Site icon Vistara News

Gyanvapi Case: ‘ಜೈಲ್ ಭರೋ’ ಕರೆ ನೀಡಿದ ಮುಸ್ಲಿಮ್ ಮೌಲ್ವಿ ಅರೆಸ್ಟ್, ಬೆಂಬಲಿಗರಿಂದ ಕಲ್ಲು ತೂರಾಟ

Muslim cleric arrested and tension in UP regard Gyanvapi case

ನವದೆಹಲಿ: ವಾರಾಣಸಿಯ ಜ್ಞಾನವಾಪಿ ಮಸೀದಿ (Gyanvapi Case) ಕುರಿತ ಇತ್ತೀಚಿನ ಬೆಳವಣಿಗೆಗಳಿಗೆ ಸಂಬಂಧಿಸಿದಂತೆ’ಜೈಲ್ ಭರೋ’ (Jail Bharo) ಕರೆ ನೀಡಿದ ಮುಸ್ಲಿಂ ಧರ್ಮಗುರು ತೌಕೀರ್ ರಜಾ ಅವರನ್ನು ಪೊಲೀಸರು ಬಂಧಿಸಿದ (Muslim cleric Tauqeer Raza arrest) ನಂತರ ಶುಕ್ರವಾರ ಉತ್ತರ ಪ್ರದೇಶದ (Uttar Pradesh) ಬರೇಲಿಯಲ್ಲಿ ಕಲ್ಲು ತೂರಾಟ ನಡೆದಿದೆ(Stone Pelting).

ಇತ್ತೆಹಾದ್-ಎ-ಮಿಲ್ಲತ್ ಕೌನ್ಸಿಲ್ ಮುಖ್ಯಸ್ಥ ತೌಕೀರ್ ರಜಾ ಅವರು ಗುರುವಾರ ತಮ್ಮ ಅನುಯಾಯಿಗಳಿಗೆ, ‘ದೇಶದಲ್ಲಿ ಮುಸ್ಲಿಮರ ವಿರುದ್ಧದ ದಬ್ಬಾಳಿಕೆ’ ವಿರುದ್ಧ ಬೀದಿಗಿಳಿದು ಪ್ರತಿಭಟಿಸಿ ಮತ್ತು ಪೊಲೀಸರಿಂದ ಬಂಧನಕ್ಕೊಳಗಾಗಿ ಎಂದು ಕರೆ ನೀಡಿದ್ದರು. ಶುಕ್ರವಾರ ಮಧ್ಯಾಹ್ನ ನಮಾಜ್‌ಗೂ ಮುನ್ನ ತೌಕೀರ್ ರಜಾ ಅವರ ‘ಜೈಲ್ ಭರೋ’ ಮೆರವಣಿಗೆ ನಡೆಯಿತು. ತೌಕೀರ್ ರಝಾ ಅವರು ಹಲ್ದ್ವಾನಿಯಲ್ಲಿನ ಮದರಸಾವನ್ನು ಬುಲ್ಡೋಜಿಂಗ್ ಮಾಡಿರುವುದನ್ನು ಟೀಕಿಸಿದರು, ಇದು ಬರೇಲಿಗೆ ಸಮೀಪವಿರುವ ಉತ್ತರಾಖಂಡ ಪಟ್ಟಣದಲ್ಲಿ ಕೋಮು ಗಲಭೆಗೂ ಕಾರಣವಾಯಿತು ಎಂದು ವರದಿಯಾಗಿದೆ.

ತೌಖೀರ್ ರಜಾ ಅವರ ಜೈಲ್ ಭರೋ ಆಂದೋಲನಕ್ಕೆ ಮುಂಚಿತವಾಗಿ ಪೊಲೀಸರು ಅಲರ್ಟ್ ಆಗಿದ್ದರು. ಬರೇಲಿಯಲ್ಲಿ ಸುಮಾರು 1,000 ಪೊಲೀಸರನ್ನು ನಿಯೋಜಿಸಲಾಗಿದೆ ಮತ್ತು ಪ್ರತಿ ಮಸೀದಿಯಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದು ಹೆಚ್ಚುವರಿ ಎಸ್ಪಿ (ನಗರ) ರಾಹುಲ್ ಭಾಟಿ ಹೇಳಿದ್ದಾರೆ.

ಇನ್ನು ಮುಂದೆ ಯಾವುದೇ ಬುಲ್ಡೋಜರ್ ಕ್ರಮವನ್ನು ನಾವು ಸಹಿಸುವುದಿಲ್ಲ. ಸುಪ್ರೀಂ ಕೋರ್ಟ್ ನಮ್ಮನ್ನು ನೋಡಿಕೊಳ್ಳಲು ಸಾಧ್ಯವಾಗದಿದ್ದರೆ, ನಾವು ನಮ್ಮನ್ನು ನೋಡಿಕೊಳ್ಳುತ್ತೇವೆ. ಈಗ ನಾನು ನಮಾಜ್ ಮಾಡಲು ಹೋಗುತ್ತೇನೆ. ನಂತರ ನನ್ನನ್ನು ಬಂಧಿಸುವಂತೆ ಕರೆ ನೀಡುತ್ತೇನೆ ಎಂದು ಜೈಲ್ ಭರೋ ಆಂದೋಲನದ ಮುಂಚೆ ತೌಖೀರ್ ರಜಾ ಹೇಳಿದರು.

ವಾರಾಣಸಿ ನ್ಯಾಯಾಲಯವು ಇತ್ತೀಚೆಗೆ ನೀಡಿದ ಮಹತ್ವದ ತೀರ್ಪಿನಲ್ಲಿ ಜ್ಞಾನವಾಪಿ ಮಸೀದಿಯ ವ್ಯಾಸ್ ಜಿ ಕಾ ತಹಖಾನಾದಲ್ಲಿ ಹಿಂದೂಗಳಿಗೆ ಪ್ರಾರ್ಥನೆ ಸಲ್ಲಿಸಲು ಅನುಮತಿ ನೀಡಿದೆ. ಮುಸ್ಲಿಂ ಕಡೆಯವರು ಇದರ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಮ್ಮ ಇತ್ತೀಚಿನ ಭಾಷಣದಲ್ಲಿ ಅಯೋಧ್ಯೆಯೊಂದಿಗೆ ಕಾಶಿ ಮತ್ತು ಮಥುರಾ ಹಿಂದೂ ನಂಬಿಕೆಯ ಮೂರು ಕೇಂದ್ರಗಳ ಭಾಗವಾಗಿರುವುದರಿಂದ ದೇವಾಲಯಗಳನ್ನು ನಿರ್ಮಿಸಲಾಗುವುದು ಎಂದು ಹೇಳಿದ್ದರು.

ಜೈಲ್ ಭರೋ ಕರೆಗೆ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ತೌಕೀರ್ ರಾಜಾ ಅವರ ಅನುಯಾಯಿಗಳು ಸೇರಿದ್ದ ಇಸ್ಲಾಮಿಯಾ ಕಾಲೇಜ್ ಮೈದಾನವನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಆದರೆ ಇನ್ನೂ ಸಾವಿರಾರು ಬೆಂಬಲಿಗರು ಮೈದಾನದ ಬಳಿ ಜಮಾಯಿಸಿದರು ಮತ್ತು ಅವರ ಮನೆಗಳಿಗೆ ಮರಳಲು ಆಡಳಿತದ ಮನವೊಲಿಸಲು ಎರಡು ಗಂಟೆಗಳ ಕಾಲ ತೆಗೆದುಕೊಂಡಿತು.

ಈ ಸುದ್ದಿಯನ್ನೂ ಓದಿ: Malali Masjid Row : ಜ್ಞಾನವಾಪಿ ಮಾದರಿಯಲ್ಲಿ ಮಳಲಿ ಮಸೀದಿ ಸರ್ವೆ ಕೋರಿಕೆ

Exit mobile version