Site icon Vistara News

Video: ಹಿಂದು ಹುಡುಗನೊಂದಿಗೆ ಮುಸ್ಲಿಂ ಹುಡುಗಿ ಡಿನ್ನರ್​; ಸ್ಕೂಟರ್​ ಅಡ್ಡಗಟ್ಟಿ ಗಲಾಟೆ ಮಾಡಿದ ಗುಂಪು, ಚಾಕು ಇರಿತ

Muslim girl And Hindu boy out for dinner in Madhya Pradesh

#image_title

ಇತ್ತೀಚೆಗೆ ಚಿಕ್ಕಬಳ್ಳಾಪುರದಲ್ಲಿ ಹಿಂದು ಹುಡುಗ ಮತ್ತು ಮುಸ್ಲಿಂ ಹುಡುಗಿ ಒಟ್ಟಿಗೆ ಹೋಟೆಲ್​ಗೆ ಹೋಗಿ, ತಿಂಡಿ ತಿನ್ನುತ್ತಿದ್ದಾಗ ಅಲ್ಲಿಗೆ ದಾಂಗುಡಿ ಇಟ್ಟಿದ್ದ ಮುಸ್ಲಿಂ ಹುಡುಗರ ಗುಂಪೊಂದು ನೈತಿಕ ಪೊಲೀಸ್​ಗಿರಿ ಪ್ರದರ್ಶಿಸಿತ್ತು. ಆ ಯುವಕನ ಮೇಲೆ ಹಲ್ಲೆಗೆ ಮುಂದಾಗಿದ್ದಲ್ಲದೆ, ಯುವತಿಯ ಬಳಿ ಕ್ಷಮೆ ಕೇಳಿಸಿತ್ತು. ಈ ವಿಡಿಯೊಗಳು ವೈರಲ್ ಆಗಿದ್ದವು. ಅದರ ಬೆನಲ್ಲೇ ಈಗ ಮಧ್ಯ ಪ್ರದೇಶದ (Madhya Pradesh) ಇಂದೋರ್​​ನಲ್ಲಿ ಕೂಡ ಇಂಥದ್ದೇ ಒಂದು ಘಟನೆ ನಡೆದಿದೆ. ಅದರ ವಿಡಿಯೊ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.

Mr Sinha ಎಂಬುವರ, ವೆರಿಫೈಡ್​​ ಟ್ವಿಟರ್​ ಅಕೌಂಟ್​ನಿಂದ ವಿಡಿಯೊ ಶೇರ್ ಆಗಿದೆ. ‘ಮಧ್ಯಪ್ರದೇಶದ ಇಂದೋರ್​​ನಲ್ಲಿ ಹಿಂದು ಹುಡುಗನ ಜತೆ ಮುಸ್ಲಿಂ ಯುವತಿ ಇದ್ದಳು ಎಂಬ ಕಾರಣಕ್ಕೆ ಮುಸ್ಲಿಮರ ಗುಂಪು ಅವರಿಗೆ ಹೊಡೆದರು. ಈಗೀಗ ಇದು ಸಹಜವಾಗುತ್ತಿದೆ. ಇದೇ ಜಾಗದಲ್ಲಿ ಮುಸ್ಲಿಂ ಹುಡುಗ ಮತ್ತು ಹಿಂದು ಹುಡುಗಿ ಇದ್ದು, ಹಿಂದುಗಳ ಗುಂಪು ಏನಾದರೂ ಹೋಗಿ ಅಲ್ಲಿ ಗಲಾಟೆ ಮಾಡಿದರೆ, ಮುಸ್ಲಿಂ ಹುಡುಗನಿಗೆ ಥಳಿಸಿದರೆ ಆಗ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯವಾಗಿ ಎಷ್ಟು ದೊಡ್ಡಮಟ್ಟದ ವಿವಾದ ಸೃಷ್ಟಿಯಾಗುತ್ತದೆ ಎಂಬುದನ್ನು ಕಲ್ಪಿಸಿಕೊಳ್ಳಿ’ ಎಂದು ಕ್ಯಾಪ್ಷನ್ ಬರೆದಿದ್ದಾರೆ.

ಹಿಂದು ಹುಡುಗ ಮತ್ತು ಮುಸ್ಲಿಂ ಹುಡುಗಿ ಇಬ್ಬರೂ ಹೋಟೆಲ್​ವೊಂದಕ್ಕೆ ಹೋಗಿ, ಸ್ಕೂಟರ್​ನಲ್ಲಿ ವಾಪಸ್ ಹೋಗುತ್ತಿದ್ದರು. ಆಗ ಅವರನ್ನು ಮುಸ್ಲಿಂ ಸಮುದಾಯದ ಒಂದಷ್ಟು ಹುಡುಗರು ಅಡ್ಡಗಟ್ಟಿದ್ದಾರೆ. ಅವರ ಕೈಯಲ್ಲಿ ಚಾಕುಗಳೆಲ್ಲ ಇದ್ದವು. ಈ ಜೋಡಿಯನ್ನು ರಕ್ಷಿಸಲು ಬಂದ ಇಬ್ಬರಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿದ್ದಾರೆ ಎಂದೂ ವರದಿಯಾಗಿದೆ. ಇನ್ನೊಂದು ಧರ್ಮದವನೊಂದಿಗೆ ನಿನಗೇನು ಕೆಲಸ ಎಂದು ಆ ಹುಡುಗಿಯನ್ನೂ ನಿಂದಿಸಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ರಾಜೇಶ್​ ರಘುವಂಶಿ ತಿಳಿಸಿದ್ದಾರೆ.

‘ನಾನು ನನ್ನ ಮನೆಯಲ್ಲಿ ಪಾಲಕರಿಗೆ ಹೇಳಿಯೇ ಈ ಹುಡುಗನೊಂದಿಗೆ ಊಟಕ್ಕೆ ಬಂದಿದೆ. ನೀವು ಇಷ್ಟು ಕೆಟ್ಟದಾಗಿ ನಮ್ಮ ಬಳಿ ವರ್ತಿಸಬೇಡಿ’ ಎಂದು ಆ ಮುಸ್ಲಿಂ ಯುವತಿ ಹೇಳಿದ್ದಾಳೆ. ಆದರೂ ಮುಸ್ಲಿಂ ಹುಡುಗರು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ. ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆಗೆ ಸಂಬಂಧಪಟ್ಟಂತೆ 20 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದೂ ರಾಜೇಶ್​ ರಘುವಂಶಿ ಮಾಹಿತಿ ನೀಡಿದ್ದಾರೆ.

Exit mobile version