Site icon Vistara News

Irani Bakery | 100 ವರ್ಷ ಹಳೆಯ ಮತ್ತು ನಟ ರಾಜೇಶ್ ಖನ್ನಾ ನೆಚ್ಚಿನ ಇರಾನಿ ಬೇಕರಿ ಸ್ಥಗಿತ

Irani Bekery

ಮುಂಬೈ: ಮುಂಬೈ (Mumabi) ಮಹಾನಗರಿಯ ಲ್ಯಾಂಡ್‌ಮಾರ್ಕ್ ಆಗಿದ್ದ 100 ವರ್ಷ ಹಳೆಯ ಸನ್‌ಶೈನ್ ಬೇಕರಿ ಬಾಗಿಲು ಹಾಕಲಿದೆ. ಈ ಇರಾನಿ ಬೇಕರಿಗೆ(Irani Bakery) ಸೂಪರ್ ಸ್ಟಾರ್ ರಾಜೇಶ್ ಖನ್ನಾ (Rajesh Khanna) ಪದೇ ಪದೇ ಭೇಟಿ ನೀಡುತ್ತಿದ್ದರು. ಮತ್ತೊಬ್ಬ ನಟ ಪದೀಪ್ ಪಟವರ್ಧನ್ ಮತ್ತು ರಾಜಕಾರಣಿ ಪ್ರಮೋದ್ ನಾವಳ್ಕರ್ ಅವರ ಕಾಯಂ ಅಡ್ಡಾ ಆಗಿತ್ತು ಈ ಬೇಕರಿ. 120 ವರ್ಷಗಳಷ್ಟು ಹಳೆಯದಾದ ಎಚ್‌ಎಂ ಪೆಟಿಟ್ ವಿಂಡೋಸ್ ಹೋಮ್ ಬಿಲ್ಡಿಂಗ್‌ನಲ್ಲಿದ್ದ ಈ ಬೇಕರಿ ಇನ್ನು ಇತಿಹಾಸ ಸೇರಲಿದೆ. ಕಾರಣವಿಷ್ಟೇ, ಈ ಬಿಲ್ಡಿಂಗ್ ಅನ್ನು ಬೃಹತ್ ಮುಂಬೈ ಮಹಾನಗರಿ ಪಾಲಿಕೆ(ಬಿಎಂಸಿ) ಒಡೆದು ಹಾಕಲಿದೆ. ಹಾಗಾಗಿ, ನವೆಂಬರ್ 30ರಿಂದ ಇರಾನಿ ಬೇಕರಿ ಕಾರ್ಯನಿರ್ವಹಿಸುವುದಿಲ್ಲ. ಬೇಕರಿಯ ಮಾಲೀಕರಿಗೆ ಪರ್ಯಾಯ ಜಾಗ ಕೂಡ ಸಿಕ್ಕಿಲ್ಲ.

ಇರಾನಿ ಸನ್‌ಶೈನ್ ಬೇಕರಿ, ರೆಸ್ಟೋರೆಂಟ್ ಮತ್ತು ಬಿಯರ್ ಬಾರ್ ಇದ್ದ ಎಚ್‌ಎಂ ಪೆಟಿಟ್ ಬಿಲ್ಡಿಂಗ್ ತುಂಬ ಹಳೆಯದಾಗಿದ್ದು, ವಾಸಿಸಲು ಅಪಾಯಕಾರಿಯಾಗಿದೆ ಎಂಬ ಕಾರಣಕ್ಕೆ ಬಿಎಂಸಿ ಈ ಕಟ್ಟಡವನ್ನು ನೆಲಸಮ ಮಾಡಲು ಮುಂದಾಗಿದೆ. ಈ ಬಿಲ್ಡಿಂಗ್ ಒಟ್ಟು ನಾಲ್ಕು ಅಂತಸ್ತು ಹೊಂದಿದ್ದು, ಮೇಲಿನ ಮೂರು ಅಂತಸ್ತುಗಳಲ್ಲಿ ಕುಟುಂಬಗಳು ವಾಸಿಸುತ್ತಿದ್ದವು. ಅವುಗಳನ್ನು ಖಾಲಿ ಮಾಡಲಾಗಿದೆ. ಗ್ರೌಂಡ್‌ ಫ್ಲೋರ್‌ನಲ್ಲಿ ಸನ್‌ಶೈನ್ ಬೇಕರಿ ಸೇರಿದಂತೆ 7 ಅಂಗಡಿಗಳಿದ್ದವು. ಅವುಗಳನ್ನು ಈಗ ಖಾಲಿ ಮಾಡಿಸಲಾಗುತ್ತಿದೆ.

ಈ ಬಿಲ್ಡಿಂಗ್ ನೆಲಸಮ ಮಾಡಬಾರದು ಎಂದು ಆಗ್ರಹಿಸಿ, ಇಲ್ಲಿನ ಜನರು ಕೋರ್ಟ್ ಮೊರೆ ಹೋಗಿದ್ದರು. ಆದರೆ, ಸ್ಥಳೀಯ ಕೋರ್ಟ್ ಬಿಎಂಸಿ ಪರವಾಗಿ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟಿಗೆ ಹೋದರೂ ಯಾವುದೇ ಪ್ರಯೋಜನವಾಗಿಲ್ಲ. ಅಂತಿಮವಾಗಿ ಬಿಎಂಸಿ ಈ ಬಿಲ್ಡಿಂಗ್ ಒಡೆದು ಹಾಕಲಿದ್ದು, ಲಾಂಡ್‌ಮಾರ್ಕ್ ಆಗಿದ್ದ ಸನ್‌ಶೈನ್ ಬೇಕರಿ ಇನ್ನು ಕಣ್ಮರೆಯಾಗಲಿದೆ.

ಇದನ್ನೂ ಓದಿ | Hotel Chalukya |‌ 45 ವರ್ಷದ ರುಚಿಗೆ ವಿದಾಯ, ಶೀಘ್ರವೇ ಇತಿಹಾಸ ಸೇರಲಿದೆ ಬೆಂಗಳೂರಿನ ಚಾಲುಕ್ಯ ಹೋಟೆಲ್!

Exit mobile version