ದೇಶ
Video: ಹಿಂದು ಹುಡುಗನೊಂದಿಗೆ ಮುಸ್ಲಿಂ ಹುಡುಗಿ ಡಿನ್ನರ್; ಸ್ಕೂಟರ್ ಅಡ್ಡಗಟ್ಟಿ ಗಲಾಟೆ ಮಾಡಿದ ಗುಂಪು, ಚಾಕು ಇರಿತ
ಹಿಂದು ಹುಡುಗ ಮತ್ತು ಮುಸ್ಲಿಂ ಹುಡುಗಿ ಇಬ್ಬರೂ ಹೋಟೆಲ್ವೊಂದಕ್ಕೆ ಹೋಗಿ, ಸ್ಕೂಟರ್ನಲ್ಲಿ ವಾಪಸ್ ಹೋಗುತ್ತಿದ್ದರು. ಆಗ ಅವರನ್ನು ಮುಸ್ಲಿಂ ಸಮುದಾಯದ ಒಂದಷ್ಟು ಹುಡುಗರು ಅಡ್ಡಗಟ್ಟಿದ್ದಾರೆ. ಅವರ ಕೈಯಲ್ಲಿ ಚಾಕುಗಳೆಲ್ಲ ಇದ್ದವು.
ಇತ್ತೀಚೆಗೆ ಚಿಕ್ಕಬಳ್ಳಾಪುರದಲ್ಲಿ ಹಿಂದು ಹುಡುಗ ಮತ್ತು ಮುಸ್ಲಿಂ ಹುಡುಗಿ ಒಟ್ಟಿಗೆ ಹೋಟೆಲ್ಗೆ ಹೋಗಿ, ತಿಂಡಿ ತಿನ್ನುತ್ತಿದ್ದಾಗ ಅಲ್ಲಿಗೆ ದಾಂಗುಡಿ ಇಟ್ಟಿದ್ದ ಮುಸ್ಲಿಂ ಹುಡುಗರ ಗುಂಪೊಂದು ನೈತಿಕ ಪೊಲೀಸ್ಗಿರಿ ಪ್ರದರ್ಶಿಸಿತ್ತು. ಆ ಯುವಕನ ಮೇಲೆ ಹಲ್ಲೆಗೆ ಮುಂದಾಗಿದ್ದಲ್ಲದೆ, ಯುವತಿಯ ಬಳಿ ಕ್ಷಮೆ ಕೇಳಿಸಿತ್ತು. ಈ ವಿಡಿಯೊಗಳು ವೈರಲ್ ಆಗಿದ್ದವು. ಅದರ ಬೆನಲ್ಲೇ ಈಗ ಮಧ್ಯ ಪ್ರದೇಶದ (Madhya Pradesh) ಇಂದೋರ್ನಲ್ಲಿ ಕೂಡ ಇಂಥದ್ದೇ ಒಂದು ಘಟನೆ ನಡೆದಿದೆ. ಅದರ ವಿಡಿಯೊ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
Mr Sinha ಎಂಬುವರ, ವೆರಿಫೈಡ್ ಟ್ವಿಟರ್ ಅಕೌಂಟ್ನಿಂದ ವಿಡಿಯೊ ಶೇರ್ ಆಗಿದೆ. ‘ಮಧ್ಯಪ್ರದೇಶದ ಇಂದೋರ್ನಲ್ಲಿ ಹಿಂದು ಹುಡುಗನ ಜತೆ ಮುಸ್ಲಿಂ ಯುವತಿ ಇದ್ದಳು ಎಂಬ ಕಾರಣಕ್ಕೆ ಮುಸ್ಲಿಮರ ಗುಂಪು ಅವರಿಗೆ ಹೊಡೆದರು. ಈಗೀಗ ಇದು ಸಹಜವಾಗುತ್ತಿದೆ. ಇದೇ ಜಾಗದಲ್ಲಿ ಮುಸ್ಲಿಂ ಹುಡುಗ ಮತ್ತು ಹಿಂದು ಹುಡುಗಿ ಇದ್ದು, ಹಿಂದುಗಳ ಗುಂಪು ಏನಾದರೂ ಹೋಗಿ ಅಲ್ಲಿ ಗಲಾಟೆ ಮಾಡಿದರೆ, ಮುಸ್ಲಿಂ ಹುಡುಗನಿಗೆ ಥಳಿಸಿದರೆ ಆಗ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯವಾಗಿ ಎಷ್ಟು ದೊಡ್ಡಮಟ್ಟದ ವಿವಾದ ಸೃಷ್ಟಿಯಾಗುತ್ತದೆ ಎಂಬುದನ್ನು ಕಲ್ಪಿಸಿಕೊಳ್ಳಿ’ ಎಂದು ಕ್ಯಾಪ್ಷನ್ ಬರೆದಿದ್ದಾರೆ.
ಹಿಂದು ಹುಡುಗ ಮತ್ತು ಮುಸ್ಲಿಂ ಹುಡುಗಿ ಇಬ್ಬರೂ ಹೋಟೆಲ್ವೊಂದಕ್ಕೆ ಹೋಗಿ, ಸ್ಕೂಟರ್ನಲ್ಲಿ ವಾಪಸ್ ಹೋಗುತ್ತಿದ್ದರು. ಆಗ ಅವರನ್ನು ಮುಸ್ಲಿಂ ಸಮುದಾಯದ ಒಂದಷ್ಟು ಹುಡುಗರು ಅಡ್ಡಗಟ್ಟಿದ್ದಾರೆ. ಅವರ ಕೈಯಲ್ಲಿ ಚಾಕುಗಳೆಲ್ಲ ಇದ್ದವು. ಈ ಜೋಡಿಯನ್ನು ರಕ್ಷಿಸಲು ಬಂದ ಇಬ್ಬರಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿದ್ದಾರೆ ಎಂದೂ ವರದಿಯಾಗಿದೆ. ಇನ್ನೊಂದು ಧರ್ಮದವನೊಂದಿಗೆ ನಿನಗೇನು ಕೆಲಸ ಎಂದು ಆ ಹುಡುಗಿಯನ್ನೂ ನಿಂದಿಸಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ರಾಜೇಶ್ ರಘುವಂಶಿ ತಿಳಿಸಿದ್ದಾರೆ.
‘ನಾನು ನನ್ನ ಮನೆಯಲ್ಲಿ ಪಾಲಕರಿಗೆ ಹೇಳಿಯೇ ಈ ಹುಡುಗನೊಂದಿಗೆ ಊಟಕ್ಕೆ ಬಂದಿದೆ. ನೀವು ಇಷ್ಟು ಕೆಟ್ಟದಾಗಿ ನಮ್ಮ ಬಳಿ ವರ್ತಿಸಬೇಡಿ’ ಎಂದು ಆ ಮುಸ್ಲಿಂ ಯುವತಿ ಹೇಳಿದ್ದಾಳೆ. ಆದರೂ ಮುಸ್ಲಿಂ ಹುಡುಗರು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ. ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆಗೆ ಸಂಬಂಧಪಟ್ಟಂತೆ 20 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದೂ ರಾಜೇಶ್ ರಘುವಂಶಿ ಮಾಹಿತಿ ನೀಡಿದ್ದಾರೆ.
In Indore, MP MusIim mobs beat a couple because the girl was a MusIim & the boy was a Hindu.
— Mr Sinha (@MrSinha_) May 26, 2023
It's becoming a new normal!
Imagine the amount of national-international outrage if any Hindu group starts doing this with M boy & H girl couples.. pic.twitter.com/Is0nis1QbJ
ದೇಶ
Odisha Train Accident : ಅವಘಡದಲ್ಲಿ ಮೃತಪಟ್ಟವರನ್ನು ಗುರುತಿಸಲು ಭಾರತೀಯ ರೈಲ್ವೆ ಮನವಿ
ಒಡಿಶಾ ಸರ್ಕಾರದ ಬೆಂಬಲದೊಂದಿಗೆ, ಮೃತರ ಫೋಟೋಗಳು, ಆಸ್ಪತ್ರೆಗಳಲ್ಲಿ ದಾಖಲಾದವರು ಮತ್ತು ಅಪರಿಚಿತ ಶವಗಳ ವಿವರಗಳ ಲಿಂಕ್ಗಳು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಲಾಗಿದೆ
ನವ ದೆಹಲಿ: ಒಡಿಶಾದ ಬಹನಾಗದಲ್ಲಿ ಸಂಭವಿಸಿದ ತ್ರಿವಳಿ ರೈಲು ಅಪಘಾತದಲ್ಲಿ ಮೃತಪಟ್ಟಿರುವ ತಮ್ಮ ಸಂಬಂಧಿಕರನ್ನು ಹುಡುಕುತ್ತಿರುವ ಕುಟುಂಬಗಳಿಗೆ ಸಹಾಯ ಮಾಡಲು ಭಾರತೀಯ ರೈಲ್ವೆ ಒಡಿಶಾ ಸರ್ಕಾರದ ಸಹಯೋಗದೊಂದಿಗೆ ವ್ಯವಸ್ಥೆ ಕಲ್ಪಿಸಿದೆ. ಇದೇ ವೇಳೆ ರೈಲ್ವೆ ಅಧಿಕಾರಿಗಳು ಮೃತರ ಸಂಬಂಧಿಕರನ್ನು ಪತ್ತೆಹಚ್ಚಲು ಭಾರತೀಯ ರೈಲ್ವೆ ಸಹಾಯವಾಣಿ ಸಂಖ್ಯೆ 139 ಮತ್ತು ಭುವನೇಶ್ವರ ನಗರಪಾಲಿಕೆ ಸಹಾಯವಾಣಿ ಸಂಖ್ಯೆ -18003450061/1929ಕ್ಕೆ ಕರೆ ಮಾಡುವಂತೆ ಮನವಿ ಮಾಡಿದ್ದಾರೆ.
ಒಡಿಶಾ ಸರ್ಕಾರದ ಬೆಂಬಲದೊಂದಿಗೆ, ಮೃತರ ಫೋಟೋಗಳು, ಆಸ್ಪತ್ರೆಗಳಿಗೆ ದಾಖಲಾದವರು ಮತ್ತು ಅಪರಿಚಿತ ಶವಗಳ ಕುರಿತ ಮಾಹಿತಿ ಲಭ್ಯವಾಗುವಂತೆ ಮಾಡಲಾಗಿದೆ. ಮೃತರ ಫೋಟೋಗಳು, ಆಸ್ಪತ್ರೆಗೆ ದಾಖಲಾದ ಪ್ರಯಾಣಿಕರ ಪಟ್ಟಿಗಳು ಮತ್ತು ಪೀಡಿತ ಪ್ರಯಾಣಿಕರ ಕುಟುಂಬಗಳು, ಸ್ನೇಹಿತರು ಮತ್ತು ಹಿತೈಷಿಗಳು ಹಾಗೂ ಅಪರಿಚಿತ ಶವಗಳ ಮಾಹಿತಿಯನ್ನು ಈ ಲಿಂಕ್ನಲ್ಲಿ ನೀಡಲಾಗಿದೆ.
ರೈಲ್ವೆ ಸಹಾಯವಾಣಿ ಸಂಖ್ಯೆ 139ರ ಮೂಲಕ ಪ್ರಯಾಣಿಕರ ಕುಟುಂಬಗಳು ಮತ್ತು ಸಂಬಂಧಿಕರರನ್ನು ಸಂಪರ್ಕಿಸಬಹುದು. ಹಿರಿಯ ರೈಲ್ವೆ ಅಧಿಕಾರಿಗಳು ಸಹಾಯವಾಣಿಯನ್ನು ನಿರ್ವಹಿಸುತ್ತಿದ್ದಾರೆ.
ಭುವನೇಶ್ವರದ ಮುನ್ಸಿಪಲ್ ಕಮಿಷನರ್ ಕಚೇರಿಯ ಅಧಿಕಾರಿಗಳು ಮತ್ತು ವಾಹನಗಳ ಸಹಾಯದಿಂದ ಜನರನ್ನು ಅಗತ್ಯಕ್ಕೆ ತಕ್ಕಂತೆ ಆಸ್ಪತ್ರೆಗಳು ಅಥವಾ ಶವಾಗಾರಗಳಿಗೆ ಕಳುಹಿಸುವುದಕ್ಕೆ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗಿದೆ.
ಟಿಕೆಟ್ ರಹಿತರಿಗೆ ಪರಿಹಾರ
ಒಡಿಶಾದಲ್ಲಿ ಸಂಭವಿಸಿದ ಅಪಘಾತದಲ್ಲಿ (Odisha Train Accident) ಸಿಲುಕಿರುವ ಪ್ಯಾಸೆಂಜರ್ ರೈಲುಗಳಲ್ಲಿ ಪ್ರಯಾಣಿಸಿದ್ದ ಟಿಕೆಟ್ ರಹಿತ ಪ್ರಯಾಣಿಕರಿಗೂ ಪರಿಹಾರ ನೀಡಲಾಗುವುದು ಎಂದು ರೈಲ್ವೆ ಇಲಾಖೆ ಭಾನುವಾರ ತಿಳಿಸಿದೆ. ಇದು ಸುಪ್ರೀಂ ಕೋರ್ಟ್ ಆದೇಶಕ್ಕೆ ಅನುಗುಣವಾಗಿದೆ ಎಂದು ಅಧಿಕಾರಿಗಳು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ. “ಪ್ರಯಾಣಿಕರು ಟಿಕೆಟ್ ಇಲ್ಲದೇ ಪ್ರಯಾಣ ಮಾಡಿದ್ದರೂ ಅವರಿಗೆ ಪರಿಹಾರ ನೀಡಲಾಗುವುದು” ಎಂದು ರೈಲ್ವೆ ವಕ್ತಾರ ಅಮಿತಾಭ್ ಶರ್ಮಾ ಹೇಳಿದ್ದಾರೆ.
ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ರೈಲು ದುರಂತ ಬಳಿಕ ಪರಿಹಾರ ಕಾರ್ಯ; ರೈಲ್ವೆ ಸಚಿವರ ನಡೆ ಅನುಕರಣೀಯ
ಅದೇ ರೀತಿ ಸುದ್ದಿಗಾರರೊಂದಿಗೆ ಮಾತನಾಡಿದ ರೈಲ್ವೆ ಮಂಡಳಿಯ ಕಾರ್ಯಾಚರಣೆ ಮತ್ತು ವ್ಯವಹಾರ ಅಭಿವೃದ್ಧಿ ಸದಸ್ಯ ಜಯ ವರ್ಮಾ ಸಿನ್ಹಾ, ಆಸ್ಪತ್ರೆಗಳಲ್ಲಿ ದಾಖಲಾದ ಪ್ರತಿಯೊಬ್ಬ ಗಾಯಾಳುವಿಗೆ ತಮ್ಮ ಸಂಬಂಧಿಕರು ಅಥವಾ ಆಪ್ತರನ್ನು ಪತ್ತೆ ಹಚ್ಚುವುದಕ್ಕೆ ನೆರವಾಲು ಸ್ಕೌಟ್ ಅಥವಾ ಗೈಡ್ಸ್ ನೆರವು ನೀಡಲಾಗಿದೆ ಎಂಬುದಾಗಿ ಹೇಳಿದ್ದಾರೆ.
ಸಹಾಯವಾಣಿ ಸಂಖ್ಯೆ 139 ಲಭ್ಯವಿದೆ. ಈ ಸಂಪರ್ಕ ಸಂಖ್ಯೆ ಮೂಲಕ ಹಿರಿಯ ರೈಲ್ವೆ ಅಧಿಕಾರಿಗಳು ಕರೆಗಳಿಗೆ ಉತ್ತರಿಸುತ್ತಿದ್ದಾರೆ. ಸಾಧ್ಯವಾದಷ್ಟು ಜನರೊಂದಿಗೆ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ವರ್ಮಾ ಇದೇ ವೇಳೆ ಮಾಹಿತಿ ನೀಡಿದ್ದಾರೆ.
ದೇಶ
ಬೆತ್ತಲೆಯಾಗುವುದು ಯಾವಾಗಲೂ ಅಶ್ಲೀಲವಲ್ಲ: ಬೆತ್ತಲಾದ 33 ವರ್ಷದ ಮಹಿಳೆಗೆ ಕೇರಳ ಹೈಕೋರ್ಟ್ನಿಂದ ರಿಲೀಫ್
ಮಹಿಳಾ ಹಕ್ಕುಗಳ ಹೋರಾಟಗಾರ್ತಿ ರೆಹಾನಾ ಫಾತಿಮಾ ಪೋಕ್ಸೊ, ಬಾಲನ್ಯಾಯ ಕಾಯ್ದೆ ಮತ್ತು ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಯ ವಿವಿಧ ನಿಬಂಧನೆಗಳ ಅಡಿಯಲ್ಲಿ ಆರೋಪಗಳನ್ನು ಎದುರಿಸುತ್ತಿದ್ದರು.
ಕೊಚ್ಚಿ: ಬೆತ್ತಲೆಯಾದ ದೇಹ ಎಲ್ಲ ಸಂದರ್ಭದಲ್ಲೂ ಅಶ್ಲೀಲತೆ ಎನಿಸಿಕೊಳ್ಳುವುದಿಲ್ಲ. ವ್ಯಕ್ತಿಯೊಬ್ಬರಿಗೆ ಅವರ ದೇಹದ ಮೇಲಿನ ಹಕ್ಕನ್ನು ಲಿಂಗದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ತಮ್ಮ ದೇಹ ಮತ್ತು ಜೀವನದ ಆಯ್ಕೆಗಳನ್ನು ಮಾಡಿದ್ದಕ್ಕಾಗಿ ಬೆದರಿಸಲಾಗುತ್ತದೆ, ತಾರತಮ್ಯ ಮಾಡಲಾಗುತ್ತದೆ, ಪ್ರತ್ಯೇಕಿಸಲಾಗುತ್ತದೆ ಮತ್ತು ಹಿಂಸಿಸಲಾಗುತ್ತದೆ ಎಂದು ಪೋಕ್ಸೊ ಪ್ರಕರಣದಲ್ಲಿ ಮಹಿಳಾ ಹಕ್ಕುಗಳ ಕಾರ್ಯಕರ್ತೆಯರೊಬ್ಬರನ್ನು ಖುಲಾಸೆಗೊಳಿಸುವಾಗ ಕೇರಳ ಹೈಕೋರ್ಟ್ ಸೋಮವಾರ ಅಭಿಪ್ರಾಯ ವ್ಯಕ್ತಪಡಿಸಿದೆ.
ರೆಹಾನಾ ಫಾತಿಮಾ ಎಂಬ ಮಹಿಳಾ ಹಕ್ಕುಗಳ ಕಾರ್ಯಕರ್ತೆ ತನ್ನ ಅಪ್ರಾಪ್ತ ಮಕ್ಕಳ ಜತೆ ಅರೆನಗ್ನರಾಗಿ ಪೋಸ್ ನೀಡುವ ವೀಡಿಯೊವನ್ನು ಪ್ರಸಾರ ಮಾಡಿದ್ದಕ್ಕಾಗಿ ಪೋಕ್ಸೊ, ಬಾಲಾಪರಾಧಿ ನ್ಯಾಯ ಮತ್ತು ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಗಳ ವಿವಿಧ ನಿಬಂಧನೆಗಳ ಅಡಿಯಲ್ಲಿ ಆರೋಪಗಳನ್ನು ಎದುರಿಸುತ್ತಿದ್ದರು. ಈ ವಿಚಾರಣೆ ನಡೆಸಿ ರೆಹೆನಾ ಅವರನ್ನು ಆರೋಪಮುಕ್ತಗೊಳಿಸಿದ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ. 33 ವರ್ಷದ ಸಾಮಾಜಿಕ ಕಾರ್ಯಕರ್ತೆ ತನ್ನ ಲೈಂಗಿಕ ತೃಪ್ತಿಗಾಗಿ ಮಕ್ಕಳನ್ನು ಬಳಸಿಕೊಂಡಿದ್ದಾರೆ ಎಂದು ಊಹಿಸಲು ಕೂಡ ಯಾರಿಗೂ ಸಾಧ್ಯವಿಲ್ಲ ಎಂದು ಹೈಕೋರ್ಟ್ ನ್ಯಾಯಮೂರ್ತಿ ಕೌಸರ್ ಎಡಪ್ಪಗತ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ತನ್ನ ಮಕ್ಕಳಿಗೆ ಬಣ್ಣ ಹಚ್ಚಲು ಕ್ಯಾನ್ವಾಸ್ ಆಗಿ ತನ್ನ ದೇಹವನ್ನು ಬಳಸಲು ಮಾತ್ರ ಅವರು ಅನುಮತಿ ನೀಡಿದ್ದಾರೆ. ಹೀಗಾಗಿ ಅದರು ಲೈಂಗಿಕತೆಗೆ ಸಂಬಂಧಿಸಿದ ಆರೋಪವೇ ಅಲ್ಲ ಎಂದು ಕೋರ್ಟ್ ಹೇಳಿದ ಕೋರ್ಟ್ ರೆಹೆನಾ ಅವರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಪುರಸ್ಕರಿಸಿದೆ.
ತನ್ನ ದೇಹದ ಬಗ್ಗೆ ಸ್ವಾಯತ್ತ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಮಹಿಳೆಯ ಹಕ್ಕು ಹಾಗೂ ಸಮಾನತೆ ಮತ್ತು ಖಾಸಗಿತನದ ಮೂಲಭೂತ ಹಕ್ಕಿನ ಭಾಗವಾಗಿದೆ. ಇದು ಸಂವಿಧಾನದ 21 ನೇ ವಿಧಿಯಿಂದ ಖಾತರಿಪಡಿಸಿದ ವೈಯಕ್ತಿಕ ಸ್ವಾತಂತ್ರ್ಯದ ವ್ಯಾಪ್ತಿಯಲ್ಲಿ ಬರುತ್ತದೆ ಎಂದು ಕೋರ್ಟ್ ಹೇಳಿದೆ.
ಸ್ತ್ರೀಯ ದೇಹದ ಮೇಲ್ಬಾಗ ಅಶ್ಲೀಲ್ವೇ?
ಸ್ತ್ರೀಯ ದೇಹದ ಮೇಲ್ಬಾ ನಗ್ನ ಮೇಲ್ಭಾಗವನ್ನು ಎಲ್ಲಾ ಸಂದರ್ಭಗಳಲ್ಲಿ ಲೈಂಗಿಕತೆಯ ವ್ಯಾಪ್ತಿಗೆ ಸೇರಿಸುತ್ತೇವೆ. ಆದರೆ ನಗ್ನ ಪುರುಷ ಮೇಲ್ಭಾಗವನ್ನು ಆ ರೀತಿ ಭಾವಿಸುವುದಿಲ್ಲ. ಇದು ಸಮಾಜದ ಪೂರ್ವನಿಯೋಜಿತ ದೃಷ್ಟಿಕೋನ. ಹೀಗಾಗಿ ನನ್ನ ಮೇಲಿರುವ ಬಾಡಿ ಪೇಂಟಿಂಗ್ ಆರೋಪ ಒಂದು ರಾಜಕೀಯ ಹೇಳಿಕೆಯಾಗಿದೆ ಎಂದು ರೆಹೆನಾ ಫಾತಿಮಾ ಕೋರ್ಟ್ ಮುಂದೆ ವಾದಿಸಿದ್ದರು.
ಆಕೆಯ ವಾದವನ್ನು ಒಪ್ಪಿದ ನ್ಯಾಯಮೂರ್ತಿ ಎಡಪ್ಪಗತ್, ತಾಯಿಯ ದೇಹದ ಮೇಲೆ ಮಕ್ಕಳು ಚಿತ್ರ ಬಿಡಿಸಿದರೆ ಅದನ್ನು ಅನುಕರಿಸಿದ ಲೈಂಗಿಕ ಕ್ರಿಯೆ ಎಂದು ನಿರೂಪಿಸಲಾಗುವುದಿಲ್ಲ. ಲೈಂಗಿಕ ತೃಪ್ತಿಯ ಉದ್ದೇಶಕ್ಕಾಗಿ ಅಥವಾ ಲೈಂಗಿಕ ಉದ್ದೇಶದಿಂದ ಇದನ್ನು ಮಾಡಲಾಗಿದೆ ಎಂದು ನಿರೂಪಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಕಲೆಯ ಅಭಿವ್ಯಕ್ತಿಯನ್ನು ಅನುಕರಿಸಿದ ಲೈಂಗಿಕ ಕ್ರಿಯೆಯಲ್ಲಿ ಮಗುವಿನ ಬಳಕೆ ಎಂದು ಕರೆಯುವುದು ಕಠಿಣ. ಇಲ್ಲಿ ಮಕ್ಕಳನ್ನು ಅಶ್ಲೀಲತೆಗೆ ಬಳಸಲಾಗಿದೆ ಎಂದು ತೋರಿಸಲು ಏನೂ ಇಲ್ಲ. ವೀಡಿಯೊದಲ್ಲಿ ಲೈಂಗಿಕತೆಯ ಯಾವುದೇ ಸುಳಿವು ಇಲ್ಲ. ಪುರುಷನಾಗಿರಲಿ ಅಥವಾ ಮಹಿಳೆಯ ನಗ್ನ ದೇಹದ ಮೇಲೆ ಚಿತ್ರ ಬಿಡಿಸುವುದು ಲೈಂಗಿಕ ಕೃತ್ಯ ಎಂದು ಹೇಳಲಾಗುವುದಿಲ್ಲ ಎಂದು ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟರು.
ಅರ್ಜಿದಾರರು ತಮ್ಮ ದೇಹ ಮತ್ತು ಜೀವನದ ಬಗ್ಗೆ ಆಯ್ಕೆಗಳನ್ನು ಮಾಡಿದ್ದಕ್ಕಾಗಿ ಅವರನ್ನು ಬೆದರಿಸಲಾಗುತ್ತದೆ, ತಾರತಮ್ಯ ಮಾಡಲಾಗುತ್ತದೆ, ಪ್ರತ್ಯೇಕಿಸಲಾಗುತ್ತದೆ ಮತ್ತು ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ನ್ಯಾಯಾಲಯ ವಿಷಾಧ ವ್ಯಕ್ತಪಡಿಸಿದರು.
ಮಹಿಳಾ ನಗ್ನತೆಯನ್ನು ನಿಷೇಧವೆಂದು ಪರಿಗಣಿಸುವ ಕೆಲವರು ಇದ್ದಾರೆ. ಅವನ್ನು ಕಾಮಪ್ರಚೋದಕ ಉದ್ದೇಶಗಳಿಗಾಗಿ ಮಾತ್ರ ಎಂದು ಪರಿಗಣಿಸುತ್ತಾರೆ. ಆದರೆ, ಫಾತಿಮಾ ಪ್ರಸಾರ ಮಾಡಿದ ವೀಡಿಯೊದ ಹಿಂದಿನ ಉದ್ದೇಶವು ಸಮಾಜದಲ್ಲಿ ಚಾಲ್ತಿಯಲ್ಲಿರುವ ಈ ದ್ವಂದ್ವ ಮಾನದಂಡವನ್ನು ಬಹಿರಂಗಪಡಿಸುವುದಾಗಿತ್ತು ಎಂದು ನ್ಯಾಯಾಲಯ ಹೇಳಿದೆ.
ಕ್ರಿಕೆಟ್
ತಾಯಿ, ಮಗಳ ಜೀವ ತೆಗೆಯಿತು ಐಪಿಎಲ್ ಲಕ್ನೊ ತಂಡದ ಹೋರ್ಡಿಂಗ್
ಚಲಿಸುತ್ತಿದ್ದ ಕಾರಿನ ಮೇಲೆ ಹೋರ್ಡಿಂಗ್ ಬಿದ್ದ ಕಾರಣ ತಾಯಿ, ಮಗಳು ಮೃತಪಟ್ಟಿದ್ದರೆ ಚಾಲಕ ಗಾಯಗೊಂಡಿದ್ದಾರೆ.
ಲಖನೌ: ಲಕ್ನೋದ ಅಟಲ್ ಬಿಹಾರಿ ವಾಜಪೇಯಿ (ಎಕಾನಾ) ಕ್ರಿಕೆಟ್ ಸ್ಟೇಡಿಯಂ ಬಳಿ ಸೋಮವಾರ ಭಾರಿ ಬಿರುಗಾಳಿಯ ಸಮಯದಲ್ಲಿ ದೊಡ್ಡ ಹೋರ್ಡಿಂಗ್ ಬಿದ್ದು ಕಾರು ನಜ್ಜುಗುಜ್ಜಾದ ಪರಿಣಾಮ ತಾಯಿ, ಮಗಳು ಮೃತಪಟ್ಟಿದ್ದಾಳೆ. ಘಟನೆಯಲ್ಲಿ ಚಾಲಕ ಗಾಯಗೊಂಡಿದ್ದಾರೆ. ತಾಯಿ-ಮಗಳು ಇಬ್ಬರನ್ನೂ ಲೋಹಿಯಾ ಆಸ್ಪತ್ರೆಗೆ ದಾಖಲಿಸಿದ್ದರೂ ಆಗಲೇ ಅವರಿಬ್ಬರು ಮೃತಪಟ್ಟಿದ್ದಾರೆ ಎಂದು ಅಲ್ಲಿನ ವೈದ್ಯರು ಘೋಷಿಸಿದ್ದಾರೆ.
ಗಾಜಿಪುರ ಪೊಲೀಸ್ ಠಾಣೆ ಪ್ರದೇಶದ ಇಂದಿರಾ ನಗರ ಕಾಲೋನಿ ನಿವಾಸಿಗಳಾದ ಪ್ರೀತಿ ಜಗ್ಗಿ (38) ಮತ್ತು ಅವರ ಮಗಳು ಏಂಜೆಲ್ (15) ಪ್ರಯಾಣಿಸುತ್ತಿದ್ದ ಸ್ಕಾರ್ಪಿಯೋ ವಾಹನದ ಮೇಲೆ ಜಾಹೀರಾತು ಫಲಕ ಬಿದ್ದಿದೆ ಎಂದು ಗೋಸಾಯ್ಗಂಜ್ ಸಹಾಯಕ ಪೊಲೀಸ್ ಆಯುಕ್ತ (ಎಎಸ್ಪಿ) ಅಮಿತ್ ಕುಮಾವತ್ ಮಾಹಿತಿ ನೀಡಿದ್ದಾರೆ.
इकाना स्टेडियम के पास हादसे का मामला हादसे में एक की गई जान,
— Network10 (@Network10Update) June 5, 2023
3 लोग गंभीर घायल, घायलों को भेजा गया अस्पताल,
लोहिया अस्पताल भेजे गए सभी घायल,
घायलों में एक महिला की हालत नाजुक #EkanaStadium @Uppolice #Lucknow pic.twitter.com/zpR5iFplvo
ಅವರು ತಮ್ಮ ಚಾಲಕ ಸರ್ತಾಜ್ (28) ಅವರೊಂದಿಗೆ ಮಾಲ್ಗೆ ಪ್ರದೇಶಕ್ಕೆ ಹೋಗುತ್ತಿದ್ದಾಗ ದುರಂತ ಸಂಭವಿಸಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಕ್ರೀಡಾಂಗಣದ ಗೇಟ್ ಸಂಖ್ಯೆ 2 ರ ಮುಂಭಾಗದ ಜಾಹೀರಾತು ಫಲಕವು ಅವರ ವಾಹನದ ಮೇಲೆ ಬಿದ್ದಿದೆ ಎಂದು ಅವರು ಹೇಳಿದರು. ಸರ್ತಾಜ್ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ತನಿಖೆ ಆರಂಭಿಸಿದ್ದೇವೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ : Odisha Train Accident: ರೈಲು ಅಪಘಾತ ಸಂಭವಿಸಿದ ಸ್ಥಳದಲ್ಲಿ ‘ಪ್ರೇಮ ಕವನಗಳು’ ಅನಾಥ!
ಸೋಷಿಯಲ್ ಮೀಡಿಯಾದಲ್ಲಿ ಓಡಾಡುತ್ತಿರುವವೀಡಿಯೊದಲ್ಲಿ, ಜಾಹೀರಾತು ಫಲಕದ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಚಾಲಕ ಸಹಾಯಕ್ಕಾಗಿ ತೀವ್ರವಾಗಿ ಬೇಡಿಕೊಳ್ಳುತ್ತಿರುವುದನ್ನು ಕಾಣಬಹುದು. ಚಂಡಮಾರುತದ ಪರಿಣಾಮವಾಗಿ ಬೃಹತ್ ಬೋರ್ಡ್ ಕುಸಿದಿದೆ ಎಂದು ಹೇಳಲಾಗಿದೆ.
A woman & her daughter were crushed to death, while the SUV driver was in critical condition, after a mammoth billboard collapsed on their car in front of Ekana cricket stadium in #Lucknow as a gusty wind hit the city at 5 pm.#UttarPradesh pic.twitter.com/G2qGq43GvN
— Arvind Chauhan (@Arv_Ind_Chauhan) June 5, 2023
ಪ್ರಾಥಮಿಕ ವರದಿಗಳ ಪ್ರಕಾರ, ಪೊಲೀಸರು ಘಟನಾ ಸ್ಥಳದಲ್ಲಿ ಹಾಜರಿದ್ದರು. ತಕ್ಷಣವೇ ಎಲ್ಲಾ ಪ್ರಯಾಣಿಕರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಸ್ಕಾರ್ಪಿಯೋ ಎಸ್ ಯುವಿ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿತ್ತು. ಹೀಗಾಗಿ ತಕ್ಷಣದಲ್ಲೇ ಒಳಗೆ ಸಿಲುಕಿದ್ದವರನ್ನು ಹೊರಗೆ ಎಳೆಯಲು ಸಾಧ್ಯವಾಗಿರಲಿಲ್ಲ. ಕ್ರೇನ್ ಸಹಾಯದಿಂದ ಬಿದ್ದ ಜಾಹೀರಾತು ಫಲಕವನ್ನು ತೆಗೆದು ಹಾಕಿ ಅವರನ್ನು ಹೊರಗೆಳೆಯಲಾಗಿದೆ.
ಎಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಇತ್ತೀಚೆಗೆ ನಡೆದ ಐಪಿಎಲ್ ಪಂದ್ಯಗಳಿಗೆ ಸಂಬಂಧಿಸಿದ ಹೋರ್ಡಿಂಗ್ ಇದಾಗಿದೆ. ಈ ಕ್ರೀಡಾಂಗಣವು 2018ರಲ್ಲಿ ತನ್ನ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನು ಆಯೋಜಿಸಿದ್ದು ಅಲ್ಲಿಂದ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಐಪಿಎಲ್ನ ಲಕ್ನೊ ಸೂಪರ್ ಜೈಂಟ್ಸ್ ತಂಡದ ತವರ ಸ್ಟೇಡಿಯಮ್ ಇದಾಗಿದೆ.
ದೇಶ
72 Hoorain: ಕಾಶ್ಮೀರ ಫೈಲ್ಸ್, ಕೇರಳ ಸ್ಟೋರಿ ಬಳಿಕ ಮತ್ತೊಂದು ವಿವಾದಾತ್ಮಕ ಸಿನಿಮಾ ’72 ಹೂರೇ’ ತೆರೆಗೆ ಬರಲು ಸಿದ್ಧ
72 Hoorain: ರಾಷ್ಟ್ರ ಪ್ರಶಸ್ತಿ ವಿಜೇತ ಸಂಜಯ್ ಪೂರನ್ ಸಿಂಗ್ ಚೌಹಾಣ್ ನಿರ್ದೇಶನದ 72 ಹೂರೇ ಚಿತ್ರದ ಟೀಸರ್ ಲಾಂಚ್ ಮಾಡಲಾಗಿದ್ದು, ಪರ ವಿರೋಧ ಚರ್ಚೆಗಳು ಶುರುವಾಗಿವೆ.
ನವದೆಹಲಿ: ದಿ ಕೇರಳ ಸ್ಟೋರಿ (The Kerala Story), ಕಾಶ್ಮೀರ್ ಫೈಲ್ (The Kashmir Files), ದಿ ಡೈರಿ ಆಫ್ ವೆಸ್ಟ್ ಬೆಂಗಾಲ್ ಸಿನಿಮಾ ಬೆನ್ನಲ್ಲೇ ಮತ್ತೊಂದು ವಿವಾದಾತ್ಮಕ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಇಸ್ಲಾಮಿಕ್ ತೀವ್ರವಾದದ ಕತೆಯನ್ನು ಹೊಂದಿರುವ 72 ಹೂರೇ(72 Hoorain) ಚಿತ್ರದ ಟೀಸರ್ ಲಾಂಚ್ ಆಗಿದ್ದು, ತೀವ್ರ ವಿರೋಧ ಕೂಡ ವ್ಯಕ್ತವಾಗಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ಸಂಜಯ್ ಪೂರನ್ ಸಿಂಗ್ ಚೌಹಾಣ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಟೀಸರ್ ಲಾಂಚ್ ಆಗುತ್ತಿದ್ದಂತೆ ನೆಟ್ಟಿಗರು, ಮುಸ್ಲಿಮ್ ಮತ್ತು ಇಸ್ಲಾಮ್‌ಗೆ ಅವಮಾನ ಮಾಡುವ ಪ್ರಾಪಗ್ಯಾಂಡ ಚಿತ್ರ ಎಂದು ಟೀಕಿಸಿದ್ದಾರೆ.
ಇತ್ತೀಚೆಗಷ್ಟೇ 72 ಹೂರೇ ಚಿತ್ರದ ಫಸ್ಟ್ ಲುಕ್ ಅನಾವರಣ ಮಾಡಲಾಗಿತ್ತು. ಆಗಲೂ ಟ್ವಿಟರ್‌ನಲ್ಲಿ ಸಾಕಷ್ಟು ಪರ ಮತ್ತು ವಿರೋಧ ಚರ್ಚೆಗಳು ಶುರುವಾಗಿದ್ದವು. ಭಾರತದ ಕೋಮು ಸೌಹಾರ್ದತೆಯನ್ನು ಹಾಳು ಮಾಡುವ ಪ್ರಯತ್ನಗಳ ನಡೆಯುತ್ತಿವೆ ಎಂದು ಟೀಕೆ ವ್ಯಕ್ತವಾಗಿತ್ತು.
ಚಿತ್ರದ ಟೀಸರ್‌ನಲ್ಲಿ ಒಸಾಮಾ ಬಿನ್ ಲಾಡೆನ್, ಅಜ್ಮಲ್ ಕಸಬ್ ಸೇರಿದಂತೆ ಇತರ ಚಿತ್ರಗಳನ್ನು ಮತ್ತು ಯಾಕೂಬ್ ಮೆಮನ್‌ನ ಮಿಶ್ರಿತ ಫೋಟೋವನ್ನು ತೋರಿಸಲಾಗಿದೆ. ಮೇಲ್ನೋಟಕ್ಕೆ ಟೀಸರ್‌ನಲ್ಲಿ ಕಾಣುವ ಅಂಶಗಳು ಖಂಡಿತವಾಗಿಯೂ, ಈ ಸಿನಿಮಾ ಕೂಡ ಮುಸ್ಲಿಮರು ಸುತ್ತ ಸುತ್ತದೆ ಎಂಬುದು ವೇದ್ಯವಾಗುತ್ತದೆ. ಉಗ್ರರಾದ ಮಸೂದ್ ಅಜರ್ ಮತ್ತು ಹಫೀಜ್ ಸಯೀದ್ ಅವರನ್ನು ಹೋಲುವರವನ್ನು ಹೈಲೆಟ್ ಮಾಡಲಾಗಿರುವುದನ್ನು ಕಾಣಬಹುದಾಗಿದೆ.
ಇದನ್ನೂ ಓದಿ: The Kerala Story : ದಿ ಕೇರಳ ಸ್ಟೋರಿ ಸಿನಿಮಾದ ಬಗ್ಗೆ ಕೆಂಡ ಕಾರಿದ ಹಿರಿಯ ನಟ ನಾಸಿರುದ್ದೀನ್ ಶಾ
72 ಹೂರೇ ಚಿತ್ರದ ಟ್ರೈಲರ್ ಅನ್ನು ಸಹ ನಿರ್ದೇಶಕರಾಗಿರುವ ಅಶೋಕ್ ಪಂಡಿತ್ ಅವರು ಟ್ವಿಟರ್‌ನಲ್ಲಿ ಷೇರ್ ಮಾಡಿದ್ದಾರೆ. ಇವರು ಕಾಶ್ಮೀರ ಪಂಡತ್ ಕೂಡ ಹೌದು. ನಮ್ಮ ಚಿತ್ರ 72 Hoorain ಸಿನಿಮಾದ ಮೊದಲ ನೋಟವನ್ನು ನಿಮಗೆ ಪ್ರಸ್ತುತಪಡಿಸುವ ಭರವಸೆಯಂತೆ. ನೀವು ಅದನ್ನು ಇಷ್ಟಪಡುತ್ತೀರಿ ಎಂದು ನನಗೆ ಖಾತ್ರಿಯಿದೆ. ಭಯೋತ್ಪಾದಕರ ಮಾರ್ಗದರ್ಶಕರು ಭರವಸೆ ನೀಡಿದಂತೆ 72 ಕನ್ಯೆಯರನ್ನು ಭೇಟಿಯಾಗುವ ಬದಲು ನೀವು ಕ್ರೂರವಾಗಿ ಸಾಯುತ್ತಿದ್ದರೆ? ನನ್ನ ಮುಂಬರುವ ಚಿತ್ರ 72 ಹೂರೇ ನ ಮೊದಲ ನೋಟವನ್ನು ಪ್ರಸ್ತುತಪಡಿಸುತ್ತಿದ್ದೇನೆ. ಚಿತ್ರವು 7 ಜುಲೈ 2023 ರಂದು ಬಿಡುಗಡೆಯಾಗಲಿದೆ ಎಂದು ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
72 ಹೂರೇ ಚಿತ್ರದ ಟೀಸರ್
-
ಕರ್ನಾಟಕ20 hours ago
Odisha Train Accident: ಒಡಿಶಾ ರೈಲು ದುರಂತಕ್ಕೆ ಕೋಮು ಬಣ್ಣ ನೀಡಿದ ಮಹಿಳೆ, ಒಡಿಶಾ ಪೊಲೀಸರಿಂದ ತನಿಖೆ
-
ಕರ್ನಾಟಕ17 hours ago
ವಿಶ್ವ ಪರಿಸರ ದಿನ: ಸಸಿ ನೆಡಿ, ಫೋಟೊ ಕಳುಹಿಸಿ; ವಿಸ್ತಾರ ನ್ಯೂಸ್ ಅಭಿಯಾನ
-
ಕರ್ನಾಟಕ15 hours ago
Murder Case: ಟೋಲ್ ವಿಚಾರಕ್ಕೆ ಕಿರಿಕ್; ಹಾಕಿ ಸ್ಟಿಕ್ನಿಂದ ಬಡಿದು ಕೊಂದೇಬಿಟ್ಟರು ದುರುಳರು
-
ಕರ್ನಾಟಕ11 hours ago
DK Shivakumar: ಹೊಸಕೆರೆಹಳ್ಳಿ ಕೆರೆ ಮಧ್ಯೆ ರಸ್ತೆ ಮಾಡಿದ್ದಕ್ಕೆ ಜಾಡಿಸಿದ ಡಿಕೆಶಿ; ಅಧಿಕಾರಿಗಳ ಅಮಾನತಿಗೆ ಆದೇಶ
-
ದೇಶ16 hours ago
Odisha Train Accident: ಗಾಯದ ಮೇಲೆ ಬರೆ ಎಂದರೆ ಇದೇ; ಒಡಿಶಾದಲ್ಲಿ ಹಳಿ ತಪ್ಪಿದ ಮತ್ತೊಂದು ರೈಲು
-
ಕರ್ನಾಟಕ8 hours ago
ಸರ್ಕಾರಿ ಬಸ್ ಓಡಿಸಿದ ಖಾಸಗಿ ವ್ಯಕ್ತಿ; ಕ್ರೂಸರ್ಗೆ ಡಿಕ್ಕಿ, ತಪ್ಪಿತು ಭಾರೀ ಅನಾಹುತ
-
ದೇಶ19 hours ago
world environment day : ಇಂದು ವಿಶ್ವ ಪರಿಸರ ದಿನ 2023: ಈ ದಿನದ ಮಹತ್ವ, ಇತಿಹಾಸ, ಥೀಮ್ ತಿಳಿಯಿರಿ
-
ಪರಿಸರ11 hours ago
ವಿಶ್ವ ಪರಿಸರ ದಿನ: ‘ಸಸಿ ನೆಡಿ, ಫೋಟೊ ಕಳುಹಿಸಿ’ ವಿಸ್ತಾರ ಅಭಿಯಾನ; ನಿಮ್ಮ ಮತ್ತಷ್ಟು ಫೋಟೊಗಳು ಇಲ್ಲಿವೆ