ಮುಂಬಯಿ: ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಪುಣೆಯಲ್ಲಿ ಬಂಧಿಸಿರುವ ಶಂಕಿತ ಉಗ್ರರ (Terror Attack) ಬಳಿ ಯಹೂದಿ ಸಮುದಾಯ ವಾಸಿರುವ ಕೇಂದ್ರವಾಗಿರುವ ಛಬಾಡ್ ಹೌಸ್ನ ಚಿತ್ರಗಳು ಪತ್ತೆಯಾದ ಹಿನ್ನೆಲೆಯಲ್ಲಿ ಮುಂಬಯಿ ಪೊಲೀಸರು ಕೊಲಾಬಾದ ಛಬಾಡ್ ಹೌಸ್ಬ ಭದ್ರತೆಯನ್ನು ಹೆಚ್ಚಿಸಿದ್ದಾರೆ. ಶಂಕಿತರ ಉಗ್ರರು ಕೊಲಾಬಾದಲ್ಲಿನ ಈ ಕೇಂದ್ರದ ಮೇಲೆ ದಾಳಿ ಮಾಡಲು ಸಂಚು ರೂಪಿಸುತ್ತಿದ್ದರು ಎಂಬುದಾಗಿ ವರದಿಯಾಗಿದೆ. 26/11 ಭಯೋತ್ಪಾದಕ ದಾಳಿಯ ಸಂದರ್ಭದಲ್ಲಿ ಚಬಾದ್ ಹೌಸ್ ಮೇಲೂ ದಾಳಿ ನಡೆದಿತ್ತು. ಅಂದಿನಿಂದ ಅಲ್ಲಿ ಬಿಗಿ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದೆ.
ಮಹಾರಾಷ್ಟ್ರ ಎಟಿಎಸ್ ಕೆಲವು ದಿನಗಳ ಹಿಂದೆ ಪುಣೆಯಲ್ಲಿ ಮೊಹಮ್ಮದ್ ಇಮ್ರಾನ್ ಮೊಹಮ್ಮದ್ ಯೂನುಸ್ ಖಾನ್ ಮತ್ತು ಮೊಹಮ್ಮದ್ ಯೂನುಸ್ ಮೊಹಮ್ಮದ್ ಯಾಕೂಬ್ ಸಾಕಿ ಎಂಬಿಬ್ಬರು ಶಂಕಿತ ಉಗ್ರರನ್ನು ಬಂಧಿಸಿತ್ತು. ತನಿಖಾ ಸಂಸ್ಥೆಯ ಪ್ರಕಾರ ಅವರು ರಾಜಸ್ಥಾನದಲ್ಲಿ ದಾಳಿ ನಡೆಸಲು ಯೋಜಿಸುತ್ತಿದ್ದರು.
ತನಿಖೆಯ ಸಮಯದಲ್ಲಿ, ಅಧಿಕಾರಿಗಳು ಆರೋಪಿಗಳಿಂದ ಛಬಾಡ್ ಹೌಸ್ನ ಎರಡು ಗೂಗಲ್ ಚಿತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಎಟಿಎಸ್ ಮುಂಬಯಿ ಪೊಲೀಸ್ ಅಧಿಕಾರಿಗಳಿಗೆ ಫೋಟೋಗಳ ಬಗ್ಗೆ ಮಾಹಿತಿ ನೀಡಿದೆ. ತರುವಾಯ ಮುಂಬಯಿ ಪೊಲೀಸರ ದಕ್ಷಿಣ ವಲಯವು ಛಬಾಡ್ ಹೌಸ್ನ ಭದ್ರತೆಯನ್ನು ಹೆಚ್ಚಿಸಿತು. ಈ ಪ್ರದೇಶದಲ್ಲಿ ಭದ್ರತಾ ಅಣಕು ಪ್ರದರ್ಶನ ಕೂಡ ಮಾಡಲಾಗಿದೆ.
ಇದನ್ನೂ ಓದಿ : ಪಾಕ್ ಪ್ರಜೆ ಸೀಮಾ ಹೈದರ್, ಆಕೆಯ ಪ್ರಿಯಕರ ಸಚಿನ್ ಯುಪಿ ಎಟಿಎಸ್ ವಶ, ತೀವ್ರ ವಿಚಾರಣೆ
ಛಬಾಡ್ ಹೌಸ್ ಮುಂಬೈನ ಪ್ರಮುಖ ಯಹೂದಿ ಸಾಂಸ್ಕೃತಿಕ ಕೇಂದ್ರವಾಗಿದೆ. ಆಧ್ಯಾತ್ಮಿಕ ನಾಯಕನಾದ ರಬ್ಬಿ ಮತ್ತು ಅವನ ಹೆಂಡತಿ ಸ್ಥಳೀಯ ಯೆಹೂದಿ ಸಮುದಾಯಕ್ಕಾಗಿ ಮತ್ತು ಪ್ರವಾಸಿಗರಿಗಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಚಟುವಟಿಕೆಗಳು ಮತ್ತು ಸೇವೆಗಳನ್ನು ಆಯೋಜಿಸುತ್ತಾರೆ. ಈ ಕೇಂದ್ರವು ಕಲಿಕೆ ಮತ್ತು ಯಹೂದಿ ಧರ್ಮದ ಧರ್ಮದ ಬಗ್ಗೆ ಅರಿಯಲ ಅವಕಾಶ ನೀಡುತ್ತದೆ.
ಯಾರು ಈ ಉಗ್ರರು?
ಜುಲೈ 18ರ ಮುಂಜಾನೆ ಪುಣೆ ಪೊಲೀಸರು ಬೈಕ್ ಕದ್ದ ಆರೋಪದ ಮೇಲೆ ಮೊಹಮ್ಮದ್ ಇಮ್ರಾನ್ ಯೂಸುಫ್ ಖಾನ್ ಮತ್ತು ಮೊಹಮ್ಮದ್ ಯೂನುಸ್ ಮೊಹಮ್ಮದ್ ಯಾಕೂಬ್ ಸಕಿ ಎಂಬ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದರು. ಇಬ್ಬರೂ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್ಐಎ) ವಾಂಟೆಡ್ ಲಿಸ್ಟ್ನಲ್ಲಿದ್ದರು ಎಂಬುದು ಬಳಿಕ ತಿಳಿದು ಬಂದಿತ್ತು.
ಅಲ್ ಸುಫಾ ಭಯೋತ್ಪಾದಕ ಮಾಡ್ಯೂಲ್ ಅಥವಾ ಐಸಿಸ್ನ ರತ್ಲಾಮ್ ಮಾಡ್ಯೂಲ್ ಬಗ್ಗೆ ತನಿಖೆ ನಡೆಸುತ್ತಿದ್ದ ಮಹಾರಾಷ್ಟ್ರ ಎಟಿಎಸ್, ಮಧ್ಯಪ್ರದೇಶದ ರತ್ಲಾಮ್ಗೆ ಸೇರಿದ ಇಬ್ಬರು ಶಂಕಿತರನ್ನು ವಶಕ್ಕೆ ತೆಗೆದುಕೊಂಡಿದೆ ಅಲ್ ಸೂಫಾ ಮಾಡ್ಯೂಲ್ನ ಮೂರನೇ ಆರೋಪಿ, ಪುಣೆಯ ಕೊಂಡ್ವಾ ನಿವಾಸಿ ಕಟೀಲ್ ದಸ್ತಗೀರ್ ಪಠಾಣ್ ಅಲಿಯಾಸ್ ಅಬ್ದುಲ್ ಖಾದಿರ್. ಯೂಸುಫ್ ಖಾನ್ ಮತ್ತು ಯಾಕೂಬ್ ಸಕಿಗೆ ಆಶ್ರಯ ನೀಡಿದ ಆರೋಪ ಖಾದಿರ್ ಮೇಲಿದೆ. ನಾಲ್ಕನೇ ಆರೋಪಿಯನ್ನು ರತ್ನಗಿರಿಯಲ್ಲಿ ಬಂಧಿಸಲಾಗಿದೆ.
ಎಟಿಎಸ್ ಪ್ರಕಾರ, ಈ ಭಯೋತ್ಪಾದಕ ಶಂಕಿತರು ರಾಜಸ್ಥಾನದಲ್ಲಿ ದಾಳಿ ನಡೆಸಲು ಯೋಜಿಸುತ್ತಿದ್ದರು ಎನ್ನಲಾಗಿದೆ.