Site icon Vistara News

ITPO Complex: ಪ್ರಗತಿ ಮೈದಾನದಲ್ಲಿ ಐಟಿಪಿಒ ಕಾಂಪ್ಲೆಕ್ಸ್‌ ಉದ್ಘಾಟಿಸಿದ ಮೋದಿ; ಕಟ್ಟಡದ ವೈಭವ ನೋಡಿ

Narendra Modi

Narendra Modi Inaugurates ITPO Complex At Pragati Maidan

ನವದೆಹಲಿ: ರಾಷ್ಟ್ರ ರಾಜಧಾನಿಯ ಪ್ರಗತಿ ಮೈದಾನದಲ್ಲಿ ಮರು ನವೀಕರಣಗೊಂಡಿರುವ, ಅತ್ಯಾಧುನಿಕ ಭಾರತ ವ್ಯಾಪಾರ ಉತ್ತೇಜನ ಸಂಸ್ಥೆಯನ್ನು (ITPO Complex) ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಉದ್ಘಾಟಿಸಿದ್ದಾರೆ. 127 ಎಕರೆ ಪ್ರದೇಶದಲ್ಲಿ ಸುಮಾರು 2,700 ಕೋಟಿ ರೂ. ವ್ಯಯಿಸಿ ನಿರ್ಮಿಸಿರುವ ಸಮುಚ್ಚಯವನ್ನು ಮೋದಿ ಅವರು ಹೋಮ, ಹವನದ ಮೂಲಕ ಲೋಕಾರ್ಪಣೆಗೊಳಿಸಿದರು. ಸೆಪ್ಟೆಂಬರ್‌ನಲ್ಲಿ ಇದೇ ಸಮುಚ್ಚಯದಲ್ಲಿ ಜಿ-20 ನಡೆಯಲಿರುವುದರಿಂದ ಸಮುಚ್ಚಯವು ಹೆಚ್ಚು ಪ್ರಾಮುಖ್ಯತೆ ಪಡೆದಿದೆ. ದೇಶದ ಬೃಹತ್‌ ಸಭೆಗಳು, ಸಮಾವೇಶಗಳು, ಪ್ರದರ್ಶನಗಳನ್ನು ಆಯೋಜಿಸಲು ಇದನ್ನು ನಿರ್ಮಿಸಲಾಗಿದೆ. ಹಾಗೆಯೇ, ಭಾರತದ ಕಲೆ, ಸಂಸ್ಕೃತಿಯ ಪಸರಿಸುವ ತಾಣವೂ ಇದಾಗಿದೆ.

ಪೂಜೆ, ಹವನದಲ್ಲಿ ಭಾಗವಹಿಸಿದ ಮೋದಿ

ಸಮುಚ್ಚಯ ಹೇಗಿದೆ ನೋಡಿ

ಇದನ್ನೂ ಓದಿ: World Cup 2023: ಮೋದಿ ಸ್ಟೇಡಿಯಂನಲ್ಲಿ ಅ.15ರಂದೂ ನಡೆಯಲ್ಲ ಭಾರತ-ಪಾಕ್‌ ಪಂದ್ಯ; ಈ ಬಾರಿ ಹೊಸ ಕಾರಣ

Exit mobile version