Site icon Vistara News

Independence Day | ಕೆಂಪು ಕೋಟೆ ಮೇಲೆ ನಿಂತು ಕುಟುಂಬ ರಾಜಕಾರಣ ವಿರುದ್ಧ ಗುಡುಗಿದ ಮೋದಿ

modi

ನವ ದೆಹಲಿ: ಸ್ವಾತಂತ್ರ್ಯ ದಿನಾಚರಣೆ (Independence Day) ಭಾಷಣದ ವೇಳೆ ಕುಟುಂಬ ರಾಜಕಾರಣದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಗುಡುಗಿದ್ದು, “ದೇಶದ ಪ್ರತಿಯೊಬ್ಬ ನಾಗರಿಕರೂ ಭಾಯಿ-ಭತೀಜಾವಾದ (Bhai-Bhatijawad-ಸ್ವಜನ ಪಕ್ಷಪಾತ) ಅಥವಾ ಕುಟುಂಬ ರಾಜಕಾರಣದ ವಿರುದ್ಧ ಹೋರಾಡುವ ಅಗತ್ಯವಿದೆ” ಎಂದು ಹೇಳಿದ್ದಾರೆ.

“ಪರಿವಾರವಾದ ರಾಜನೀತಿಯು ದೇಶದ ಪ್ರಮುಖ ಸವಾಲುಗಳಲ್ಲಿ ಒಂದಾಗಿದೆ. ಕುಟುಂಬ ರಾಜಕಾರಣದಿಂದ ಕುಟುಂಬ ಉದ್ಧಾರವಾಗುತ್ತದೆಯೇ ಹೊರತು, ದೇಶವು ಏಳಿಗೆಯತ್ತ ಸಾಗುವುದಿಲ್ಲ. ಅಷ್ಟಕ್ಕೂ, ದೇಶದಲ್ಲಿ ಪರಿವಾರವಾದಿ ರಾಜಕಾರಣಿಗಳಿಂದಲೇ ಸಾಮಾನ್ಯ ಜನರಿಗೆ ಅನ್ಯಾಯವಾಗಿದೆ. ಅಣ್ಣ-ತಮ್ಮ, ಅಜ್ಜ-ಅಜ್ಜಿ, ಸೋದರಳಿಯ, ಮಾವ ಎಂಬ ಮನೋಭಾವವು ರಾಜಕಾರಣದಲ್ಲಿ ಬೇರೂರಿರುವುದು ಸವಾಲಾಗಿದೆ” ಎಂದರು.

“ರಾಷ್ಟ್ರದ ನಾಗರಿಕರು ಇನ್ನು ಮುಂದೆ ಜಾಗರೂಕರಾಗಬೇಕು. ಪರಿವಾರವಾದಿ ಮನಸ್ಥಿತಿಗಳ ವಿರುದ್ಧ ಹೋರಾಡುವ, ಅಂತಹವರನ್ನು ಮನೆಗೆ ಕಳುಹಿಸಿ, ಸಾಮರ್ಥ್ಯ ಇದ್ದವರು ಆಡಳಿತ ನಡೆಸುವಂತೆ ಮಾಡಬೇಕು. ಪ್ರತಿಯೊಬ್ಬರೂ ಕುಟುಂಬ ರಾಜಕಾರಣವನ್ನು ದೇಶದಿಂದ ಮುಕ್ತಿಗೊಳಿಸುವ ಸಂಕಲ್ಪ ಮಾಡಬೇಕು. ಆಗಲೇ, ದೇಶವು ಮುನ್ನಡೆಯತ್ತ, ಅಭಿವೃದ್ಧಿಯತ್ತ, ಸರ್ವರ ಶ್ರೇಯೋಭಿವೃದ್ಧಿಯತ್ತ ದಾಪುಗಾಲು ಇಡಲು ಸಾಧ್ಯವಾಗುತ್ತದೆ” ಎಂದು ಹೇಳಿದರು.

“ಭ್ರಷ್ಟಾಚಾರ ಹಾಗೂ ಕುಟುಂಬ ರಾಜಕಾರಣವು ದೇಶಕ್ಕೆ ಎದುರಾಗಿರುವ ಪ್ರಮುಖ ಸವಾಲುಗಳಾಗಿವೆ. ಅದರಲ್ಲೂ, ಭ್ರಷ್ಟಾಚಾರವು ಕಳಂಕವಾಗಿದೆ. ಒಂದೆಡೆ ಸಾಮಾನ್ಯರು ಪ್ರಾಮಾಣಿಕತೆಯಿಂದ ದುಡಿದು ತಿನ್ನುತ್ತಿದ್ದರೆ, ಮತ್ತೊಂದೆಡೆ ಭ್ರಷ್ಟಾಚಾರದಿಂದ ಹೊಡೆದ ಹಣವನ್ನು ಇಡಲು ಸಹ ಜನರಿಗೆ ಜಾಗವಿರದ ಪರಿಸ್ಥಿತಿಯಿತ್ತು. ಹಾಗಾಗಿಯೇ, ನಮ್ಮ ಸರಕಾರವು ಪಾರದರ್ಶಕತೆ ತಂದಿದೆ. ನೇರವಾಗಿ ಜನರ ಖಾತೆಗೆ ಹಣ ವರ್ಗಾವಣೆ (ಡಿಬಿಟಿ) ವರ್ಗಾವಣೆ ಮಾಡಲಾಗುತ್ತಿದೆ. ಅಷ್ಟೇ ಅಲ್ಲ, ದೇಶಕ್ಕೆ ಸಾವಿರಾರು ಕೋಟಿ ರೂ. ವಂಚಿಸಿ ಪರಾರಿಯಾದವರಿಂದ ವಸೂಲಿ ಮಾಡುವ ಸಮಯ ಬಂದಿದೆ. ಅದನ್ನು ನಾವು ಮಾಡುತ್ತೇವೆ ಹಾಗೂ ಸಾಮಾನ್ಯ ಜನ ಗೌರವದಿಂದ ಬದುಕಲು ನೆರವಾಗುತ್ತೇವೆ” ಎಂದು ತಿಳಿಸಿದರು.

ಇದನ್ನೂ ಓದಿ | ಜೈ ಜವಾನ್‌, ಜೈ ಕಿಸಾನ್‌, ಜೈ ವಿಜ್ಞಾನ್‌, ಜೈ ಅನುಸಂಧಾನ್‌: ಕೆಂಪುಕೋಟೆಯಿಂದ ಪ್ರಧಾನಿ ಮೋದಿ ಘೋಷ

Exit mobile version