆಲ್‌ನಿಂದ 2,500 ರೂ. ಮೌಲ್ಯದ ಬಿರಿಯಾನಿ ಆರ್ಡರ್‌ ಮಾಡಿದ್ದಾರೆ. ಇದನ್ನು ಅವರೇ ಟ್ವಿಟರ್‌ನಲ್ಲಿ ಹೇಳಿಕೊಂಡಿದ್ದಾರೆ. “ಕುಡಿದ ಮತ್ತಿನಲ್ಲಿ ನಾನು ಬೆಂಗಳೂರಿನ ಹೋಟೆಲ್‌ನಿಂದ ಬಿರಿಯಾನಿ ಆರ್ಡರ್‌ ಮಾಡಿದ್ದೇನೆ” ಎಂಬುದಾಗಿ ತಿಳಿಸಿದ್ದಾರೆ. ಬಳಿಕ ಈ ಖಾತೆ ಡಿಲೀಟ್‌ ಆಗಿದೆ.

ಸುಬಿ ಅವರಿಗೆ ಜೊಮ್ಯಾಟೊ ಕೇರ್‌ ಟ್ವಿಟರ್‌ ಖಾತೆಯಿಂದ ಪ್ರತಿಕ್ರಿಯೆ ನೀಡಲಾಗಿದೆ. ‘ಸುಬಿ ಅವರೇ, ನೀವು ಬೆಳಗ್ಗೆ ಹ್ಯಾಂಗೋವರ್‌ನಲ್ಲಿದ್ದಾಗ ನಿಮ್ಮ ಮನೆ ಬಾಗಿಲಿಗೆ ಬರುವ ಬಿರಿಯಾನಿಯು ಇನ್ನಷ್ಟು ಖುಷಿ ನೀಡುತ್ತದೆ. ನಿಮಗೆ ಆದ ಅನುಭವದ ಬಗ್ಗೆ ನಮಗೆ ಮಾಹಿತಿ ನೀಡುವುದನ್ನು ಮರೆಯದಿರಿ” ಎಂದಿದೆ.

ಇದನ್ನೂ ಓದಿ | Viral Video : ಐದು ವರ್ಷದ ಬಾಲಕನೇ ಪೊಲೀಸರಿಗೆ ಮುಖ್ಯಸ್ಥ! ವೈರಲ್‌ ಆಯ್ತು ಈ ವಿಶೇಷ ವಿಡಿಯೊ

Exit mobile version