ಪಣಜಿ: ಜಮ್ಮು-ಕಾಶ್ಮೀರದಲ್ಲಿ ಪಂಡಿತರ ಹತ್ಯಾಕಾಂಡದ ಚಿತ್ರಣವಿರುವ ‘ದಿ ಕಾಶ್ಮೀರ್ ಫೈಲ್ಸ್’ (The Kashmir Files) ಸಿನಿಮಾ ‘ಪ್ರಪಗಂಡ’ ಇರುವ ಸಿನಿಮಾ ಎಂದು ಹೇಳಿಕೆ ನೀಡಿದ್ದು ವಿವಾದಕ್ಕೆ ಕಾರಣವಾದ ಬೆನ್ನಲ್ಲೇ ಇಂಟರ್‌ನ್ಯಾಷನಲ್ ಫಿಲಂ ಫೆಸ್ಟಿವಲ್ ಆಫ್ ಇಂಡಿಯಾ (IFFI)ದ ಜ್ಯೂರಿ, ಇಸ್ರೇಲ್ ಸಿನಿಮಾ ನಿರ್ದೇಶಕ ನಡಾವ್ ಲ್ಯಾಪಿಡ್ ಯುಟರ್ನ್ ತೆಗೆದುಕೊಂಡಿದ್ದಾರೆ. ದಿ ಕಾಶ್ಮೀರ್ ಫೈಲ್ಸ್ ಒಂದು ಅದ್ಭುತ ಸಿನಿಮಾ (Brilliant Film) ಎಂದು ಬಣ್ಣಿಸಿದ್ದಾರೆ.
“ದಿ ಕಾಶ್ಮೀರ್ ಫೈಲ್ಸ್ ಸಿನಿಮಾದಲ್ಲಿ ಯಾವ ಪ್ರಪಗಂಡ ಇದೆ ಎಂಬುದನ್ನು ನಿರ್ಧರಿಸಲು ಯಾರಿಂದಲೂ ಸಾಧ್ಯವಿಲ್ಲ. ತುಂಬ ಜನ ಇದನ್ನು ವೀಕ್ಷಿಸಿದ್ದಾರೆ ಹಾಗೂ ಅದು ಅವರಿಗೆ ಅದ್ಭುತ ಸಿನಿಮಾ ಆಗಿರಬಹುದು. ನಾನು ಜನರ ಭಾವನೆಗಳಿಗೆ ಗೌರವ ನೀಡುತ್ತೇನೆ. ಅಷ್ಟಕ್ಕೂ, ನಾನು ಹೇಳಿದ್ದೇ ಅಂತಿಮ ಅಲ್ಲ. ಅಷ್ಟಕ್ಕೂ, ನಾನು ನನ್ನ ದೃಷ್ಟಿಕೋನ, ನಾನು ನೋಡಿದ್ದು, ಕಂಡಿದ್ದನ್ನು ಹೇಳಿದ್ದೇನೆ” ಎಂದು ತಿಳಿಸಿದ್ದಾರೆ.
ಗೋವಾದಲ್ಲಿ ನಡೆದ ಇಂಟರ್‌ನ್ಯಾಷನಲ್ ಫಿಲಂ ಫೆಸ್ಟಿವಲ್ ಆಫ್ ಇಂಡಿಯಾ (IFFI) ಸಮಾರೋಪ ಸಮಾರಂಭದಲ್ಲಿ ಮಾತನಾಡಿದ್ದ ಲ್ಯಾಪಿಡ್, “ದಿ ಕಾಶ್ಮೀರ್ ಫೈಲ್ಸ್ ಪ್ರಪಗಂಡ ಒಳಗೊಂಡಿರುವ ಸಿನಿಮಾ” ಎಂದಿದ್ದರು. ಇದು ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.
ಇದನ್ನೂ ಓದಿ | Vivek Agnihotri | ವಿವಾದದ ಬೆನ್ನಲ್ಲೇ ‘ದಿ ಕಾಶ್ಮೀರ್ ಫೈಲ್ಸ್’ ಪಾರ್ಟ್ 2 ಘೋಷಿಸಿದ ವಿವೇಕ್ ಅಗ್ನಿಹೋತ್ರಿ