ಚೆನ್ನೈ: ಹೆಣ್ಣುಮಕ್ಕಳ ಮೇಲೆ ಬಾಲ್ಯದಲ್ಲಿ ಅವರ ಪಕ್ಕದ ಮನೆಯವರಿಂದಲೋ, ಸಂಬಂಧಿಕರಿಂದಲೋ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಗಳು ಸಾಕಷ್ಟಿರುತ್ತವೆ. ತಿಳಿವಳಿಕೆ ಕೊರತೆಯೋ, ಭಯದಿಂದಲೋ ಹೆಚ್ಚಿನ ಹೆಣ್ಣುಮಕ್ಕಳು ಈ ಕುರಿತು ಯಾರಿಗೂ ಹೇಳುವುದಿಲ್ಲ. ಆದರೆ, ತಮ್ಮ ತಂದೆಯಿಂದಲೇ ಬಾಲ್ಯದಲ್ಲಿ ಲೈಂಗಿಕ ದೌರ್ಜನ್ಯಕ್ಕೀಡಾಗಿರುವ ಕುರಿತು ಭಯಾನಕ ಮಾಹಿತಿಯನ್ನು ನಟಿ ಖುಷ್ಬು ಸುಂದರ್ (Khushbu Sundar) ಹೊರಹಾಕಿದ್ದಾರೆ.
“ನನಗೆ ಎಂಟು ವರ್ಷ ಇದ್ದಾಗಲೇ ನನ್ನ ತಂದೆ ಲೈಂಗಿಕ ದೌರ್ಜನ್ಯ ಎಸಗಿದ್ದರು. ಆಗ ನನಗೇನೂ ತಿಳಿಯುತ್ತಿರಲಿಲ್ಲ. ನನಗೆ 15 ವರ್ಷ ತುಂಬಿದ ಬಳಿಕವೇ ನಾನು ನನ್ನ ತಂದೆಯ ವಿರುದ್ಧ ಮಾತನಾಡಲು, ಧ್ವನಿಯೆತ್ತಲು ಧೈರ್ಯ ಬಂತು” ಎಂದು ಮಾಧ್ಯಮವೊಂದರ ಜತೆ ಮಾತನಾಡುವಾಗ ಬಿಜೆಪಿ ನಾಯಕಿಯೂ ಆದ ಖುಷ್ಬು ಸುಂದರ್ ದುಃಖ ತೋಡಿಕೊಂಡಿದ್ದಾರೆ.
“ನನ್ನ ತಾಯಿಯ ಮೇಲೆಯೂ ನನ್ನ ತಂದೆ ದೌರ್ಜನ್ಯ ಎಸಗುತ್ತಿದ್ದರು. ಕಿರುಕುಳ ನೀಡುತ್ತಿದ್ದರು. ನನ್ನ ಮೇಲೆ ನಡೆದ ದೌರ್ಜನ್ಯದ ಕುರಿತು ನನ್ನ ತಾಯಿ ಬಳಿ ಹೇಳಲು ಧೈರ್ಯವಿರುತ್ತಿರಲಿಲ್ಲ. ಏಕೆಂದರೆ, ಏನಾದರೂ ಮಾಡಲಿ, ಕಿರುಕುಳ ನೀಡಲಿ, ನನ್ನ ಪತಿಯೇ ದೈವ ಎಂಬುದಾಗಿ ನನ್ನ ತಾಯಿ ತಿಳಿದುಕೊಂಡಿದ್ದರು. ಅವರ ಸುತ್ತಲೂ ಅಂತಹ ವಾತಾವರಣ ನಿರ್ಮಾಣವಾಗಿತ್ತು” ಎಂದು ಖುಷ್ಬು ಹೇಳಿದ್ದಾರೆ.
ಇದನ್ನೂ ಓದಿ: Air India: ಒಂದು ವ್ಹೀಲ್ ಚೇರ್ ಕೂಡ ಇಲ್ಲ; ಏರ್ ಇಂಡಿಯಾದ್ದು ಅತ್ಯಂತ ಕಳಪೆ ಸೇವೆ ಎಂದು ಕಿಡಿ ಕಾರಿದ ಬಿಜೆಪಿ ನಾಯಕಿ ಖುಷ್ಬು