Site icon Vistara News

Muslim League: ಮುಸ್ಲೀಮ್ ಲೀಗ್ ಕೋಮವಾದಿಯೇ ಹೊರತು ಉಗ್ರಗಾಮಿಯಲ್ಲ ಎಂದ ಆರೆಸ್ಸೆಸ್

In the most of the cases RSS members are victims, not criminals: Says Supreme Court

ಕೊಚ್ಚಿ, ಕೇರಳ: ಮುಸ್ಲಿಮ್ ಲೀಗ್ (Muslim League) ಕೋಮವಾದಿ ಪಕ್ಷವಾಗಿದ್ದು, ಅದೊಂದು ಪ್ರಜಾಸತ್ತಾತ್ಮಕ ಸಂಘಟನೆಯಾಗಿದೆ. ಅಲ್ಲದೇ, ಅದು ಉಗ್ರಗಾಮಿ ವಾದವನ್ನು ಎಂದಿಗೂ ಬೆಂಬಲಿಸುವುದಿಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ(RSS) ಪ್ರಾಂತ ಸಂಘಚಾಲಕ ಕೆ ಕೆ ಬಲರಾಮ್ ಮತ್ತು ಪ್ರಾಂತ ಕಾರ್ಯವಾಹ ಪಿ ಎನ್ ಈಶ್ವರನ್ ಅವರು ಕೊಚ್ಚಿಯಲ್ಲಿ ಹೇಳಿದ್ದಾರೆ.

ಮಾರ್ಚ್ 12ರಿಂದ 14ರವರೆಗೆ ಹರ್ಯಾಣದ ಪಾಣಿಪತ್ ಜಿಲ್ಲೆಯ ಸಮಲ್ಖಾ ಎಂಬಲ್ಲಿ ಆರೆಸ್ಸೆಸ್ ರಾಷ್ಟ್ರೀಯ ಕಾರ್ಯಕಾರಿಣಿ ನಡೆದಿತ್ತು. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡ ಬಲರಾಮ್ ಮತ್ತು ಈಶ್ವರನ್ ಅವರು, ದೇಶದ್ರೋಹಿ ಮತ್ತು ಉಗ್ರಗಾಮಿಗಳಲ್ಲದ ಸಂಘಟನೆಗಳ ಜತೆಗೆ ಆರೆಸ್ಸೆಸ್ ಮಾತುಕತೆ ನಡೆಸಲು ಸಿದ್ಧವಿದೆ ಎಂದು ಹೇಳಿದರು.

ಜಮಾತ್ ಇ ಇಸ್ಲಾಮಿ ಜತೆ ಯಾವುದೇ ಮಾತುಕತೆ ನಡೆಸಲು ಸಾಧ್ಯವಿಲ್ಲ. ಇಸ್ಲಾಮಿಕ್ ವಿದ್ವಾಂಸರ ನಿಯೋಗವೊಂದು ನವದೆಹಲಿಯಲ್ಲಿ ಆರೆಸ್ಸೆಸ್ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದೆ. ಈ ನಿಯೋಗದಲ್ಲಿ ಜಮಾತ್ ಇ ಇಸ್ಲಾಮಿ ನಾಯಕರೊಬ್ಬರು ಇದ್ದರು. ತೀವ್ರವಾದವನ್ನು ವಿರೋಧಿಸುವ ಮತ್ತು ರಾಷ್ಟ್ರೀಯವಾದವನ್ನು ಬೆಂಬಲಿಸುವ ಯಾವುದೇ ಸಂಘಟನೆ ಜತೆ ಮಾತುಕತೆ ನಡೆಸಲು ನಾವು ಮುಕ್ತರಾಗಿದ್ದೇವೆ. ಇತ್ತೀಚೆಗಷ್ಟೇ ನಾವು, ಮುಸ್ಲಿಮ್ ಲೀಗ್ ಹಾಲಿ ಶಾಸಕ ಸೇರಿದಂತೆ ಕೆಲವು ಮುಸ್ಲಿಮ್ ನಾಯಕರ ಜತೆ ಮಲಪ್ಪುರಮ್ ಜಿಲ್ಲೆಯಲ್ಲಿ ಮಾತುಕತೆ ನಡೆಸಿದ್ದೇವೆ ಎಂದು ಈಶ್ವರನ್ ಅವರು ತಿಳಿಸಿದರು.

ಜಮಾತೆ ಇ ಇಸ್ಲಾಮಿ ಮತ್ತು ಮುಸ್ಲಿಮ್ ಲೀಗ್ ಸಂಬಂಧ ಆರೆಸ್ಸೆಸ್ ಭಿನ್ನವಾದ ನಿಲುವುಗಳನ್ನು ಹೊಂದಿದೆ. ಐಯುಎಂಎಲ್ ಜತೆ ಮಾತುಕತೆ ನಡೆಸಲು ನಾವು ಮುಕ್ತರಾಗಿದ್ದೇವೆ. ಯಾಕೆಂದರೆ, ಅವರ ವಿಚಾರಗಳು ತೀವ್ರವಾದದಿಂದ ಕೂಡಿವೆ ಎಂದು ನಾವು ಭಾವಿಸುವುದಿಲ್ಲ. ನಾವು ಮಾತುಕತೆ ನಡೆಸಿದ ಲೀಗ್ ನಾಯಕರು, ಎಂದಿಗೂ ತೀವ್ರವಾದವನ್ನು ಬೆಂಬಲಿಸುವುದಿಲ್ಲ ಎಂದು ತಿಳಿಸಿದ್ದಾರೆ. ಒಂದೊಮ್ಮೆ ಜಮಾತ್ ಇ ಇಸ್ಲಾಮಿ ಕೂಡ ತನ್ನ ನೀತಿಯಲ್ಲಿ ಬದಲಾವಣೆ ಮಾಡಿಕೊಂಡರೆ, ನಾವು ಮಾತುಕತೆಗೆ ಸಿದ್ಧರಾಗಿದ್ದೇವೆ. ಈ ಮುಸ್ಲಿಮ್ ಸಂಘಟನೆಗಳು ಆಯೋಜಿಸಿದ್ದ ಮೂರು ಕಾರ್ಯಕ್ರಮಗಳಲ್ಲಿ ಆರೆಸ್ಸೆಸ್ ಮುಖ್ಯಸ್ಥರಾದ ಮೋಹನ್ ಭಾಗವತ್ ಅವರು ಭಾಗವಹಿಸಿದ್ದರು ಎಂದು ಈಶ್ವರನ್ ಅವರು ತಿಳಿಸಿದರು.

ಇದನ್ನೂ ಓದಿ: ಸಲಿಂಗ ವಿವಾಹ ಸಾಧ್ಯವಿಲ್ಲ, ರಾಹುಲ್ ಜವಾಬ್ದಾರಿಯಿಂದ ಮಾತನಾಡಲಿ: ಆರೆಸ್ಸೆಸ್

ಕ್ರಿಶ್ಚಿಯನ್ ಸಮುದಾಯಗಳ ನಡುವೆ ಇರುವ ಸಂಶಯವನ್ನು ಹೋಗಲಾಡಿಸಲು ಆರೆಸ್ಸೆಸ್ ಯಶಸ್ವಿಯಾಗಿದೆ. ಇದರಿಂದಾಗಿ ಅವರೊಂದಿಗೆ ಆರೋಗ್ಯಕರ ಚರ್ಚೆಗಳನ್ನು ನಡೆಸಲು ಸಹಾಯ ಮಾಡಿದೆ ಎಂದು ಬಲರಾಮ್ ಹೇಳಿದರು. ನಾವು ರಾಜ್ಯ ಮಟ್ಟದಲ್ಲಿ ಮತ್ತು ಜಿಲ್ಲಾ ಮಟ್ಟದಲ್ಲಿ ಕ್ರಿಶ್ಚಿಯನ್ ಸಮುದಾಯಗಳೊಂದಿಗೆ ಚರ್ಚೆಗೆ ದೃಢವಾದ ವ್ಯವಸ್ಥೆಯನ್ನು ಹೊಂದಿದ್ದೇವೆ. ಕ್ರಿಶ್ಚಿಯನ್ ಸಮುದಾಯವೇ ಚರ್ಚೆಗೆ ಮುಂದಾಗಿದೆ. ಈ ಕಾರಣಕ್ಕೆ ನಾವು ಇತ್ತೀಚೆಗೆ ಅನೇಕ ಬಿಷಪ್‌ಗಳೊಂದಿಗೆ ಸಂವಾದ ನಡೆಸಿದ್ದೇವೆ ಎಂದು ಅವರು ತಿಳಿಸಿದರು.

Exit mobile version