ಮುಂಬೈ: ಮುಂಬೈನ ಯುಟ್ಯೂಬರ್ (Mumbai YouTuber) ಒಬ್ಬರ ನಗ್ನ ವಿಡಿಯೋಗಳನ್ನು (Nude Video) ಸಾಮಾಜಿಕ ಜಾಲತಾಣಗಳಲ್ಲಿ (Social Media) ಹರಿಬಿಡಲಾಗಿದ್ದು, ಈ ಕುರಿತು ಅವರು ಪೊಲೀಸರಿಗೆ ದೂರು ನೀಡಿದ್ದಾರೆ(Case Registered). 21 ವರ್ಷದ ಬಾಂದ್ರಾದ ಯುಟ್ಯೂಬರ್, ಮಲಗುವ ಕೋಣೆಯಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾ (CCTV Camera hack) ಹ್ಯಾಕ್ ಮಾಡಿ, ತನ್ನ ನಗ್ನ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ ಎಂದು ಅವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ನವೆಂಬರ್ 17 ರಂದು ಯಾರೋ ಅಕ್ರಮವಾಗಿ ಯುಟ್ಯೂಬರ್‌ನ ಸಿಸಿಟಿವಿ ಕ್ಯಾಮೆರಾಗಳನ್ನು ಹ್ಯಾಕ್ ಮಾಡಿದ್ದಾರೆ. ಆದರೆ, ವಿಡಿಯೋ ವೈರಲ್ ಆದ ಬಳಿಕ ಡಿಸೆಂಬರ್ 9 ರಂದು ಘಟನೆ ಬೆಳಕಿಗೆ ಬಂದಿದೆ. ಭಾರತೀಯ ದಂಡ ಸಂಹಿತೆ (IPC) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿದೆ ಎಂದು ಮುಂಬೈನ ಬಾಂದ್ರಾ ಪೊಲೀಸರು ತಿಳಿಸಿದ್ದಾರೆ.
ಸುರಕ್ಷತೆಯ ಉದ್ದೇಶಕ್ಕಾಗಿ ಮನೆಯೊಳಗೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದು, ಒಂದು ಕ್ಯಾಮೆರಾ ತನ್ನ ಮಲಗುವ ಕೋಣೆಯಲ್ಲಿದೆ ಎಂದು ಯೂಟ್ಯೂಬರ್ ತನ್ನ ದೂರಿನಲ್ಲಿ ತಿಳಿಸಿದ್ದಾರೆ. ಡಿಸೆಂಬರ್ 9 ರಂದು, ಸ್ನೇಹಿತರೊಬ್ಬರು ಕರೆ ಮಾಡಿ, ಅವರು ಬಟ್ಟೆ ಬದಲಾಯಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ ಎಂದು ಹೇಳಿದರೆಂದು ಯುಟ್ಯೂಬರ್ ಹೇಳಿದರು. ನವೆಂಬರ್ 17 ರಂದು ಅವರು ವೀಡಿಯೊವನ್ನು ಪರಿಶೀಲಿಸಿದಾಗ, ಕ್ಲಿಪ್ ತನ್ನ ಕೋಣೆಯಲ್ಲಿದ್ದ ಕ್ಯಾಮೆರಾದಿಂದ ಬಂದದ್ದು ಎಂದು ಅವರು ಖಾತ್ರಿಪಡಿಸಿಕೊಂಡರು ಎಂದು ಪೊಲೀಸರು ತಿಳಿಸಿದ್ದಾರೆ.
ಯುಟ್ಯೂಬರ್ ಅವರ ಸ್ನೇಹಿತರು ಮತ್ತು ಪರಿಚಿತರು ಫೋನ್ ಮಾಡಿ, ನಗ್ನ ವಿಡಿಯೋ ಬಗ್ಗೆ ತಿಳಿಸಲಾರಂಭಿಸಿದರು. ಬೆತ್ತಲೆಯ ಈ ವಿಡಿಯೋ ಕ್ಲಿಪ್ ಅನ್ನು ಎಲ್ಲ ರೀತಿಯ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗಿ, ವೈರಲ್ ಆಗಿದೆ ಎಂದು ಪೊಲೀಸ್ ಅಧಿಕಾರಿಯು ತಿಳಿಸಿದ್ದಾರೆ.
ಯುಟ್ಯೂಬರ್ ತಮ್ಮ ಕೋಣೆಯಲ್ಲಿ ಅಳವಡಿಸಿರುವ ಸಿಸಿಟಿವಿಯಿಂದಲೇ ವಿಡಿಯೋ ಕ್ಲಿಪ್ ಪಡೆದಿರುವುದು ಖಚಿತವಾಗಿದೆ. ಇದಕ್ಕಾಗಿ ಅವರ ಸಿಸಿಟಿವಿ ಕ್ಯಾಮೆರಾವನ್ನು ಹ್ಯಾಕ್ ಮಾಡಲಾಗಿದೆ. ಈ ಪ್ರಕರಣದ ಕುರಿತು ವಿಚಾರಣೆ ನಡೆಸುತ್ತಿದ್ದ, ಎಲ್ಲ ರೀತಿಯ ಆಯಾಮಗಳಿಂದಲೂ ತನಿಖೆ ಮಾಡಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Blackmail Case: ಬೆತ್ತಲೆ ವಿಡಿಯೊ ಕಾಲ್ ಮಾಡಿ ಬ್ಲ್ಯಾಕ್‌ಮೇಲ್; ಪೊಲೀಸರ ಮೊರೆ ಹೋದ ವೈದ್ಯ