ಲಖನೌ: ಪತಿಯಿಂದ ದೂರವಾದ ಮುಸ್ಲಿಂ ಮಹಿಳೆಯರು (Muslim Divorce) ಮರು ಮದುವೆ ಆಗುವವರೆಗೂ ಮಾಜಿ ಪತಿ ಜೀವನಾಂಶ ನೀಡಲೇಬೇಕು ಎನ್ನುವ ಮಹತ್ವದ ತೀರ್ಪನ್ನು ಅಲಹಾಬಾದ್ ಹೈಕೋರ್ಟ್ ಶುಕ್ರವಾರ ನೀಡಿದೆ. ಇದ್ದತ್ ಸಮಯದಲ್ಲಿ ಮಾತ್ರವೇ ಜೀವನಾಂಶ ನೀಡಬೇಕು ಎನ್ನುವ ಕುಟುಂಬ ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್ ತಳ್ಳಿ ಹಾಕಿದೆ.
ಇದನ್ನೂ ಓದಿ: Gender change | ಲಿಂಗ ಪರಿವರ್ತಿಸಿಕೊಂಡು ಹೆಣ್ಣಾದ ಮುಸ್ಲಿಂ ಯುವಕ: ದೇರಳಕಟ್ಟೆ ಹೆಸರು ದುರ್ಬಳಕೆಗೆ ಆಕ್ರೋಶ
ಜಹಿದಾ ಖತೂನ್ ಹೆಸರಿನವರು ಪತಿ ನರುಲ್ ಹಕ್‌ನಿಂದ 2000ರಲ್ಲಿ ವಿಚ್ಛೇದನ ಪಡೆದಿದ್ದಾರೆ. 11 ವರ್ಷಗಳ ದಾಂಪತ್ಯದ ನಂತರ ವಿಚ್ಛೇದನವಾಗಿದ್ದು, ಪತಿ ತಮಗೆ ಜೀವನಾಂಶ ನೀಡಬೇಕು ಎಂದು ಜಹಿದಾ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆದರೆ ಅವರು ಇದ್ದತ್ ಸಮಯದಲ್ಲಿ (3 ತಿಂಗಳು 13 ದಿನಗಳು) ಮಾತ್ರ ಜೀವನಾಂಶ ಪಡೆಯಬಹುದು ಎಂದು ಕುಟುಂಬ ನ್ಯಾಯಾಲಯ ತೀರ್ಪು ನೀಡಿತ್ತು. ಆದರೆ ಈ ವಿಚಾರವಾಗಿ ಜಹಿದಾ ಹೈಕೋರ್ಟ್ ಮೆಟ್ಟಿಲೇರಿದ್ದು, ಇದೀಗ ತೀರ್ಪು ಅವರ ಪರವಾಗಿದೆ.
ಇದನ್ನೂ ಓದಿ: Cricket Viral Video | ಸಂಸ್ಕೃತದಲ್ಲಿ ಕ್ರಿಕೆಟ್ ಕಾಮೆಂಟರಿ; ವಿಡಿಯೊ ವೈರಲ್
“ಕುಟುಂಬ ನ್ಯಾಯಾಲಯದ ತೀರ್ಪಿನಲ್ಲಿ ಕೆಲವು ತಪ್ಪಿದೆ. ಮುಸ್ಲಿಂ ಮಹಿಳೆ ತಾನು ಮತ್ತೆ ಮದುವೆಯಾಗುವವರೆಗೂ ಮಾಜಿ ಪತಿಯಿಂದ ಜೀವನಾಂಶ ಪಡೆಯುವುದಕ್ಕೆ ಅರ್ಹಳು” ಎಂದು ನ್ಯಾಯಮೂರ್ತಿಗಳಾದ ಸೂರ್ಯಪ್ರಕಾಶ್ ಕೇಸರ್ವಾನಿ ಹಾಗೂ ಮೊಹಮದ್ ಅಜರ್ ಹುಸೈನ್ ಇದ್ರಿಸಿ ಅವರು ತೀರ್ಪಿನಲ್ಲಿ ತಿಳಿಸಿದ್ದಾರೆ.
ಜಹೀದಾ ಅವರು ಹಕ್ ಅವರೊಂದಿಗೆ 1989ರ ಮೇ 21ರಂದು ವಿವಾಹವಾಗಿದ್ದರು. ಅವರಿಗೆ ಹಕ್ 2000ರಲ್ಲಿ ವಿಚ್ಛೇದನ ನೀಡಿ, 2002ರಲ್ಲಿ ಬೇರೆ ಮದುವೆಯಾಗಿದ್ದಾರೆ.