Site icon Vistara News

Munnar Tour: ಪ್ರಕೃತಿಯ ನಡುವೆ ಅವಿತಿರುವ ಸೌಂದರ್ಯದ ಗಣಿ ಮುನ್ನಾರ್! ಜೀವನದಲ್ಲಿ ಒಮ್ಮೆಯಾದರೂ ನೋಡಲೇಬೇಕು

Munnar Tour

ಪ್ರಕೃತಿಯ ನಡುವೆ ಕಾಲ ಕಳೆಯುವುದು ಯಾರಿಗೆ ಇಷ್ಟವಿಲ್ಲ? ಕಚೇರಿ ಕೆಲಸದ ಜಂಜಾಟವನ್ನು ಬಿಟ್ಟು, ನಿತ್ಯದ ಓಡಾಟಕ್ಕೆ ಬ್ರೇಕ್ ಹಾಕಿ ಕೊಂಚ ಹೊತ್ತು ಪ್ರಕೃತಿಯ ಮಡಿಲಲ್ಲಿ ಹಾಯಾಗಿ ಕಳೆಯಬೇಕು ಎಂದರೆ ಭಾರತದ (india) ದಕ್ಷಿಣದ (south) ಕೇರಳ (kerala) ರಾಜ್ಯದಲ್ಲಿ ನೆಲೆಗೊಂಡಿರುವ ಪಶ್ಚಿಮ ಘಟ್ಟಗಳ (Western Ghats) ಕಾಡುಗಳಲ್ಲಿ ಅಡಗಿರುವ ಮುನ್ನಾರ್ ಗೆ (Munnar Tour) ಭೇಟಿ ನೀಡಬಹುದು.

ಚಹಾ ತೋಟಗಳಿಗೆ ಪ್ರಸಿದ್ಧವಾಗಿರುವ ಬೆಟ್ಟ, ಮಂಜು ಮತ್ತು ತಂಪಾದ ವಾತಾವರಣದಿಂದ ಮುಚ್ಚಲ್ಪಟ್ಟಿರುವ ಮುನ್ನಾರ್ ನಗರದಿಂದ ದೂರವಾಗಿ ಮನಸ್ಸಿನ ಶಾಂತಿಯನ್ನು ಹುಡುಕುವವರಿಗೆ ಆಕರ್ಷಕ ತಾಣವಾಗಿದೆ.
ಮುನ್ನಾರ್‌ಗೆ ಭೇಟಿ ನೀಡಿದರೆ ನಿಮ್ಮೊಳಗಿನ ಚೈತನ್ಯವು ಪುನರುಜ್ಜೀವನಗೊಳ್ಳುವುದು ಎಂಬುದರಲ್ಲಿ ಸಂದೇಹವಿಲ್ಲ. ಮುನ್ನಾರ್ ಸುತ್ತಮುತ್ತ ಅನೇಕ ತಾಣಗಳಿವೆ. ವಾರಾಂತ್ಯದ ಪ್ರವಾಸದ ವೇಳೆ ಇಲ್ಲಿಗೆ ಭೇಟಿ ನೀಡುವುದನ್ನು ತಪ್ಪಿಸಿಕೊಳ್ಳಬೇಡಿ.


ಮರಯೂರು

ಮುನ್ನಾರ್‌ನಿಂದ ಕೆಲವು ಕಿಲೋ ಮೀಟರ್‌ಗಳಷ್ಟು ದೂರದಲ್ಲಿರುವ ಮರಯೂರ್ ಕಬ್ಬಿನ ಎಸ್ಟೇಟ್‌ಗಳು, ಶ್ರೀಗಂಧದ ಕಾಡುಗಳು ಮತ್ತು ಇತಿಹಾಸಪೂರ್ವ ಡಾಲ್ಮೆನ್‌ಗಳಿಗೆ ಹೆಸರುವಾಸಿಯಾದ ಸಣ್ಣ ಪಟ್ಟಣವಾಗಿದೆ. ನೈಸರ್ಗಿಕ ಅದ್ಭುತಗಳನ್ನು ಒಳಗೊಂಡಿರುವ ಮರಯೂರಿನಲ್ಲಿ ಸಂದರ್ಶಕರು ಬಿಡುವಿನ ವೇಳೆಯಲ್ಲಿ ಕಬ್ಬಿನ ಗದ್ದೆಗಳ ಉದ್ದಕ್ಕೂ ನಡೆಯಬಹುದು. ಶಿಲಾಯುಗದ ಪ್ರಾಚೀನ ಡಾಲ್ಮೆನ್‌ಗಳನ್ನು ಅನ್ವೇಷಿಸಲು ಅಥವಾ ಹತ್ತಿರದಲ್ಲಿರುವ ತೂವನಂ ಜಲಪಾತಗಳಿಗೆ ಭೇಟಿ ನೀಡಬಹುದು. ಅವುಗಳು ತಮ್ಮ ಸುತ್ತಲೂ ಅದ್ಭುತವಾದ ನೈಸರ್ಗಿಕ ಸೌಂದರ್ಯವನ್ನು ಹೊಂದಿವೆ. ಎಲ್ಲಕ್ಕಿಂತ ಮುಖ್ಯವಾಗಿ ಬೆಲ್ಲ ಮಾಡುವುದು ಮರಯೂರಿನ ವಿಶೇಷತೆಗಳಲ್ಲಿ ಒಂದಾಗಿದೆ.


ದೇವಿಕುಲಂ

ಮುನ್ನಾರ್‌ನಿಂದ 7 ಕಿಲೋಮೀಟರ್‌ಗಳಷ್ಟು ದೂರದಲ್ಲಿರುವ ದೇವಿಕುಲಂ ಒಂದು ಸುಂದರವಾದ ರೆಸಾರ್ಟ್ . ಇಲ್ಲಿ ಪ್ರಕೃತಿಯು ತನ್ನ ಎಲ್ಲಾ ಸೌಂದರ್ಯವನ್ನು ಹಚ್ಚ ಹಸಿರಿನ ಕಣಿವೆಗಳು ಮತ್ತು ಮೌನವಾದ ಸರೋವರಗಳೊಂದಿಗೆ ಬಾಚಿ ಕೊಟ್ಟಿದೆ. ದೇವಿಕುಲಂ ಸರೋವರದಲ್ಲಿ ಶಾಂತವಾದ ದೋಣಿ ವಿಹಾರವನ್ನು ಆನಂದಿಸಬಹುದು. ಚಹಾ ತೋಟಗಳೊಂದಿಗೆ ರೋಲಿಂಗ್ ಬೆಟ್ಟಗಳಿಂದ ಆವೃತವಾಗಿದೆ.

ಸೀತಾದೇವಿ ಸರೋವರವು ಹೆಚ್ಚು ದೂರದಲ್ಲಿಲ್ಲ. ಇದು ಸಮೃದ್ಧ ಖನಿಜಾಂಶದ ಕಾರಣದಿಂದಾಗಿ ಔಷಧೀಯ ಪ್ರಯೋಜನಗಳನ್ನು ಹೊಂದಿದೆ ಎನ್ನಲಾಗುತ್ತದೆ. ಸಾಹಸಿ ಪ್ರವಾಸಿಗರು ಹೇರಳವಾದ ವನ್ಯಜೀವಿಗಳಿಂದ ತುಂಬಿರುವ ಕಾಡುಗಳ ಮೂಲಕ ಟ್ರೆಕ್ಕಿಂಗ್ ಹೋಗಬಹುದು. ಜೊತೆಗೆ ರಾಕ್ ಕ್ಲೈಂಬಿಂಗ್ ಚಟುವಟಿಕೆಗಳಲ್ಲಿ ತೊಡಗಬಹುದು.


ಚಿನ್ನಕನಲ್

ಮುನ್ನಾರ್‌ನಿಂದ ಸುಮಾರು 20 ಕಿಲೋಮೀಟರ್ ದೂರದಲ್ಲಿರುವ ಚಿನ್ನಕನಲ್ ಮಂಜಿನ ಬೆಟ್ಟಗಳ ನಡುವೆ ಇರುವ ಸುಂದರವಾದ ಹಳ್ಳಿಯಾಗಿದೆ. ಧುಮ್ಮಿಕ್ಕುವ ಜಲಪಾತಗಳು, ಸಾಂಬಾರ ತೋಟಗಳು ಮತ್ತು ಪಶ್ಚಿಮ ಘಟ್ಟಗಳ ರಮಣೀಯ ನೋಟವು ಚಿನ್ನಕನಾಲ್ ಅನ್ನು ಶಾಂತಿಯನ್ನು ಬಯಸುವವರಿಗೆ ಸ್ವರ್ಗವನ್ನಾಗಿ ಮಾಡುತ್ತದೆ. ಈ ಸ್ಥಳದ ಒಂದು ಆಕರ್ಷಣೆಯೆಂದರೆ ಅಟ್ಟುಕಲ್ ಜಲಪಾತಗಳು. ಇದು ಪ್ರಕೃತಿಯೊಂದಿಗೆ ಭವ್ಯವಾಗಿ ಬೆರೆತುಹೋಗಿದೆ. ವಿಶಾಲವಾಗಿ ಹರಡಿರುವ ಟೀ ಎಸ್ಟೇಟ್‌ಗಳು ಮತ್ತು ಮಸಾಲೆ ತೋಟಗಳು ಇಲ್ಲಿನ ಆಕರ್ಷಣೆಯಾಗಿದೆ.


ಆನಮುಡಿ ಶಿಖರ

ರೋಮಾಂಚನವನ್ನು ಬಯಸುವ ಸಾಹಸಪ್ರಿಯರಿಗೆ ಆನಮುಡಿ ಶಿಖರವನ್ನು ಹತ್ತುವುದು ಮುನ್ನಾರ್‌ನಲ್ಲಿನ ನಡೆಸಬಹುದಾದ ಚಟುವಟಿಕೆಗಳ ಪಟ್ಟಿಯ ಮೇಲ್ಭಾಗದಲ್ಲಿರಬೇಕು. ಆನಮುಡಿಯು ದಕ್ಷಿಣ ಭಾರತದ ಅತ್ಯುನ್ನತ ಶಿಖರವೆಂಬ ಬಿರುದನ್ನು ಪಡೆದ ಕಾರಣ, ಅದರ ಎತ್ತರದ ಮೇಲ್ಭಾಗದ ನೋಟವು ಅದರ ಸುತ್ತಲಿನ ವಿವಿಧ ಕಣಿವೆಗಳು, ಕಾಡುಗಳು ಮತ್ತು ತೊರೆಗಳನ್ನು ಬಹಿರಂಗಪಡಿಸುತ್ತದೆ. ಅಲ್ಲಿಗೆ ಚಾರಣ ಮಾಡುವುದು ದುರ್ಬಲ ಹೃದಯದ ಜನರಿಗೆ ಸಾಧ್ಯವಿಲ್ಲ. ಪರ್ವತಾರೋಹಿಗಳು ಇಲ್ಲಿ ಮಾತ್ರ ಕಂಡುಬರುವ ಸ್ಥಳೀಯ ಪ್ರಭೇದಗಳಾದ ನೀಲಗಿರಿ ತಾಹ್ರ್ ಸೇರಿದಂತೆ ವಿವಿಧ ರೀತಿಯ ಸಸ್ಯಗಳು ಮತ್ತು ಪ್ರಾಣಿಗಳನ್ನು ಕಾಣಬಹುದು.


ಟಾಪ್ ಸ್ಟೇಷನ್

ಟಾಪ್ ಸ್ಟೇಷನ್ ಮುನ್ನಾರ್ ನಿಂದ ಸುಮಾರು 32 ಕಿಲೋಮೀಟರ್ ದೂರದಲ್ಲಿರುವ ಒಂದು ಸುಂದರವಾದ ವ್ಯೂ ಪಾಯಿಂಟ್. ಸಮುದ್ರ ಮಟ್ಟದಿಂದ ಸರಿಸುಮಾರು 1,700 ಮೀಟರ್ ಎತ್ತರದಲ್ಲಿದೆ.

ಇದನ್ನೂ ಓದಿ: Best Tourist Places In Tamilnadu: ಈ ಸುಂದರ ದೇವಾಲಯಗಳ ದರ್ಶನಕ್ಕಾದರೂ ತಮಿಳುನಾಡಿಗೆ ಹೋಗಲೇಬೇಕು!

ಈ ಸ್ಥಳವು ನಿಸರ್ಗ ಮತ್ತು ಛಾಯಾಗ್ರಹಣವನ್ನು ಇಷ್ಟಪಡುವ ಜನರಿಗೆ ಬಹಳ ಪ್ರಿಯವಾಗುವುದು. ಇಲ್ಲಿಂದ ಪಶ್ಚಿಮ ಘಟ್ಟಗಳ ವಿಹಂಗಮ ನೋಟಗಳನ್ನು ಆನಂದಿಸಬಹುದು. ಅವುಗಳ ವಿಶಾಲತೆ ಮತ್ತು ತಮಿಳುನಾಡಿನ ಬಯಲು ಪ್ರದೇಶಗಳನ್ನು ಕಾಣಬಹುದು. ಈ ವ್ಯೂಪಾಯಿಂಟ್‌ನ ಹೆಸರು ಹಳೆಯ ರೋಪ್‌ವೇ ನಿಲ್ದಾಣದಿಂದ ಹುಟ್ಟಿಕೊಂಡಿದೆ. ಇದನ್ನು ಮುನ್ನಾರ್‌ನಿಂದ ಕೆಳಗಿನ ತಗ್ಗು ಪ್ರದೇಶಗಳಿಗೆ ಚಹಾವನ್ನು ಸಾಗಿಸಲು ಬಳಸಲಾಗುತ್ತಿತ್ತು. ಹತ್ತಿರದ ಅಂಗಡಿಗಳಿಂದ ಬಿಸಿ ಬಿಸಿ ಚಹಾದ ಸವಿಯನ್ನು ಸವಿಯಬಹುದು.

Exit mobile version