ನವದೆಹಲಿ: ಕಳೆದ ಮೇ ತಿಂಗಳಿನಿಂದ ನಡೆಯುತ್ತಿರುವ ಮಣಿಪುರ ಹಿಂಸಾಚಾರ (Manipur Violence) ಇನ್ನೂ ನಿಲ್ಲುವಂತೆ ಕಾಣುತ್ತಿಲ್ಲ. ಆಗಾಗ, ಹಿಂಸಾಚಾರ ಭುಗಿಲೇಳುತ್ತಿದೆ. ಆದರೆ, ಕುಕಿ ಮತ್ತು ಮೈತೈ ಸಮುದಾಯಗಳ ನಡುವೆ ನಡೆಯುತ್ತಿರುವ ಸಂಘರ್ಷದಲ್ಲಿ ಮಯನ್ಮಾರ್ ಪಿಡಿಎಫ್ ಬಂಡುಕೋರರು (Myanmar PDF Militants) ಶಾಮೀಲಾಗಿರುವ ಸಾಧ್ಯತೆಗಳಿವೆ ಎಂದು ಮಣಿಪುರ ಭದ್ರತಾ ಸಲಹೆಗಾರ ಕುಲ್ದೀಪ್ ಸಿಂಗ್ ಅವರು ಗುರುವಾರ ಆರೋಪಿಸಿದ್ದಾರೆ(Manipur Security Adviser Kuldiep Singh).
ಮಣಿಪುರದ ಗಡಿಯಲ್ಲಿರುವ ಮೊರೆ ಪಟ್ಟಣದಲ್ಲಿ ಬುಧವಾರ ಪೊಲೀಸ್ ಕಮಾಂಡೋಗಳ ಮೇಲೆ ದಾಳಿ ನಡೆದಿತ್ತು. ಈ ವೇಳೆ ಇಬ್ಬರು ಕಮಾಂಡೋಗಳು ಮೃತಪಟ್ಟಿದ್ದಾರೆ. ಇಂಫಾಲ್‌ನಿಂದ ಸುಮಾರು 110 ಕಿ.ಮೀ ದೂರದಲ್ಲಿರುವ ಜಾಗದಲ್ಲಿ ಈ ದಾಳಿ ನಡೆದಿತ್ತು. ಮಯನ್ಮಾರ್ ಬಂಡುಕೋರರು ಈ ದಾಳಿಯಲ್ಲಿ ಶಾಮೀಲಾಗಿರುವ ಸಾಧ್ಯತೆಗಳಿವೆ ಎಂದು ಭದ್ರತಾ ಸಲಹೆಗಾರ ಕುಲ್ದೀಪ್ ಸಿಂಗ್ ಅವರು ಹೇಳಿದ್ದಾರೆ.
ನಿನ್ನೆ ಮುಂಜಾನೆ ಹೆಚ್ಚಿನ ಸಂಖ್ಯೆಯ ಕುಕಿ ಬಂಡುಕೋರರು ಮೂರು ಸ್ಥಳಗಳಲ್ಲಿನ ಕಮಾಂಡೋ ಪೋಸ್ಟ್‌ಗಳ ಮೇಲೆ ಗುಂಡು ಹಾರಿಸಲು ಪ್ರಾರಂಭಿಸಿದರು. ಈ ವೇಳೆ ಇಬ್ಬರು ಕಮಾಂಡೋಗಳು ಮೃತಪಟ್ಟಿದ್ದಾರೆ ಎಂದು ಸಿಂಗ್ ಗುರುವಾರ ಸುದ್ದಿಗಾರರಿಗೆ ತಿಳಿಸಿದರು.
ಮೊರೆಹ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಪಿಡಿಎಫ್ ಬಂಡುಕೋರರು ಮತ್ತು ಬರ್ಮಾ ಕಡೆಯಿಂದ ಕೆಲವು ಉಗ್ರಗಾಮಿಗಳು ಮೋರೆಯಲ್ಲಿ ರಾಜ್ಯ ಪಡೆಗಳ ಮೇಲೆ ದಾಳಿ ಮಾಡಬಹುದು. ಈ ದಾಳಿಗಳನ್ನು ಎದುರಿಸಲು ರಾಜ್ಯ ಪಡೆಗಳು ಸನ್ನದ್ಧವಾಗಿವೆ. ದಾಳಿಗಳು ಹಲವು ದಿನಗಳಿಂದ ನಡೆಯುತ್ತಿವೆ. ಆದರೆ ಗುಂಡಿನ ಚಕಮಕಿಯು ದೂರದ ಪ್ರದೇಶಗಳಿಂದ ಬರುತ್ತಿದೆ, ಹತ್ತಿರದ ಪ್ರದೇಶಗಳಿಂದಲ್ಲ. ಜುಂಟಾ ವಿರುದ್ಧ ಹೋರಾಡುತ್ತಿರುವ ಮಯನ್ಮಾರ್ ದಂಗೆಕೋರ ಗುಂಪು ಪೀಪಲ್ಸ್ ಡಿಫೆನ್ಸ್ ಫೋರ್ಸ್ (ಪಿಡಿಎಫ್) ಅನ್ನು ಉಲ್ಲೇಖಿಸಿ ಸಿಂಗ್ ಅವರು ಗುರುವಾರ ಸುದ್ದಿಗಾರರಿಗೆ ತಿಳಿಸಿದರು.
ಈ ಸುದ್ದಿಯನ್ನೂ ಓದಿ: Manipur: ಮಣಿಪುರದಲ್ಲಿ ಮತ್ತೆ ಹಿಂಸಾಚಾರ; ನಾಲ್ವರ ಕಗ್ಗೊಲೆ, ಐದು ಜಿಲ್ಲೆಯಲ್ಲಿ ಕರ್ಫ್ಯೂ ಹೇರಿಕೆ