ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಭಾರತೀಯ ಸೇನೆ ಕುರಿತ ಸೂಕ್ಷ್ಮ ಮಾಹಿತಿಯನ್ನು ಪಾಕಿಸ್ತಾನದ ಉಗ್ರರಿಗೆ ರವಾನಿಸುತ್ತಿದ್ದ ಹಿನ್ನೆಲೆಯಲ್ಲಿ ಪೊಲೀಸರು ಮಸೀದಿಯೊಂದರ ಮೌಲ್ವಿಯನ್ನು (Cleric Arrested) ಬಂಧಿಸಿದ್ದಾರೆ. ಕಿಶ್ತ್‌ವಾರ್ ಜಿಲ್ಲೆಯ ಮೌಲ್ವಿ ಅಬ್ದುಲ್ ವಾಹಿದ್ (22) ಎಂಬುವನನ್ನು ಬಂಧಿಸಲಾಗಿದೆ.
ಭಾರತೀಯ ಸೇನೆ, ಯೋಧರ ನಿಯೋಜನೆ ಸೇರಿ ಹಲವು ಸೂಕ್ಷ್ಮ ಮಾಹಿತಿಯನ್ನು ಪಾಕಿಸ್ತಾನದ ಕಾಶ್ಮೀರಿ ಜಾನ್‌ಬಾಜ್ ಫೋರ್ಸ್ ಎಂಬ ಉಗ್ರ ಸಂಘಟನೆಗೆ ರವಾನಿಸುತ್ತಿರುವ ಕುರಿತು ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯು ಕಿಶ್ತ್‌ವಾರ್ ಮಸೀದಿಯ ಮೌಲ್ವಿ ಆಗಿರುವ ಜತೆಗೆ ಮದರಸಾದಲ್ಲಿ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದಾನೆ. ಕಾಶ್ಮೀರಿ ಜಾನ್‌ಬಾಜ್ ಫೋರ್ಸ್ ಉಗ್ರ ಸಂಘಟನೆಯ ಕಮಾಂಡರ್ ಎಂದು ಹೇಳಿಕೊಂಡು ಫೇಸ್‌ಬುಕ್‌ನಲ್ಲಿ ತಯ್ಯಬ್ ಫಾರೂಕಿ ಎಂಬಾತ 2020ರಲ್ಲಿ ಪರಿಚಯವಾಗಿದ್ದ ಎಂಬುದಾಗಿ ಪೊಲೀಸರಿಗೆ ಮೌಲ್ವಿ ತಿಳಿಸಿದ್ದಾನೆ. ಫಾರೂಕಿ ಜತೆಗೆ ಈತ ಹೊಂದಿರುವ ನಂಟಿನ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.
ಇದನ್ನೂ ಓದಿ | ಖಲಿಸ್ತಾನ್ ಲಿಂಕ್ ಹೊಂದಿದ್ದ ನಾಲ್ವರ ಸೆರೆ, ತೆಲಂಗಾಣಕ್ಕೆ ಸಾಗುತ್ತಿತ್ತು ಭಾರಿ ಪ್ರಮಾಣದ ಶಸ್ತ್ರಾಸ್ತ್ರ