Site icon Vistara News

Narendra Modi : ಮೋದಿ ಮತ್ತು ಖಾದಿ; ಬಿಡಿಸಲಾಗದ ಅನುಬಂಧ!

#image_title

ನವದೆಹಲಿ: ಖಾದಿ ನಮ್ಮ ಭಾರತದ ಹೆಮ್ಮೆ. ಆದರೆ ಈ ಖಾದಿಗೆ ಹೆಚ್ಚಿನ ಮಟ್ಟಿನ ಪ್ರಚಾರ ಸಿಗದೆ ಎಲ್ಲೋ ಮೂಲೆಗುಂಪಾಗಿದ್ದು ಸುಳ್ಳಲ್ಲ. ಈ ವಿಚಾರವನ್ನು ಗಮನಿಸಿದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಸ್ವತಃ ತಾವೇ ಖಾದಿಯ ಪ್ರಚಾರಕ್ಕಿಳಿದರು. ಕೇವಲ ರಾಷ್ಟ್ರೀಯ ಮಟ್ಟದಲ್ಲಿ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖಾದಿಯ ಪ್ರಚಾರ ನಡೆಸಿದರು. ಇದೀಗ ನಮ್ಮ ಖಾದಿ ಜಾಗತಿಕ ಮಟ್ಟದಲ್ಲೂ ಬೇಡಿಕೆಯಲ್ಲಿರುವ ಬಟ್ಟೆಯಾಗಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಜಿ 7 ಶೃಂಗಸಭೆ ನಡೆದಿದೆ. ಅದರಲ್ಲೂ ಕೂಡ ಪ್ರಧಾನಿ ಅವರು ಧರಿಸಿದ್ದ ಬಟ್ಟೆ ಬಹಳಷ್ಟು ವಿಶೇಷತೆಗಳನ್ನು ಹೊಂದಿತ್ತು. ಪಾಲಿಥಿಲೀನ್ ಟೆರೆಫ್ತಾಲೇಟ್ (PET) ಬಾಟೆಲ್‌ಗಳನ್ನು ಮರುಬಳಕೆ ಮಾಡಿ ತಯಾರಿಸಿದ ಕೋಟ್‌ ಅನ್ನು ಅವರು ಧರಿಸಿದ್ದರು. ಚಂದನ ಬಣ್ಣದ ಆ ಕೋಟನ್ನು ತಮಿಳುನಾಡಿನ ಇಕೋಲೈನ್‌ ಹೆಸರಿನ ಸಂಸ್ಥೆ ನಿರ್ಮಿಸಿದೆ.

ಇದನ್ನೂ ಓದಿ: Narendra Modi: ಆಸ್ಟ್ರೇಲಿಯಾದಲ್ಲೂ ಅದ್ಧೂರಿ ಸ್ವಾಗತ; ಭಾರತ್‌ ಮಾತಾ ಕಿ ಜೈ, ಹರ ಹರ ಮೋದಿ ಘೋಷಣೆ
ಅಂದ ಹಾಗೆ ಪ್ರಧಾನಿ ಅವರು ಈ ರೀತಿಯ ಮರುಬಳಕೆ ಬಾಟಲಿಯಿಂದ ತಯಾರಾದ ಕೋಟನ್ನು ಧರಿಸುತ್ತಿರುವುದು ಇದೇ ಮೊದಲಲ್ಲ. ಈ ವರ್ಷ ಫೆಬ್ರವರಿಯಲ್ಲಿ ಲೋಕಸಭೆಯಲ್ಲಿ ಬಜೆಟ್‌ ಅಧಿವೇಶನ ನಡೆದಾಗಲೂ ಅವರು ಇದೇ ಕಂಪನಿಯ ಕೋಟನ್ನು ಧರಿಸಿದ್ದರು. ತಿಳಿ ನೀಲಿ ಬಣ್ಣದ್ದಾಗಿದ್ದ ಆ ಕೋಟ್‌ ಅನ್ನು ಅವರಿಗೆ ಭಾರತೀಯ ತೈಲ ನಿಗಮವು ಉಡುಗೊರೆಯಾಗಿ ಕೊಟ್ಟಿತ್ತು.

“ಪ್ರಧಾನಿ ನರೇಂದ್ರ ಮೋದಿಯವರು ಮತ್ತೊಮ್ಮೆ ಇಕೋಲೈನ್ ಉಡುಪು ತೊಡುವುದಕ್ಕೆ ಆಯ್ಕೆ ಮಾಡಿಕೊಂಡಿರುವುದನ್ನು ನೋಡಿ ನಮಗೆ ಅಪಾರವಾದ ಸಂತೋಷವಾಗಿದೆ” ಎಂದು ಇಕೋಲೈನ್ ಉಡುಪುಗಳ ವ್ಯವಸ್ಥಾಪಕ ಪಾಲುದಾರ ಸೆಂಥಿಲ್ ಶಂಕರ್ ಹೇಳಿದ್ದಾರೆ.

ಮೋದಿ ಕುರ್ತಾ

ಈ ರೀತಿಯ ಜಾಕೆಟ್‌ಗಳು ಮಾತ್ರವಲ್ಲ, ಕುರ್ತಾಗಳ ವಿಚಾರದಲ್ಲಿಯೂ ಮೋದಿ ಅವರ ಸ್ಟೈಲ್‌ ಬಹಳಷ್ಟು ವಿಶಿಷ್ಟ. ನೀವು ಗಮನಿಸಿರುವ ಹಾಗೆ ಮೋದಿ ಅವರು ಯಾವಾಗಲೂ ಹಾಫ್‌ ತೋಳಿರುವ ಕಾಟನ್‌ ಕುರ್ತಾಗಳನ್ನೇ ಧರಿಸುತ್ತಾರೆ. ಅದಕ್ಕೆ ಕಾರಣಗಳೂ ಇವೆಯಂತೆ. ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಅವರು ಪ್ರಧಾನಿ ಅವರೊಂದಿಗೆ ಸಂದರ್ಶನ ನಡೆಸುವಾಗ ಈ ಬಗ್ಗೆ ಪ್ರಶ್ನೆ ಕೇಳಿದ್ದರು ಕೂಡ. ಅದಕ್ಕೆ ಉತ್ತರಿಸಿದ್ದ ಮೋದಿ, “ನಾನು ಯಾವಾಗಲೂ ಚಿಕ್ಕ ಬ್ಯಾಗ್‌ನೊಂದಿಗೆ ಪ್ರಯಾಣ ಮಾಡಲು ಬಯಸುತ್ತೇನೆ. ಪೂರ್ಣ ತೋಳು ಇರುವ ಕುರ್ತಾ ಆದರೆ ಜಾಸ್ತಿ ಜಾಗ ಬೇಕಾಗುತ್ತದೆ. ಅದೇ ಹಾಫ್‌ ತೋಳು ಇರುವ ಕುರ್ತಾ ಆದರೆ ಕಡಿಮೆ ಜಾಗ ಸಾಕಾಗುತ್ತದೆ. ಅದಕ್ಕಾಗಿ ಹಾಫ್‌ ತೋಳಿರುವ ಕುರ್ತಾಗಳನ್ನೇ ಹಾಕಿಕೊಳ್ಳುತ್ತೇನೆ” ಎಂದಿದ್ದರು.


ಹಾಗೆಯೇ ಪ್ರಧಾನಿ ಮೋದಿ ಅವರು ಅಧಿಕೃತ ವೆಬ್‌ಸೈಟ್‌ನಲ್ಲಿ ಹೇಳಿರುವ ಪ್ರಕಾರ ಪ್ರಧಾನಿ ಅವರು ಆರ್‌ಎಸ್‌ಎಸ್‌ ಮತ್ತು ಬಿಜೆಪಿಯ ಕಾರ್ಯಕರ್ತರಾಗಿದ್ದಾಗ ಹೆಚ್ಚಾಗಿ ಪ್ರಯಾಣ ಮಾಡಬೇಕಾಗಿತ್ತಂತೆ. ಹಾಗೆಯೇ ತಮ್ಮ ಎಲ್ಲ ಕೆಲಸಗಳನ್ನು ತಾವೇ ಮಾಡಿಕೊಳ್ಳಬೇಕಿತ್ತು. ಆಗ ಸಿಗುತ್ತಿದ್ದ ಕಡಿಮೆ ಸಮಯದಲ್ಲಿ ತಮ್ಮ ಬಟ್ಟೆಯನ್ನು ತಾವೇ ತೊಳೆದುಕೊಳ್ಳಬೇಕಿತ್ತು. ಉದ್ದ ತೋಳಿನ ಕುರ್ತಾಗಳನ್ನು ತೊಳೆಯುವುದಕ್ಕೆ ಹೆಚ್ಚು ಸಮಯ ಬೇಕಾಗುತ್ತಿತ್ತು. ಆದರೆ ಹಾಫ್‌ ತೋಳಿನ ಕುರ್ತಾ ತೊಳೆಯುವುದಕ್ಕೆ ಕಡಿಮೆ ಸಮಯ ಸಾಕಾಗುತ್ತದ್ದರಿಂದ ಅದರತ್ತಲೇ ಮೋದಿ ಅವರಿಗೆ ಹೆಚ್ಚಿನ ಒಲವಾಗಿತ್ತು.

ಖಾದಿ ಫಾರ್‌ ನೇಷನ್‌, ಖಾದಿ ಫಾರ್‌ ಫ್ಯಾಷನ್‌

ಪ್ರಧಾನಿ ಮೋದಿ ಅವರ ಪ್ರಸಿದ್ಧ ಘೋಷಣೆಗಳಲ್ಲಿ ಒಂದು ಖಾದಿ ಫಾರ್‌ ನೇಷನ್‌, ಖಾದಿ ಫಾರ್‌ ಫ್ಯಾಷನ್‌, ಖಾದಿ ಫಾರ್‌ ಟ್ರಾನ್ಸ್ಫರ್ಮೇಷನ್‌. ವಿಶ್ವದ ಯಾವುದೇ ಮೂಲೆಗೆ ಹೋಗುವುದಾದರೂ ಪ್ರಧಾನಿ ಅವರು ಹೆಚ್ಚಾಗಿ ಖಾದಿಯನ್ನೇ ತೊಡುವುದಕ್ಕೆ ಪ್ರಾಮುಖ್ಯತೆ ಕೊಡುತ್ತಾರೆ. ಗಾಂಧಿ ಜಯಂತಿಯಂದು ಎಲ್ಲರೂ ಖಾದಿ ತೊಡಬೇಕು ಎಂದು ಹೇಳಿ ಖಾದಿಯನ್ನು ಪ್ರೋತ್ಸಾಹಿಸಿದ್ದನ್ನೂ ಕೂಡ ಮರೆಯುವಂತಿಲ್ಲ.

ಇದನ್ನೂ ಓದಿ: 2000 Notes Withdrawn : ಮೋದಿ 2,000 ರೂ. ನೋಟು ಬಯಸಿರಲಿಲ್ಲ: ಮಾಜಿ ಕಾರ್ಯದರ್ಶಿ ಹೇಳಿದ್ದೇನು?
2023ರ ಲಾಕ್ಮೆ ಫ್ಯಾಷನ್‌ ವೀಕ್‌ನಲ್ಲಿ ಕೂಡ ಖಾದಿಯನ್ನು ವಿಶೇಷವಾಗಿ ಪ್ರಸ್ತುತಪಡಿಸಲಾಯಿತು. ಪ್ರಧಾನಿ ಅವರಿಂದ ಸ್ಫೂರ್ತಿ ಪಡೆದು ಖಾದಿಯನ್ನು ಪ್ರಸ್ತುತಪಡಿಸಿದ್ದಾಗಿ ಕೆವಿಐಸಿ ಅಧ್ಯಕ್ಷ ಮನೋಜ್‌ ಕುಮಾರ್‌ ಅವರು ಹೇಳಿದ್ದರು.

ಸಂಸ್ಕೃತಿಯ ಸಂಕೇತ

ಪ್ರಧಾನಿಯವರು ಬೇರೆ ಬೇರೆ ರಾಜ್ಯಗಳಿಗೆ ಹೋದಾಗ ಅಲ್ಲಿನ ಸಂಸ್ಕೃತಿಯನ್ನು ಗೌರವಿಸುವ ಪರಿಯನ್ನೂ ಮರೆಯುವಂತಿಲ್ಲ. ಅದು ಸಾಂಪ್ರದಾಯಿಕ ನಾಗಾ ಯೋಧರ ಶಿರಸ್ತ್ರಾಣವಾಗಿರಲಿ ಅಥವಾ ಶಿಲ್ಲಾಂಗ್‌ನಲ್ಲಿನ ಗಾರೋ ಟೋಪಿಯಾಗಿರಲಿ, ನರೇಂದ್ರ ಮೋದಿ ಅವರು ಯಾವಾಗಲೂ ಪ್ರತಿಯೊಂದು ಸಾಂಪ್ರದಾಯಿಕ ಭಾರತೀಯ ಉಡುಪನ್ನು ತೆರೆದ ಮನಸ್ಸಿನಿಂದ ಸ್ವೀಕರಿಸುತ್ತಾರೆ.

Exit mobile version