Site icon Vistara News

Mumbai Satta Bazar: ಮೋದಿ ಹ್ಯಾಟ್ರಿಕ್‌ ಗ್ಯಾರಂಟಿ ಎಂದ ಮುಂಬೈ ಸಟ್ಟಾ ಬಜಾರ್;‌ ಕಾಂಗ್ರೆಸ್‌ಗೆ ಎಷ್ಟು ಕ್ಷೇತ್ರ?

Mumbai Satta Bazar

Mumbai Satta Bazar predicts BJP to win 295-305 seats Lok Sabha Election

ಮುಂಬೈ: ಲೋಕಸಭೆ ಚುನಾವಣೆಯ (Lok Sabha Election 2024) 7ನೇ ಅಥವಾ ಕೊನೆಯ ಹಂತದ ಮತದಾನವು ಜೂನ್‌ 1ರಂದು ನಡೆಯಲಿದ್ದು, ಜೂನ್‌ 4ರಂದು ಫಲಿತಾಂಶ ಪ್ರಕಟವಾಗಿದೆ. ಹಾಗಾಗಿ, ಎಲ್ಲರ ಗಮನವೀಗ ಚುನಾವಣೆ ಫಲಿತಾಂಶದ ಮೇಲಿದೆ. ಇದರ ಮಧ್ಯೆಯೇ, ಲೋಕಸಭೆ ಚುನಾವಣೆ ಫಲಿತಾಂಶದ ಕುರಿತು ಮುಂಬೈ ಸಟ್ಟಾ ಬಜಾರ್‌ (Mumbai Satta Bazar) ವರದಿ ಪ್ರಕಟಿಸಿದ್ದು, ನರೇಂದ್ರ ಮೋದಿ (Narendra Modi) ಅವರು ಹ್ಯಾಟ್ರಿಕ್‌ ಬಾರಿಸುವುದು ನಿಶ್ಚಿತ ಎಂದು ತಿಳಿಸಿದೆ.

ಮುಂಬೈ ಸಟ್ಟಾ ಬಜಾರ್‌ ವರದಿ ಪ್ರಕಾರ, ಚುನಾವಣೆಯಲ್ಲಿ ಬಿಜೆಪಿಯು 295-305 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ತಿಳಿದುಬಂದಿದೆ. ಕಾಂಗ್ರೆಸ್‌ ಈ ಬಾರಿ 55-65 ಕ್ಷೇತ್ರಗಳಲ್ಲಿ ಮಾತ್ರ ಜಯಿಸಲಿದೆ. ಇನ್ನು, ರಾಮಮಂದಿರ ಕಾರಣದಿಂದ ಬಿಜೆಪಿಗೆ ಪ್ರಮುಖವಾಗಿರುವ ಉತ್ತರ ಪ್ರದೇಶದಲ್ಲಿ ಬಿಜೆಪಿಗೆ 64-66 ಕ್ಷೇತ್ರಗಳು ಲಭಿಸಲಿವೆ ಎಂದು ವರದಿ ತಿಳಿಸಿದೆ. ಇದಕ್ಕೂ ಮೊದಲು ಮುಂಬೈ ಸಟ್ಟಾ ಬಜಾರ್‌ ಸಮೀಕ್ಷೆಯು ಬಿಜೆಪಿ 270-280 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದಿದ್ದರೆ, ಕಾಂಗ್ರೆಸ್‌ 70-80 ಕ್ಷೇತ್ರಗಳಲ್ಲಿ ಜಯಿಸಲಿದೆ ಎಂದು ತಿಳಿಸಿತ್ತು.

ಫಲೋಡಿ ಸಟ್ಟಾ ಬಜಾರ್‌ ವರದಿ ಇಲ್ಲಿದೆ

ಫಲೋಡಿ ಸಟ್ಟಾ ಬಜಾರ್‌ ಕೂಡ ಲೋಕಸಭೆ ಚುನಾವಣೆ ಕುರಿತು ಹಲವು ಸಮೀಕ್ಷೆ ವರದಿಗಳನ್ನು ನೀಡಿದೆ. ಬಿಜೆಪಿಯೊಂದೇ 304-306 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಇನ್ನು ಎನ್‌ಡಿಎ ಮೈತ್ರಿಕೂಟವು ಸುಲಭವಾಗಿ 325-330 ಕ್ಷೇತ್ರಗಳಲ್ಲಿ ಜಯಿಸಲಿದೆ. ಮತ್ತೊಂದೆಡೆ ಕಾಂಗ್ರೆಸ್‌ ಪಕ್ಷವು 60-62 ಕ್ಷೇತ್ರಗಳಲ್ಲಿ ಜಯಿಸಲಿದೆ ಎಂಬುದಾಗಿ ಸಮೀಕ್ಷಾ ವರದಿ ತಿಳಿಸಿದೆ. ಹಾಗಾಗಿ, ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರವೇ ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಬರಲಿದೆ ಎಂಬುದು ವರದಿಯ ಸಾರಾಂಶವಾಗಿದೆ.

ರಾಮಮಂದಿರ ಕೇಂದ್ರ ಬಿಂದುವಾಗಿರುವ ಉತ್ತರ ಪ್ರದೇಶದಲ್ಲಿ ಬಿಜೆಪಿಗೆ 63-65 ಕ್ಷೇತ್ರಗಳು ಲಭಿಸಲಿವೆ ಎಂಬುದಾಗಿ ಸಮೀಕ್ಷೆ ತಿಳಿಸಿದೆ. ಇನ್ನು, ಗುಜರಾತ್‌ 25, ಮಧ್ಯಪ್ರದೇಶ 28-29, ದೆಹಲಿ 5-6, ಪಂಜಾಬ್‌ 2-3, ಹಿಮಾಚಲ ಪ್ರದೇಶ 4, ಛತ್ತೀಸ್‌ಗಢ 10-11, ಉತ್ತರಾಖಂಡ 5, ಬಿಹಾರ 28-29, ತೆಲಂಗಾಣ 8-9, ಜಾರ್ಖಂಡ್‌ 10-11 ಸೀಟುಗಳಲ್ಲಿ ಗೆಲುವು ಸಾಧಿಸಲಿದೆ ಎಂದು ತಿಳಿದುಬಂದಿದೆ. ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ಬಿಜೆಪಿಗೆ ಕಳೆದ ಬಾರಿಗಿಂತ ಹೆಚ್ಚಿನ ಕ್ಷೇತ್ರಗಳು ಬರಲಿವೆ. ಬಿಹಾರ, ಹರಿಯಾಣ, ಮಹಾರಾಷ್ಟ್ರ ಹಾಗೂ ರಾಜಸ್ಥಾನದಲ್ಲಿ ಬಿಜೆಪಿಯ ಸ್ಥಾನಗಳು ಕಡಿಮೆಯಾಗಲಿವೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ: Narendra Modi: ಲೋಕಸಭಾ ಚುನಾವಣೆ ಫಲಿತಾಂಶದ 6 ತಿಂಗಳ ಬಳಿಕ ‘ರಾಜಕೀಯ ಭೂಕಂಪ’; ಮೋದಿನ ಮಾತಿನ ಮರ್ಮವೇನು?

Exit mobile version