ಮುಂಬೈ, ಮಹಾರಾಷ್ಟ್ರ: ಶ್ರದ್ಧಾ ವಾಳ್ಕರ್ ರೀತಿಯ ಪ್ರಕರಣವೊಂದು ಮಹಾರಾಷ್ಟ್ರದ (Maharashtra) ಮುಂಬೈನಲ್ಲಿ (Mumbai) ನಡೆದಿದೆ. 56 ವರ್ಷದ ವ್ಯಕ್ತಿಯೊಬ್ಬ ತನ್ನ ಲೈವ್ ಇನ್ ಸಂಗಾತಿಯನ್ನು (Live-in-Partner) ತುಣುಕುಗಳಾಗಿ ಕತ್ತರಿಸಿ, ಕೆಲವು ತುಣುಕುಗಳ್ನು ಕುಕ್ಕರ್‌ನಲ್ಲಿ (Cooker) ಬೇಯಿಸಿದ ಭೀಭೀತ್ಸ ಘಟನೆ ನಡೆದಿದೆ. ಪೊಲೀಸರ ಪ್ರಕಾರ, ಆರೋಪಿ ಮರ ಕತ್ತರಿಸುವ ಕಟ್ಟರ್ (Tree Cutter) ಬಳಸಿ, ತನ್ನ ಸಂಗಾತಿಯನ್ನು ಕತ್ತರಿಸಿ ಕೊಲೆ ಮಾಡಿದ್ದಾನೆ(Mumbai Murder Case).
ಕೊಲೆ ಆರೋಪಿಯನ್ನು ಮನೋಜ್ ಸಹಾನಿ ಎಂದು ಗುರುತಿಸಲಾಗಿದೆ. ಗೀತಾ ನಗರದ 7ನೇ ಹಂತದಲ್ಲಿರುವ ಗೀತಾ ಆಕಾಶ್ ದೀಪ್ ಅಪಾರ್ಟ್‌ಮೆಂಟ್‌ನ 704 ಫ್ಲ್ಯಾಟ್‌ನಲ್ಲಿ ಈ ಮನೋಜ್ ತನ್ನ ಲೈವ್ ಇನ್ ಸಂಗಾತಿ ಸರಸ್ವತಿ ವೈದ್ಯ(36) ಜತೆಗಿದ್ದ. ಆಕಾಶ್ ಬೋರಿವಲಿಯಲ್ಲಿ ಸಣ್ಣ ಅಂಗಡಿಯೊಂದನ್ನು ನಡೆಸುತ್ತಿದ್ದಾನೆ. ಮನೋಜ್ ಫ್ಲ್ಯಾಟ್‌ನಿಂದ ದುರ್ವಾಸನೆ ಬರುತ್ತಿದ್ದಂತೆ ನೆರೆ ಹೊರೆಯವರು ಪೊಲೀಸರಿಗೆ ಸುದ್ದಿ ತಿಳಿಸಿದ್ದರು. ಮಾಹಿತಿ ಪಡೆದುಕೊಂಡ ನಯಾನಗರ್ ಪೊಲೀಸರು ಸ್ಥಳಕ್ಕೆ ಆಗಮಿಸಿ, ಫ್ಲ್ಯಾಟ್ ಹೊಕ್ಕು ಪರಿಶೀಲಿನೆ ನಡೆಸಿದ್ದಾರೆ.
ಮನೆಯೊಳಗೆ ಕತ್ತರಿಸಿದ ದೇಹದ ತುಣುಕುಗಳ ಪತ್ತೆಯಾಗಿವೆ. ಬಹುಶಃ ಕೊಲೆ ಮಾಡಿ ಮೂರ್ನಾಲ್ಕು ದಿನಗಳಾಗಿರಬಹು ಎಂದು ಅಂದಾಜಿಸಲಾಗಿದೆ. ಮನೆಯ ತುಂಬೆಲ್ಲ ಕೊಳೆತ ಮಹಿಳೆಯ ದೇಹದ ತುಣುಕುಗಳನ್ನು ತಂಡವು ಕಂಡಿದೆ. ಮನೋಜ್ ಸಹಾನಿ ಮತ್ತು ಸರಸ್ವತಿ ವೈದ್ಯ ಅವರು ಲಿವ್-ಇನ್ ರಿಲೇಶನ್‌ಶಿಪ್‌ನಲ್ಲಿದ್ದರು. ಗೀತಾ ಆಕಾಶ್ ದೀಪ್ ಬಿಲ್ಡಿಂಗ್‌ನಲ್ಲಿ ವಾಸಿಸುತ್ತಿದ್ದರು. ಕೆಲವು ವಿಷಯಕ್ಕೆ ಅವರಿಬ್ಬರ ಮಧ್ಯೆ ಜಗಳವಾಗಿದೆ. ನಂತರ ಮಹಿಳೆಯನ್ನು ಆಕೆಯ ಸಂಗಾತಿ ಕೊಲೆ ಮಾಡಿದ್ದಾರೆ. ಆಕೆಯ ದೇಹವನ್ನು ತುಂಡುಗಳಾಗಿ ಕತ್ತರಿಸಿದ್ದಾನೆ. ನಾವು ಮನೆಗೆ ತಲುಪಿ ಬಾಗಿಲು ತೆರೆದಾಗ, ಇದು ಕೊಲೆಯ ಪ್ರಕರಣ ಎಂದು ನಮಗೆ ಅರ್ಥವಾಯಿತು ಮತ್ತು ಆರೋಪಿ ಸಾಕ್ಷ್ಯಗಳನ್ನು ಮರೆ ಮಾಚಲು ಪ್ರಯತ್ನಿಸಿದ್ದಾನೆ ಎಂದು ವಲಯ 1 ಪೊಲೀಸ್ ಆಯುಕ್ತ ಜಯಂತ್ ಬಜ್ಬಲೆ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: ಶ್ರದ್ಧಾ ವಾಳ್ಕರ್ ಹತ್ಯೆ ಪ್ರಕರಣದಲ್ಲಿ ಸಿದ್ಧವಾಯ್ತು 3000 ಪುಟಗಳ ಕರಡು ಆರೋಪ ಪಟ್ಟಿ; ಕಾನೂನು ತಜ್ಞರಿಂದ ಪರಿಶೀಲನೆ
ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಪೊಲೀಸರು, ಈ ಕೊಲೆಯ ಹಿಂದಿರುವ ಉದ್ದೇಶವನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ತೀವ್ರ ವಿಚಾರಣೆ ನಡೆಸಿದಾದೆರ. ಕಳೆದ ವರ್ಷ ಮೇ ತಿಂಗಳಲ್ಲಿ ದಿಲ್ಲಿಯಲ್ಲಿ ಅಫ್ತಾಬ್ ಪೂನಾವಾಲಾ ಎಂಬಾತ ತನ್ನ ಲಿವ್ ಸಂಗಾತಿ ಶ್ರದ್ಧಾ ವಾಳ್ಕರ್ ಅವರನ್ನು ಕತ್ತರಿಸಿ, ದೇಹದ ಭಾಗಗಳನ್ನು ಮೂರು ವಾರಗಳ ಕಾಲ ಫ್ರಿಡ್ಜ್‌ನಲ್ಲಿಟ್ಟಿದ್ದು. ಬಳಿಕ ಒಂದೊಂದೇ ದೇಹದ ತುಣಕನ್ನು ಆತ ಹತ್ತಿರ ಕಾಡಿನಲ್ಲಿ ಮಧ್ಯೆ ರಾತ್ರಿ ಹೋಗಿ ಎಸೆದು ಬಂದಿದ್ದ. ಈ ಪ್ರಕರಣವು ದೇಶದಲ್ಲಿ ಭಾರೀ ಸಂಚಲನವನ್ನೇ ಸೃಷ್ಟಿಸಿತ್ತು.
ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.