Site icon Vistara News

Mumbai Rain: ಮಹಾಮಳೆಗೆ ಮುಂಬೈ ತತ್ತರ; ಸೋಶಿಯಲ್‌ ಮೀಡಿಯಾದಲ್ಲಿ ಮೀಮ್ಸ್‌ ಹವಾ!

Mumbai Rain

ನವದೆಹಲಿ: ಭಾರತದ ವಾಣಿಜ್ಯ ರಾಜಧಾನಿ ಮುಂಬೈ(Mumbai rain) ಮಹಾ ನಗರ ಈ ವರ್ಷದ ಮೊದಲ ಮಳೆಗೆ(Rain) ಸಾಕ್ಷಿಯಾಗಿದೆ. ಭಾರೀ ಪ್ರಮಾಣದ ಧೂಳಿನ ಸಹಿತ ಗಾಳಿಯ ಬೀಸಿದ್ದು, ಎಲ್ಲೆಡೆ ವಿಡಿಯೋ ವೈರಲ್‌(Viral Video) ಆಗಿದೆ. ಮಧ್ಯಾಹ್ನ 3 ಗಂಟೆ ಸುಮಾರಿಗೆ ಮುಂಬೈ ಮಹಾ ನಗರದಲ್ಲಿ ಕತ್ತಲು ಆವರಿಸಿತ್ತು. ಹಲವು ತಿಂಗಳಿಂದ ಬಿಸಿಲ ಬೇಗೆಗೆ ಬೇಸತ್ತಿದ್ದ ಮುಂಬೈ ಜನರಿಗೆ ಮೊದಲ ಮಳೆ ರಿಲೀಫ್‌ ಕೊಟ್ಟಿದೆ.

ಇನ್ನು ಮಧ್ಯಾಹ್ನ 3 ಗಂಟೆ ಹೊತ್ತಿಗೇ ವಾತಾವರಣದಲ್ಲಿ ಉಂಟಾದ ದಿಢೀರ್ ಬದಲಾವಣೆ ಉಂಟಾಗಿತ್ತು. ದ್ವಿಚಕ್ರ ವಾಹನಗಳಲ್ಲಿ ಕುಳಿತು ಸಾಗುತ್ತಿದ್ದ ಜನರು ಭಾರೀ ಗಾಳಿ, ಮಳೆಯಿಂದಾಗಿ ತಮ್ಮ ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಿ ರಕ್ಷಣೆಗಾಗಿ ಅಂಗಡಿ ಮುಂಗಟ್ಟುಗಳತ್ತ ಓಡಿದರು. ಮುಂಬೈ ನಗರದ ಘಾಟ್‌ಕೋಪರ್, ಬಾಂದ್ರಾ, ಕುರ್ಲಾ, ಧಾರಾವಿ ಪ್ರದೇಶಗಳಲ್ಲಿ ಭಾರೀ ಮಳೆ ಆಗಿದೆ. ಕ್ಷಣಾರ್ಧದಲ್ಲಿ ಸಂಚಾರದಲ್ಲಿ ಭಾರೀ ಅವ್ಯವಸ್ಥೆ ಉಂಟಾಗಿತ್ತು. ಮುಂಬೈ ನಗರ ಮಾತ್ರವಲ್ಲ, ಮಹಾರಾಷ್ಟ್ರ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಹಾಗೂ ಬಿರುಗಾಳಿಯ ಮುನ್ನೆಚ್ಚರಿಕೆ ನೀಡಲಾಗಿದೆ. ಥಾಣೆ, ಪಾಲ್‌ಘರ್, ರಾಯ್‌ಗಢ ಸೇರಿದಂತೆ ಹಲವೆಡೆ ಭಾರೀ ಮಳೆ ಮುನ್ನೆಚ್ಚರಿಕೆ ನೀಡಲಾಗಿದೆ.

ವಿಮಾನ ಸಂಚಾರದಲ್ಲಿ ವ್ಯತ್ಯಯ

ಮುಂಬೈ ವಿಮಾನ ನಿಲ್ದಾಣಗಳಲ್ಲಿ ವಿಮಾನಗಳ ಲ್ಯಾಂಡಿಂಗ್ ಹಾಗೂ ಟೇಕಾಫ್‌ಗೆ ಭಾರೀ ಅಡ್ಡಿ ಉಂಟಾಗಿದೆ. ದೇಶದ ಅತ್ಯಂತ ಹೆಚ್ಚು ಚಟುವಟಿಕೆಯಿಂದ ಕೂಡಿರುವ ಈ ವಿಮಾನ ನಿಲ್ದಾಣದಲ್ಲಿ ವಿಮಾನಯಾನವನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಯ್ತು. ಮುಂಬೈ ಮಹಾ ನಗರಕ್ಕೆ ಆಗಮಿಸುವ ಹಾಗೂ ನಿರ್ಗಮಿಸುವ ವಿಮಾನಗಳ ಸಂಚಾರದಲ್ಲಿ ಭಾರೀ ವ್ಯತ್ಯಯ ಉಂಟಾಗಿದೆ.

ಸೋಶಿಯಲ್‌ ಮೀಡಿಯಾಗಳಲ್ಲಿ ಮೀಮ್ಸ್‌ ಹವಾ

ಇನ್ನು ಈ ಭಾರೀ ಗಾಳಿಮಳೆಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಮೀಮ್ಸ್‌ ಆಗಿ ಹರಿದಾಡುತ್ತಿದೆ. ಮುಂಬೈನಲ್ಲಿ ಅಪರೂಪದ ದೃಶ್ಯ ಎಂದು ನೆಟ್ಟಿಗರು ಹೊಗಳಿದ್ದಾರೆ. ಹಾಲಿವುಡ್‌ ಬ್ಲಾಕ್‌ ಬ್ಲಾಸ್ಟರ್‌ ಸಿನಿಮಾಗಳಿಗಿಂತ ಇದು ಕಡಿಮೆ ಇಲ್ಲ ಎಂದು ಬಣ್ಣಿಸಿದ್ದಾರೆ.

ಇದನ್ನೂ ಓದಿ: Gold Heist Case: ಬಹುಕೋಟಿ ಚಿನ್ನ, ವಿದೇಶಿ ಕರೆನ್ಸಿ ದರೋಡೆ; ಭಾರತೀಯ ಮೂಲದ ವ್ಯಕ್ತಿ ಲಾಕ್‌!

Exit mobile version