Site icon Vistara News

Narendra Modi: ನಿನ್ನ ನಾಮದ ಬಲವೊಂದಿದ್ದರೆ ಸಾಕು; ಮೋದಿ ಮತ್ತೆ ವಿಶ್ವದ ನಂ 1 ಜನಪ್ರಿಯ ನಾಯಕ

Narendra Modi World's Most Popular Leader

Narendra Modi Dominates List Of Most Popular World Leaders With 77% Approval Rating

ನವದೆಹಲಿ: ಕೊರೊನಾ ಬಿಕ್ಕಟ್ಟಿನ ಸಂದರ್ಭವೇ ಇರಲಿ, ಬೆಲೆಯೇರಿಕೆ ವಿರುದ್ಧ ಆಕ್ರೋಶವೇ ವ್ಯಕ್ತವಾಗಲಿ. ಇಲ್ಲವೇ ಪೆಗಾಸಸ್‌ ಪ್ರಕರಣ, ರೈತರ ಪ್ರತಿಭಟನೆ ಸೇರಿ ಕೇಂದ್ರ ಸರಕಾರದ ವಿರುದ್ಧ ಎಷ್ಟೇ ಆಕ್ರೋಶ ವ್ಯಕ್ತವಾಗಲಿ, ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆಗೆ ಮಾತ್ರ ಸ್ವಲ್ಪವೂ ಕುಂದಾಗುವುದಿಲ್ಲ. ಈ ಮಾತಿಗೆ ಪುಷ್ಟಿ ನೀಡುವಂತೆ, ನರೇಂದ್ರ ಮೋದಿ ಅವರು ಮತ್ತೆ ಜಗತ್ತಿನಲ್ಲೇ (Global Leader) ಹೆಚ್ಚು ಖ್ಯಾತಿ ಹೊಂದಿರುವ ನಾಯಕ ಎನಿಸಿದ್ದಾರೆ.

ಹೌದು, ಮಾರ್ನಿಂಗ್‌ ಕನ್ಸಲ್ಟ್‌ ಸಂಸ್ಥೆಯ ಗ್ಲೋಬಲ್‌ ಲೀಡರ್‌ಶಿಪ್‌ ಅಪ್ರೂವಲ್‌ ಸಮೀಕ್ಷೆ ಪ್ರಕಾರ, ಶೇ.77ರಷ್ಟು ರೇಟಿಂಗ್‌ ಪಡೆದುಕೊಂಡ ಮೋದಿ ಮತ್ತೆ ಜಗತ್ತಿನ ಜನಪ್ರಿಯ ನಾಯಕರಾಗಿ ಹೊರಹೊಮ್ಮಿದ್ದಾರೆ. 2019ರಿಂದಲೂ ಮಾರ್ನಿಂಗ್‌ ಕನ್ಸಲ್ಟ್‌ ಸಂಸ್ಥೆಯು ಜಾಗತಿಕ ನಾಯಕರ ಜನಪ್ರಿಯತೆ ಕುರಿತು ಸಮೀಕ್ಷೆ ನಡೆಸುತ್ತಲೇ ಇದೆ ಹಾಗೂ ಪ್ರತಿ ಬಾರಿಯೂ ಮೋದಿ ಅವರೇ ಅಗ್ರ ಜನಪ್ರಿಯ ನಾಯಕರಾಗಿದ್ದಾರೆ ಎಂಬುದು ಗಮನಾರ್ಹ ಸಂಗತಿಯಾಗಿದೆ. ಮೊದಲ ಸಮೀಕ್ಷೆಯಲ್ಲಿ ಮೋದಿ ಅವರಿಗೆ ಶೇ.71ರಷ್ಟು ರೇಟಿಂಗ್‌ ಸಿಕ್ಕಿತ್ತು. ಈಗ ಅದು ಶೇ.77ಕ್ಕೆ ಏರಿಕೆಯಾಗಿದೆ.

ಯಾವ ನಾಯಕನಿಗೆ ಎಷ್ಟು ರೇಟಿಂಗ್?

‌ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌, ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌, ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್‌ ಸೇರಿ ಜಗತ್ತಿನ ಪ್ರಮುಖ ನಾಯಕರನ್ನೂ ಮೋದಿ ಹಿಂದಿಕ್ಕಿದ್ದಾರೆ. ಜಗತ್ತಿನ 22 ನಾಯಕರ ಜನಪ್ರಿಯತೆ ಕುರಿತು ಮಾರ್ನಿಂಗ್‌ ಕನ್ಸಲ್ಟ್‌ ಸಮೀಕ್ಷೆ ನಡೆಸಿದೆ. ಜಗತ್ತಿನ 22 ಪ್ರಮುಖ ನಗರಗಳಲ್ಲಿರುವ ಜನರ ಅಭಿಪ್ರಾಯ ಸಂಗ್ರಹಿಸಿ ಸಮೀಕ್ಷೆ ವರದಿ ತಯಾರಿಸಿದೆ. ಮೇ 30ರಿಂದ ಜೂನ್‌ 6ರ ಅವಧಿಯ ಸಮೀಕ್ಷಾ ವರದಿ ಇದಾಗಿದೆ.

ಇದನ್ನೂ ಓದಿ: Narendra Modi: ಮೋದಿಯನ್ನು ಬಾಸ್‌ ಎಂದ ಆಸ್ಟ್ರೇಲಿಯಾ ಪ್ರಧಾನಿ; ಅಮೆರಿಕ ರಾಕ್‌ಸ್ಟಾರ್‌ ಜನಪ್ರಿಯತೆಗೆ ಹೋಲಿಕೆ

ಅಮೆರಿಕ, ಭಾರತ, ಬೆಲ್ಜಿಯಂ, ಬ್ರೆಜಿಲ್‌, ಐರ್ಲೆಂಡ್‌, ಫ್ರಾನ್ಸ್‌, ಜರ್ಮನಿ, ದಕ್ಷಿಣ ಕೊರಿಯಾ, ಸ್ಪೇನ್‌, ಬ್ರಿಟನ್‌, ಸ್ವಿಟ್ಜರ್‌ಲೆಂಡ್‌ ಸೇರಿ ಹಲವು ರಾಷ್ಟ್ರಗಳ ನಗರಗಳಲ್ಲಿ ಜನರನ್ನು ಸಂಪರ್ಕಿಸಿ ವರದಿ ತಯಾರಿಸಲಾಗಿದೆ. ಆಯಾ ದೇಶಗಳ ಸಾಕ್ಷರತೆ ಆಧಾರದ ಮೇಲೆ ಹೆಚ್ಚಿನ ಜನರನ್ನು ಸಂಪರ್ಕಿಸಲಾಗಿದೆ. ಅಮೆರಿಕದಲ್ಲಿ 45 ಸಾವಿರ ಜನರನ್ನು ಸಂಪರ್ಕಿಸಿದರೆ, ಭಾರತದಲ್ಲಿ 5 ಸಾವಿರ ಜನರ ಮಾಹಿತಿ ಪಡೆದು ವರದಿ ತಯಾರಿಸಲಾಗಿದೆ.

Exit mobile version