Site icon Vistara News

Latur: ಲಾತೂರ್ ನಗರದಲ್ಲಿ ಭೂಮಿಯಿಂದ ನಿಗೂಢ ಶಬ್ದ, ಭೂಕಂಪದ ಮುನ್ಸೂಚನೆಯಾ?

Earthquake in Delhi

Minor tremors felt in Delhi, 2.6 magnitude earthquake strikes north district

ಲಾತೂರ್, ಮಹಾರಾಷ್ಟ್ರ: ಕಳೆದ ಕೆಲವು ದಿನಗಳಿಂದ ಮಹಾರಾಷ್ಟ್ರದ ಲಾತೂರ್ (Latur) ನಗರದಲ್ಲಿ ಕೇಳಿ ಬರುತ್ತಿರುವ ಭೂಗತ ನಿಗೂಢ ಶಬ್ದವು ಆತಂಕಕ್ಕೆ ಕಾರಣವಾಗಿದೆ. ಇದು ಭೂಕಂಪದ (Earthquake) ಮುನ್ಸೂಚನೆ ಎಂದು ಭಾವಿಸಿರುವ ಜನರು ಹೆಚ್ಚು ಭಯಭೀತರಾಗಿದ್ದಾರೆ. ಬುಧವಾರ ಬೆಳಗ್ಗೆ 10.30ರಿಂದ 10.45ರ ನಡುವೆ ನಗರದ ವಿವೇಕಾನಂದ ಚೌಕ ಪ್ರದೇಶದಲ್ಲಿ ಭೂಗತವಾಗಿ ಭಾರೀ ಶಬ್ದ ಕೇಳಿದೆ. ಇದರಿಂದ ಭೂಕಂಪ ಸಂಭವಿಸಿದೆ ಎಂದು ಗಾಳಿ ಸುದ್ದಿ ಹಬ್ಬಿದ್ದರಿಂದ ಜನರು ಆತಂಕಗೊಂಡಿದ್ದರು. ಆದರೆ, ಯಾವುದೇ ಭೂಕಂಪವಾಗಿಲ್ಲ ಎಂಬುದು ಆ ಮೇಲೆ ಖಚಿತಪಟ್ಟಿದೆ.

ಕೆಲವು ಜನರು ಸ್ಥಳೀಯ ಆಡಳಿತವನ್ನು ಎಚ್ಚರಿಸಿದ ನಂತರ ಜಿಲ್ಲಾ ವಿಪತ್ತು ನಿರ್ವಹಣಾ ಇಲಾಖೆಯು ಲಾತೂರ್ ನಗರದ ಭೂಕಂಪದ ಮಾಪನ ಕೇಂದ್ರಗಳು ಮತ್ತು ಜಿಲ್ಲೆಯ ಔರಾದ್ ಶಹಾಜ್ನಿ ಮತ್ತು ಆಶಿವ್‌ನಿಂದ ಮಾಹಿತಿಯನ್ನು ಪಡೆದುಕೊಂಡಿತು. ಆದರೆ, ಯಾವುದೇ ಭೂಕಂಪದ ತೀವ್ರತೆ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 1993ರಲ್ಲಿ ಲಾತೂರ್ ಜಿಲ್ಲೆಯಲ್ಲಿ ಸಂಭವಿಸಿದ ಭೂಕಂಪದಲ್ಲಿ ಸುಮಾರು 10 ಸಾವಿರ ಜನರು ಮೃತಪಟ್ಟಿದ್ದರು.

ಇದನ್ನೂ ಓದಿ: Farmers Suicide | ಕಳೆದ ವರ್ಷ ಮಹಾರಾಷ್ಟ್ರದ ಮರಾಠವಾಡದಲ್ಲಿ 1023 ರೈತರ ಆತ್ಮಹತ್ಯೆ!

ಮಹಾರಾಷ್ಟ್ರದ ಮರಾಠವಾಡ ಪ್ರದೇಶ ವ್ಯಾಪ್ತಿಯಲ್ಲಿ ಈ ರೀತಿಯ ಶಬ್ದವು ಆಗಾಗ ಕೇಳಿಸುತ್ತದೆ. 2022 ಸೆಪ್ಟೆಂಬರ್‌ನಲ್ಲಿ ಈ ರೀತಿಯ ಶಬ್ದ ಮೂರು ಬಾರಿ, ಹಸೋರಿ, ಕಿಲ್ಲಾರಿ ಸೇರಿದಂತೆ ಲಾತೂರ್ ಜಿಲ್ಲೆಯ ಇತರ ಭಾಗಗಳಲ್ಲಿ ಕೇಳಿಸಿತ್ತು. ಇದೇ ವರ್ಷ ಫೆಬ್ರವರಿ 4ರಂದು ಇದೇ ರೀತಿಯ ಶಬ್ದ ಕೇಳಿ ಬಂದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Exit mobile version