Site icon Vistara News

Murder Case: ಟ್ಯೂಷನ್‌ನಿಂದ ಬರುತ್ತಿದ್ದ ಹುಡುಗಿಗೆ ಗುಂಡು ಹೊಡೆದು ಕೊಂದ ಪಾಗಲ್ ಪ್ರೇಮಿ

Love and Murder, Girl Shot dead by her jilted lover in Patna

ಪಾಟ್ನಾ: ಪ್ರೀತಿಸಲು ನಿರಾಕರಿಸಿದ 16 ವರ್ಷದ ಹುಡುಗಿಯನ್ನು (Girl Shot dead by her jilted lover) ಯುವಕನೊಬ್ಬ ಗುಂಡು ಹೊಡೆದು ಕೊಂದ (Murder Case) ಘಟನೆ ಸೋಮವಾರ ಬೆಳಗ್ಗೆ ಬಿಹಾರದ ಗ್ರಾಮೀಣ ಪಾಟ್ನಾದಲ್ಲಿ (Patna Rural) ನಡೆದಿದೆ. ಫಲಿಸದ ಪ್ರೇಮವೇ ಈ ಘಟನೆಗೆ ಕಾರಣ ಎಂದು ಪಾಟ್ನಾ ಗ್ರಾಮೀಣ ಪೊಲೀಸರು (Patna Police) ಅಭಿಪ್ರಾಯಪಟ್ಟಿದ್ದಾರೆ. ಈ ಇಡೀ ಅಪರಾಧದ ವಿಡಿಯೋ ಸಿಸಿಟಿವಿಯಲ್ಲಿ ದಾಖಲಾಗಿದ್ದು, ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ(viral Video).

ಮೃತಳನ್ನು 12ನೇ ತರಗತಿ ವಿದ್ಯಾರ್ಥಿನಿ ಅನಾಮಿಕಾ ಕುಮಾರಿ ಎಂದು ಗುರುತಿಸಲಾಗಿದೆ. ಅವಳು ತನ್ನ ತಾಯಿಯ ಅಜ್ಜಿಯೊಂದಿಗೆ ಮಸೌರ್ಹಿಯ ಕಾಜಿಚಕ್ ಗ್ರಾಮದಲ್ಲಿ ವಾಸಿಸುತ್ತಿದ್ದಳು. ಅನಾಮಿಕಾ ಕುಮಾರಿಯನ್ನು ಆರೋಪಿ ಪ್ರೇಮಿಸುತ್ತಿದ್ದ. ಆದರೆ, ಹುಡುಗಿಗೆ ಇಷ್ಟವಿರಲ್ಲ. ಆಕೆ ಪ್ರೀತಿಯನ್ನು ನಿರಾಕರಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಬೆಳಗ್ಗೆ 8 ಗಂಟೆ ಸುಮಾರಿಗೆ ಅನಾಮಿಕಾ ತನ್ನ ಟ್ಯೂಷನ್‌ಗೆ ಹೋಗುತ್ತಿದ್ದಾಗ ಆರೋಪಿ ಪೊಲೀಸ್ ಠಾಣೆಯಿಂದ 500 ಮೀಟರ್ ದೂರದಲ್ಲಿರುವ ಮಾಣಿಕ್‌ಚಂದ್ ಮೋರ್ ಬಳಿ ಪಾಯಿಂಟ್-ಬ್ಲಾಂಕ್ ರೇಂಜ್‌ನಲ್ಲಿ ಗುಂಡು ಹಾರಿಸಿದ್ದಾನೆ. ಆಕೆ ಕುಸಿದ ಬಿದ್ದು ಕೊಡಲೇ ಮತ್ತೊಮ್ಮೆ ಆಕೆಗೆ ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಹುಡುಗಿಯನ್ನು ಹಿಂಬಾಲಿಸುತ್ತಿದ್ದನು. ಅಕ್ಟೋಬರ್‌ ತಿಂಗಳಲ್ಲಿ ಅವರಿಬ್ಬರ ಮಧ್ಯೆ ಜಗಳವಾಗಿತ್ತು. ಈ ಸಂದರ್ಭದಲ್ಲಿ ಹುಡುಗಿ ಅವನನ್ನು ಸಾರ್ವಜನಿಕವಾಗಿ ನಿಂದಿಸಿ ಥಳಿಸಿದರು, ಅವನಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ಸಾರ್ವಜನಿಕ ಅವಮಾನ ಮತ್ತು ತಿರಸ್ಕಾರದ ಸೇಡು ತೀರಿಸಿಕೊಳ್ಳಲು ಆರೋಪಿ ಅಂತಿಮವಾಗಿ ಆಕೆಯನ್ನು ಗುಂಡಿಟ್ಟು ಕೊಂದಿರುವ ಸಾಧ್ಯತೆ ಇದೆ ಎಂದು ಮಸೌರ್ಹಿ ಎಸ್‌ಡಿಪಿಒ ಶುಭಂ ಐರಾ ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Love failure: ಪ್ರೀತಿಸಿ ಕೈಬಿಟ್ಟಳು; ನೊಂದು ಬೆಂಕಿ ಹಚ್ಚಿಕೊಂಡ ಪ್ರೇಮಿ!

Exit mobile version