Site icon Vistara News

Viral Video: ರಾಹುಲ್‌ ಗಾಂಧಿ, ಪ್ರಿಯಾಂಕಾ ಎಂದು ಭಾವಿಸಿ ಮಕ್ಕಳಿಗೆ ಮೋದಿ ಪ್ರಾಂಕ್? ಚರ್ಚೆ ಶುರು

Narendra Modi With Children

Narendra Modi behaved with the young girl and boy as if they were Rahul or Priyanka Gandhi; Post Goes Viral

ರಾಂಚಿ: ಪ್ರಧಾನಿ ನರೇಂದ್ರ ಮೋದಿ ಅವರು ಇಬ್ಬರು ಮಕ್ಕಳ ಜತೆಗೂಡಿ ಜಾದೂ (Prank) ಮಾಡಿದ ವಿಡಿಯೊ ಈಗ ಭಾರಿ ವೈರಲ್‌ ಆಗಿದೆ. ಮಕ್ಕಳ ಹಣೆಗೆ ನಾಣ್ಯ ಅಂಟಿಸಿ, ಬಳಿಕ ಅದನ್ನು ಮಾಯ ಮಾಡುವ ವಿಡಿಯೊಗೆ ಒಂದಷ್ಟು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನೂ ಒಂದಷ್ಟು ಜನ ಟೀಕೆಗಳ ಚಾಟಿ ಬೀಸಿದ್ದಾರೆ. ಇದರ ಬೆನ್ನಲ್ಲೇ, “ಆ ಇಬ್ಬರು ಮಕ್ಕಳನ್ನು ಮೋದಿ (Narendra Modi) ಅವರು ಕಾಂಗ್ರೆಸ್‌ ನಾಯಕರಾದ ರಾಹುಲ್‌ ಗಾಂಧಿ (Rahul Gandhi) ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಎಂದೇ ಭಾವಿಸಿ ಪ್ರಾಂಕ್‌ ಮಾಡಿದ್ದಾರೆ” ಎಂಬ ವಿಡಿಯೊ (Viral Video) ವೈರಲ್‌ ಆಗಿದೆ.

ವೈರಲ್‌ ಆಗಿರುವ ವಿಡಿಯೊವನ್ನು ವ್ಯಕ್ತಿಯೊಬ್ಬರು ಪೋಸ್ಟ್‌ ಮಾಡಿದ್ದು, “ರಾಹುಲ್‌ ಗಾಂಧಿ ಹಾಗೂ ಪ್ರಿಯಾಂಕಾ ವಾದ್ರಾ ಅವರು ಮಕ್ಕಳಾಗಿದ್ದರೆ ಮೋದಿ ಹೀಗೆಯೇ ಮಾಡುತ್ತಿದ್ದರು” ಎಂದು ಬರೆದುಕೊಂಡಿದ್ದಾರೆ. ಮತ್ತೊಂದೆಡೆ, ಮೋದಿ ವಿರೋಧಿಗಳು ಕೂಡ, “ರೂಪಾಯಿ ಮೌಲ್ಯ ಹೇಗೆ ಕುಸಿಯಿತು ಎಂಬುದನ್ನು ಮೋದಿ ಪ್ರಾತ್ಯಕ್ಷಿಕೆ ಮೂಲಕ ತೋರಿಸಿದ್ದಾರೆ” ಎಂದು ಟೀಕಿಸಿದ್ದಾರೆ. ಹೀಗೆ ಹಲವು ರೀತಿಯಲ್ಲಿ ಜಾಲತಾಣಗಳಲ್ಲಿ ಚರ್ಚೆಯಾಗಿದೆ.

ಮೋದಿ ಮಾಡಿದ್ದೇನು?

ಜಾರ್ಖಂಡ್‌ನ ರಾಂಚಿಯಲ್ಲಿರುವ ಗವರ್ನರ್‌ ಹೌಸ್‌ನಲ್ಲಿ ತಮ್ಮನ್ನು ಭೇಟಿ ಮಾಡಲು ಬಂದ ಮಕ್ಕಳ ಮುಂದೆ ಅವರು ಮಗುವೇ ಆದರು. ಮಕ್ಕಳ ಕಿವಿಗಳನ್ನು ಹಿಡಿದು ಒಂದಕ್ಕೊಂದು ತಾಕಿಸುವ ಆಟವಾಡಿದರು. ಹಣೆಯ ಮೇಲೆ ನಾಣ್ಯವನ್ನು ಅಂಟಿಸಿ ಅದನ್ನು ಮಾಯ ಮಾಡುವ ಮ್ಯಾಜಿಕ್‌ ಅನ್ನೂ ಮಾಡಿ ತೋರಿಸಿದರು. ನಂತರ ಮಕ್ಕಳು ನಾಣ್ಯ ಕಾಣದೆ ಅಚ್ಚರಿಗೊಂಡಾದ ದೊಡ್ಡದಾಗಿ ನಕ್ಕುಬಿಟ್ಟರು.

ಇದನ್ನೂ ಓದಿ: PM Narendra Modi: ಮಕ್ಕಳನ್ನು ಪ್ರಾಂಕ್‌ ಮಾಡಿದ ಪ್ರಧಾನಿ ಮೋದಿ! ವಿಡಿಯೋ ವೈರಲ್

ಈ ವಿಡಿಯೊವನ್ನು ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ʼʼನನ್ನ ಎಳೆಯ ಗೆಳೆಯರ ಜತೆಗೆ ಕೆಲವು ಮರೆಯಲಾಗದ ಕ್ಷಣಗಳುʼʼ ಎಂದು ಕ್ಯಾಪ್ಷನ್‌ ಕೂಡ ಹಾಕಿದ್ದಾರೆ. ಇದಕ್ಕೂ ಮೊದಲು ಕೂಡ ಪ್ರಧಾನಿ ನರೇಂದ್ರ ಮೋದಿ ಅವರು ಮಕ್ಕಳ ಜತೆಗೆ ಕಳೆದ ಮಧುರ ಕ್ಷಣಗಳ ವಿಡಿಯೊಗಳನ್ನು, ಫೋಟೊಗಳನ್ನು ಹಂಚಿಕೊಂಡಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version