Site icon Vistara News

Chandrayaan 3: ವಿಜ್ಞಾನಿಗಳಿಗೆ ನನ್ನ ಸೆಲ್ಯೂಟ್‌ ಎಂದ ಮೋದಿ; ಇಸ್ರೊಗೆ ಅಭಿನಂದನೆಗಳ ಮಹಾಪೂರ

Narendra Modi On Chandrayaan 3

Narendra Modi Congratulates ISRO for the successful launch of Chandrayaan 3

ಶ್ರೀಹರಿಕೋಟ: ಭಾರತದ ಮಹತ್ವಕಾಂಕ್ಷೆಯ ಚಂದ್ರಯಾನ 3 ಮಿಷನ್‌ಅನ್ನು (Chandrayaan 3) ಇಸ್ರೊ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ 3 ಮಿಷನ್‌ ಹೊತ್ತ ಲಾಂಚ್‌ ವೆಹಿಕಲ್‌ ಮಾರ್ಕ್‌ III (LVM 3) ರಾಕೆಟ್‌ ನಭಕ್ಕೆ ಹಾರಿದೆ. ಇದರೊಂದಿಗೆ ಬಾಹ್ಯಾಕಾಶ ಕ್ಷೇತ್ರ ಹಾಗೂ ಚಂದ್ರನ ಅಂಗಳದಲ್ಲಿ ಮಹತ್ವದ ಸಂಶೋಧನೆ ಮಾಡಬೇಕು ಎಂಬ ಇಸ್ರೊ ಕನಸಿಗೆ ರೆಕ್ಕೆ-ಪುಕ್ಕ ಬಂದಂತಾಗಿದೆ. ಇದರ ಬೆನ್ನಲ್ಲೇ ಮಹತ್ವದ ಸಾಧನೆ ಮಾಡಿದ ಇಸ್ರೊಗೆ ಪ್ರಧಾನಿ ನರೇಂದ್ರ ಮೋದಿ ಸೇರಿ ಹಲವರು ಅಭಿನಂದನೆ ಸಲ್ಲಿಸಿದ್ದಾರೆ.

“ಭಾರತದ ಬಾಹ್ಯಾಕಾಶ ಕ್ಷೇತ್ರದ ಅಧ್ಯಾಯದಲ್ಲಿ ಚಂದ್ರಯಾನ 3 ಹೊಸ ಇತಿಹಾಸ ಸೃಷ್ಟಿಸಿದೆ. ಭಾರತದ ಪ್ರತಿಯೊಬ್ಬರ ಕನಸಿಗೂ ಇದು ಹೊಸ ಹುರುಪು ನೀಡಿದೆ. ದೇಶದ ವಿಜ್ಞಾನಿಗಳ ಅವಿರತ ಶ್ರಮದಿಂದಾಗಿ ನಾವು ಇಂತಹ ಸಾಧನೆಯತ್ತ ಸಾಗುತ್ತಿದ್ದೇವೆ. ವಿಜ್ಞಾನಿಗಳ ಶ್ರಮ, ಪ್ರತಿಭೆಗೆ ನನ್ನ ಸೆಲ್ಯೂಟ್”‌ ಎಂದು ಮೋದಿ ಟ್ವೀಟ್‌ ಮಾಡಿದ್ದಾರೆ.

ಮೋದಿ ಅಭಿನಂದನೆ

ಚಂದ್ರನ ಅಂಗಳದಲ್ಲಿ ಐತಿಹಾಸಿಕ ಸಾಧನೆ ಮಾಡುವ ಇಸ್ರೊ ಕನಸಿಗೆ ರೆಕ್ಕೆ-ಪುಕ್ಕ ಬಂದಿವೆ. ಉಡಾವಣೆಯಾಗುತ್ತಲೇ ಚಂದ್ರಯಾನ ಮಿಷನ್‌ ಮೂರನೇ ಹಂತ ತಲುಪಿದೆ. ಅದರಲ್ಲೂ, ರಾಕೆಟ್‌ನಿಂದ ಬೇರ್ಪಟ್ಟ ಉಪಗ್ರಹವು ಕಕ್ಷೆ ಸೇರಿದೆ. ಇದು ಭಾರತದ ಚಂದ್ರಯಾನ 3 ಮಿಷನ್‌ಗೆ ಸಿಕ್ಕ ಮಹತ್ವದ ಮುನ್ನಡೆ ಎಂದೇ ಹೇಳಲಾಗುತ್ತಿದೆ.

ವಿಜ್ಞಾನಿಗಳಿಗೆ ಸಿದ್ದರಾಮಯ್ಯ ಶ್ಲಾಘನೆ

ಇದನ್ನೂ ಓದಿ: Chandrayaan 3 : ಚಂದ್ರಯಾನಕ್ಕೆ ಕುಂದಾನಗರಿ ಸಾಥ್;‌ ವಿಜ್ಞಾನಿ ಪ್ರಕಾಶ್‌ ಪೆಡ್ನೇಕರ್‌ ಭಾಗಿ, ಬಿಡಿಭಾಗ ಬೆಳಗಾವಿಯದ್ದು!

ಭಾರತವು ನಿರೀಕ್ಷೆಯಂತೆಯೇ ಚಂದ್ರಯಾನ 3 ಮಿಷನ್‌ನ ಉಡಾವಣೆಯನ್ನು ಯಶಸ್ವಿಯಾಗಿ ಕೈಗೊಂಡಿದೆ. ಎಲ್‌ವಿಎಂ 3 ರಾಕೆಟ್‌ ನಭಕ್ಕೆ ಹಾರಿದ್ದು, ಇದಾದ ಬಳಿಕ ಚಂದ್ರಯಾನ 3 ಮಿಷನ್‌ 15 ನಿಮಿಷದಲ್ಲಿ ಭೂಮಿಯ ಕಕ್ಷೆ ಸೇರಿದೆ.

ಭೂಮಿಯ ಕಕ್ಷೆಯಲ್ಲಿ ಹಲವು ಸುತ್ತುಗಳ ನಂತರ ಮಿಷನ್‌ ಚಂದ್ರನತ್ತ ಲಗ್ಗೆ ಇಡಲಿದೆ. ಆಗಸ್ಟ್‌ 23ರ ಸಂಜೆ 5.47ಕ್ಕೆ ಲ್ಯಾಂಡರ್‌ ಚಂದ್ರನ ಅಂಗಳದಲ್ಲಿ ಸಾಫ್ಟ್‌ ಆಗಿ ಲ್ಯಾಂಡ್‌ ಆಗಲಿದೆ. ಸಾಫ್ಟ್‌ ಆಗಿ ಲ್ಯಾಂಡ್‌ ಆದಾಗಲೇ ಭಾರತದ ಚಂದ್ರಯಾನ 3 ಯಶಸ್ವಿಯಾಗಲಿದೆ.

Exit mobile version