ಭೋಪಾಲ್: ವಿಧಾನಸಭೆ ಚುನಾವಣೆಯಲ್ಲಿ (Assembly Election 2023) ಭಾರತೀಯ ಜನತಾ ಪಾರ್ಟಿಗೆ (BJP Party) ಮತ ಹಾಕಿದ್ದಕ್ಕಾಗಿ ಮನೆಯಿಂದವರಿಂದಲೇ ಹಲ್ಲೆಗೊಳಗಾಗಿದ್ದ ಮುಸ್ಲಿಮ್ ಮಹಿಳೆ (Muslim woman beaten) ಸಮೀನಾ ಬಿ ತನ್ನ ಇಬ್ಬರು ಮಕ್ಕಳೊಂದಿಗೆ ಮಧ್ಯ ಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ (Shivraj Singh Chouhan) ಅವರನ್ನು ಅವರ ಅಧಿಕೃತ ನಿವಾಸದಲ್ಲಿ ಭೇಟಿ ಮಾಡಿ, ರಕ್ಷಣೆ ಕೋರಿದರು. ಈ ಘಟನೆಯ ಕುರಿತು ತಿಳಿದು ಬಂದ ಬಳಿಕ, ಮುಸ್ಲಿಮ್ ಮಹಿಳೆಯನ್ನು ಭೇಟಿ ಮಾಡಲು ಶಿವರಾಜ್ ಸಿಂಗ್ ಚೌಹಾಣ್ ಮುಂದಾಗಿದ್ದರು. ಅಂತಿಮಾಗಿ ಅವರನ್ನು ಶುಕ್ರವಾರ ಭೇಟಿಯಾದರು.
ಮುಖ್ಯಮಂತ್ರಿಗಳು ಅವರಿಗೆ ಸುರಕ್ಷತೆ ಮತ್ತು ಭದ್ರತೆಯ ಭರವಸೆ ನೀಡಿದರು ಎಂದು ಮೂಲಗಳು ತಿಳಿಸಿವೆ. ತಮ್ಮ ಮಕ್ಕಳ ಬಗ್ಗೆ ಅವರು ತೋರಿದ ಕಾಳಜಿಯಿಂದ ಮತ್ತೊಮ್ಮೆ ಬಿಜೆಪಿಗೆ ಮತ ಹಾಕುವುದಾಗಿ ಸಮೀನಾ ಬಿ ಮುಖ್ಯಮಂತ್ರಿಗೆ ತಿಳಿಸಿದ್ದಾರೆ.
मजबूत लोकतंत्र के लिए भाजपा को अपना मत देने पर मेरी एक बहन को उसके परिवार द्वारा प्रताड़ित करने का मामला मेरे संज्ञान में आया है। मैंने इस संबंध में अधिकारियों को निर्देशित कर उचित कार्रवाई करने को कहा है। इसके साथ ही पीड़ित बहन को पूरी सुरक्षा व आर्थिक मदद भी दी जाएगी।
— Shivraj Singh Chouhan (@ChouhanShivraj) December 9, 2023
मेरी… pic.twitter.com/O2VO7EtNry
ನಾನು ಬಿಜೆಪಿಗೆ ಮತ ಹಾಕಿದ್ದೇನೆ ಎಂದು ತಿಳಿದ ನನ್ನ ಗಂಡನ ಸಹೋದರ ಜಾವೇದ್ ನನ್ನ ಮೇಲೆ ಹಲ್ಲೆ ನಡೆಸಿದರು. ಸಹೋದರ ಶಿವರಾಜ್ ಸಿಂಗ್ ಚೌಹಾಣ್ ಅವರ ಪಕ್ಷಕ್ಕೆ ನಾನು ಏಕೆ ಮತ ಹಾಕಿದ್ದೇನೆ ಎಂದು ಅವರು ಕೇಳಿದರು ಎಂದು ಇಬ್ಬರು ಮಕ್ಕಳ ತಾಯಿ ಹೇಳಿದ್ದಾರೆ.
ಶಿವರಾಜ್ ಸಿಂಗ್ ಚೌಹಾಣ್ ಅವರ ಜತೆಗಿನ ಭೇಟಿ ಚೆನ್ನಾಗಿತ್ತು ಎಂದು ಹೇಳಿದ ಸಮೀನಾ ಬಿ, ಭಯ್ಯಾ(ಚೌಹಾಣ್) ಅವರು ನನ್ನ ಮತ್ತು ಮಕ್ಕಳ ಸುರಕ್ಷತೆಯ ಭರವಸೆ ನೀಡಿದ್ದಾರೆ. ನನಗೆ ಸರಿಸಿದ್ದಕ್ಕಾಗಿ ನಾನು ವೋಟ್ ಮಾಡಿ್ದದೇನೆ. ಸಂವಿಧಾನವು ಅವರವರ ಆಯ್ಕೆಯಂತೆ ಮತ ಹಾಕಲು ಹಕ್ಕು ನೀಡಿದೆ ಎಂದು ಹೇಳಿದರು. ಚೌಹಾಮ್ ಅವರು ಎಂದಿಗೂ ತಪ್ಪು ಮಾಡಿಲ್ಲ. ಹಾಗಾಗಿ ನಾನು ಅವರಿಗೆ ಮತ ಹಾಕಿದ್ದೇನೆ ಎಂದು ಸಮೀನಾ ಬಿ ಹೇಳಿದರು.
ಚೌಹಾಣ್ ಅವರು ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದಾರೆ. “ಲಾಡ್ಲಿ ಬೆಹೆನಾ” ದಂತಹ ಯೋಜನೆಗಳ ಮೂಲಕ ವಿಧಾನಸಭೆ ಚುನಾವಣೆಯಲ್ಲಿ ಭಾರಿ ಗೆಲುವು ತಂದುಕೊಟ್ಟರು. ಆದಾಗ್ಯೂ, ಭಾರತೀಯ ಜನತಾ ಪಾರ್ಟಿಯ ಹೊಸ ಮುಖಗಳಿಗೆ ಈ ಬಾರಿ ಮುಖ್ಯಮಂತ್ರಿ ಪಟ್ಟ ಕಟ್ಟಲು ಯೋಜನೆ ಹಾಕಿಕೊಂಡಿದ್ದರು, ಶಿವರಾಜ್ ಸಿಂಗ್ ಚೌಹಾಣ್ ಅವರು ಮತ್ತೆ ಮುಖ್ಯಮಂತ್ರಿಯಾಗುವುದು ಅನುಮಾನ ಎಂದು ಹೇಳಲಾಗುತ್ತಿದೆ.
230 ಸ್ಥಾನಗಳ ಮಧ್ಯ ಪ್ರದೇಶಗ ವಿಧಾನಸಭೆಯಲ್ಲಿ ಭಾರತೀಯ ಜನತಾ ಪಾರ್ಟಿಯ 163 ಸ್ಥಾನಗಳನ್ನು ಗೆಲ್ಲುವ ಮೂಲಕ ಭರ್ಜರಿ ಜಯ ಸಾಧಿಸಿದೆ. ಹಾಗಿದ್ದೂ, ತಾನು ಪಕ್ಷದ ಕಾಲಾಳು ಆಗಿದ್ದು, ಮುಖ್ಯಮಂತ್ರಿಯ ಹುದ್ದೆಯ ರೇಸ್‌ನಲ್ಲಿ ತಾವಿಲ್ಲ ಎಂದು ಶಿವರಾಜ್ ಸಿಂಗ್ ಚೌಹಾಣ್ ಅವರು ಹೇಳಿದ್ದಾರೆ. ಅಲ್ಲದೇ, 2024ರ ಚುನಾವಣೆಯಲ್ಲಿ ಬಿಜೆಪಿ ಮಧ್ಯ ಪ್ರದೇಶದ 29 ಸ್ಥಾನಗಳನ್ನು ಗೆದ್ದುಕೊಡುವ ಪ್ರಯತ್ನ ಮಾಡುವುದಾಗಿ ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Madhya Pradesh: 2 ವರ್ಷದ ಹಿಂದೆ ಕೋವಿಡ್‌ನಿಂದ ಸತ್ತ ವ್ಯಕ್ತಿ, ಜೀವಂತವಾಗಿ ಪ್ರತ್ಯಕ್ಷ! ಮುಂದೆ ಏನಾಯ್ತು?