Site icon Vistara News

Narendra Modi: ಎರಡೇ ದಿನದಲ್ಲಿ ಬಾಲಕಿಗೆ ಕೊಟ್ಟ ಮಾತಿನಂತೆ ನಡೆದುಕೊಂಡ ಮೋದಿ; ಏನಿದು ಪತ್ರ?

Narendra Modi Sketch

Narendra Modi Keeps His Promise To Little Girl Who Sketched His Pic, Writes A Letter To Her

ನವದೆಹಲಿ: ಸಾಮಾನ್ಯ ಜನರು ಪತ್ರ ಬರೆದರೆ, ಅದಕ್ಕೆ ಪ್ರತಿಕ್ರಿಯೆ ನೀಡುವುದು, ಅವರು ಕೂಡ ಪತ್ರ ಬರೆಯುವುದು ಸೇರಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಸಣ್ಣ ಸಣ್ಣ ವಿಷಯಗಳಿಗೆ ಆದ್ಯತೆ ನೀಡುತ್ತಾರೆ. ಇದಕ್ಕೆ ನಿದರ್ಶನ ಎಂಬಂತೆ ನರೇಂದ್ರ ಮೋದಿ ಅವರು ಛತ್ತೀಸ್‌ಗಢ ಬಾಲಕಿಗೆ (Chhattisgarh Girl) ಎರಡು ದಿನಗಳ ಹಿಂದೆ (ನವೆಂಬರ್‌ 2) ನೀಡಿದ ಭರವಸೆಯನ್ನು ಎರಡೇ ದಿನಗಲ್ಲಿ ಈಡೇರಿಸಿದ್ದಾರೆ. ಕೊಟ್ಟ ಮಾತಿನಂತೆ ಮೋದಿ ಅವರು ಛತ್ತೀಸ್‌ಗಢದ ಆಕಾಂಕ್ಷಾ ಎಂಬ ಬಾಲಕಿಗೆ ಪತ್ರ ಬರೆದಿದ್ದಾರೆ. ಇದು ಈಗ ವೈರಲ್‌ ಆಗಿದೆ.

ಹೌದು, ನವೆಂಬರ್‌ 2ರಂದು ಛತ್ತೀಸ್‌ಗಢದ ಕಾಂಕೆರ್‌ನಲ್ಲಿ ನಡೆದ ಚುನಾವಣಾ ರ‍್ಯಾಲಿಯ ವೇಳೆ ಮೋದಿ ಅವರು ಆಕಾಂಕ್ಷಾ ಎಂಬ ಬಾಲಕಿಗೆ ಪತ್ರ ಬರೆಯುವುದಾಗಿ ತಿಳಿಸಿದ್ದರು. ನರೇಂದ್ರ ಮೋದಿ ಅವರ ಭಾವಚಿತ್ರವನ್ನು ಬಿಡಿಸಿಕೊಂಡು ಬಂದಿದ್ದ ಬಾಲಕಿಯನ್ನು ಶ್ಲಾಘಿಸಿದ್ದ ಮೋದಿ, ಆ ಭಾವಚಿತ್ರವನ್ನು ಪಡೆದಿದ್ದರು. ಅಲ್ಲದೆ, ನಿನಗೊಂದು ಪತ್ರ ಬರೆಯುತ್ತೇನೆ ಎಂದು ಕೂಡ ಹೇಳಿದ್ದರು. ಬಾಲಕಿಯು ಮೋದಿ ಅವರ ಭಾವಚಿತ್ರ ಬಿಡಿಸಿ, ಅದನ್ನು ಹಿಡಿದುಕೊಂಡೇ ನಿಂತಿದ್ದಳು. ಇದನ್ನು ಗಮನಿಸಿದ್ದ ಮೋದಿ ಅವರು ಫೋಟೊವನ್ನು ಪಡೆದಿದ್ದರು.

ಬಾಲಕಿಗೆ ಮೋದಿ ಬರೆದ ಪತ್ರ

ಪತ್ರದಲ್ಲೇನಿದೆ?

“ಪ್ರೀತಿಯ ಆಕಾಂಕ್ಷಾ, ನಿನಗೆ ನನ್ನ ಆಶೀರ್ವಾದ ಇದೆ. ನೀನು ಸ್ಕೆಚ್‌ ಮಾಡಿ, ಕಾಂಕೆರ್‌ ಕಾರ್ಯಕ್ರಮದ ವೇಳೆ ಕಳುಹಿಸಿದ ಚಿತ್ರವು ನನ್ನ ಕೈ ಸೇರಿದೆ. ನೀನು ತೋರಿದ ಪ್ರೀತಿಗಾಗಿ ಧನ್ಯವಾದಗಳು. ಮುಂದಿನ ದಿನಗಳಲ್ಲಿ ಉಜ್ವಲ ಭವಿಷ್ಯ ನಿನ್ನದಾಗಲಿ. ನಿನ್ನಿಂದ ನಿನ್ನ ಕುಟುಂಬ, ಸಮಾಜ ಹಾಗೂ ದೇಶಕ್ಕೆ ಒಳ್ಳೆಯ ಹೆಸರು ಬರುವಂತಾಗಲಿ. ನಿನ್ನ ಜೀವನದಲ್ಲಿ ಇನ್ನಷ್ಟು ಯಶಸ್ಸು ಸಿಗಲಿ” ಎಂದು ಹಾರೈಸಿ ಮೋದಿ ಅವರು ಬಾಲಕಿಗೆ ಪತ್ರ ಬರೆದಿದ್ದಾರೆ. ಅಲ್ಲದೆ, ಆ ಪತ್ರವನ್ನು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ.

ಇದನ್ನೂ ಓದಿ: Chhattisgarh Polls: ಸ್ತ್ರೀಯರಿಗೆ 12 ಸಾವಿರ ರೂ., 500 ರೂ.ಗೆ ಎಲ್‌ಪಿಜಿ ಸಿಲಿಂಡರ್; ಇದು ‘ಮೋದಿ’ ಗ್ಯಾರಂಟಿ

ಕಾರ್ಯಕ್ರಮದಲ್ಲಿ ಮೋದಿ ಹೇಳಿದ್ದೇನು?

ನರೇಂದ್ರ ಮೋದಿ ಅವರು ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡುವಾಗ ಬಾಲಕಿಯನ್ನು ಗಮನಿಸಿದ್ದಾರೆ. ತಮ್ಮ ಭಾವಚಿತ್ರವನ್ನು ಸ್ಕೆಚ್‌ ಮಾಡಿಕೊಂಡು ಬಂದಿದ್ದ ಬಾಲಕಿಯನ್ನು ಗಮನಿಸಿದ ಮೋದಿ, “ಆ ಹುಡುಗಿ ತುಂಬ ಹೊತ್ತಿನಿಂದ ಹಾಗೆಯೇ ನಿಂತಿದ್ದಾಳೆ. ನನ್ನ ಚಿತ್ರ ಬಿಡಿಸಿಕೊಂಡು ಬಂದು ನಿಂತಿರುವ ಆಕೆಗೆ ಕಾಲು ನೋವಾಗುತ್ತದೆ. ಪೊಲೀಸರು ಆ ಫೋಟೊವನ್ನು ಪಡೆಯಬೇಕು ಹಾಗೂ ಬಾಲಕಿಯು ಕುಳಿತುಕೊಳ್ಳಬೇಕು. ನಂತರ ನಾನು ಬಾಲಕಿಗೆ ಪತ್ರ ಬರೆಯುತ್ತೇನೆ” ಎಂದು ಮೋದಿ ಹೇಳಿದ್ದರು.

Exit mobile version