Site icon Vistara News

PM Vishwakarma Scheme: ವಿಶ್ವಕರ್ಮ ಯೋಜನೆಗೆ ಮೋದಿ ಚಾಲನೆ; ಹೀಗೆ ಮಾಡಿ, ಉಪಯೋಗ ಪಡೆಯಿರಿ

Narendra Modi

Narendra Modi Launches PM Vishwakarma Scheme; What is it? What Are The Benefits?

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ವಿಶ್ವಕರ್ಮ ಜಯಂತಿಯ ದಿನದಂದೇ ಕರಕುಶಲಕರ್ಮಿಗಳ ಏಳಿಗೆ ದಿಸೆಯಲ್ಲಿ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಗೆ (PM Vishwakarma Scheme) ದ್ವಾರಕಾದಲ್ಲಿರುವ ಇಂಡಿಯಾ ಇಂಟರ್‌ನ್ಯಾಷನಲ್‌ ಕನ್ವೆನ್ಶನ್‌ ಸೆಂಟರ್‌ನಲ್ಲಿ ಭಾನುವಾರ (ಸೆಪ್ಟೆಂಬರ್‌ 17) ಚಾಲನೆ ನೀಡಿದ್ದಾರೆ. ಸುಮಾರು 13 ಸಾವಿರ ಕೋಟಿ ರೂ. ಮೊತ್ತದ ಯೋಜನೆಯಿಂದ ಲಕ್ಷಾಂತರ ಕರಕುಶಲಕರ್ಮಿಗಳಿಗೆ ಅನುಕೂಲವಾಗಲಿವೆ. ಹಾಗಾದರೆ, ಈ ಯೋಜನೆಯ ಲಾಭಗಳೇನು? ಯಾರು ಮಾತ್ರ ಲಾಭ ಪಡೆಯಬಹುದು? ಹೇಗೆ ಪಡೆಯಬೇಕು ಎಂಬುದರ ಮಾಹಿತಿ ಇಲ್ಲಿದೆ.

ಯಾರಿಗೆಲ್ಲ ಯೋಜನೆಯ ಲಾಭ?

ಕಂಬಾರ, ಅಕ್ಕಸಾಲಿಗ, ಕುಂಬಾರ, ಹಡಗು ತಯಾರಿಸುವವರು, ಶಸ್ತ್ರಾಸ್ತ್ರ ತಯಾರಿಸುವವರು, ಗೊಂಬೆ ತಯಾರಿಸುವವರು, ಟೈಲರ್‌ಗಳು, ಮೀನುಗಾರಿಕೆಯ ಬಲೆ ಹೆಣೆಯುವವರು, ಸುತ್ತಿಗೆ ಸೇರಿ ಹಲವು ಟೂಲ್‌ ಕಿಟ್‌ ತಯಾರಿಸುವವರು, ಶಿಲ್ಪಿಗಳು, ಚಾಪೆ, ಬ್ಯಾಸ್ಕೆಟ್‌ ತಯಾರಿಸುವವರು, ಹೂಗಾರರು, ಕ್ಷೌರಿಕರು ಸೇರಿ ಆರಂಭದಲ್ಲಿ 18 ಕರಕುಶಲ ವೃತ್ತಿಯಲ್ಲಿ ತೊಡಗಿರುವವರಿಗೆ ಯೋಜನೆಯ ಲಾಭ ಸಿಗಲಿದೆ.

ಸಿಗಲಿದೆ ಇಷ್ಟೆಲ್ಲ ಪ್ರಯೋಜನ

ವಿಶ್ವಕರ್ಮ ಯೋಜನೆ ಅಡಿಯಲ್ಲಿ ಕರಕುಶಲಕರ್ಮಿಗಳಿಗೆ ಹಲವು ಸೌಲಭ್ಯಗಳು ಸಿಗಲಿವೆ. ಕರಕುಶಲ ವೃತ್ತಿಯಲ್ಲಿ ತೊಡಗಿದವರಿಗೆ ತರಬೇತಿಯೂ ನೀಡಲಾಗುತ್ತದೆ. ಹೀಗೆ ತರಬೇತಿ ಪಡೆಯುವವರಿಗೆ 15 ಸಾವಿರ ರೂ. ಗೌರವ ಧನ ನೀಡಲಾಗುತ್ತದೆ. ಹಾಗೆಯೇ, ಸ್ವಯಂ ಉದ್ಯೋಗದಲ್ಲಿ ತೊಡಗಲು ಮೊದಲ ಕಂತಿನಲ್ಲಿ 1 ಲಕ್ಷ ರೂ.ವರೆಗೆ ಹಾಗೂ ಎರಡನೇ ಕಂತಿನಲ್ಲಿ 2 ಲಕ್ಷ ರೂ.ವರೆಗೆ ಸಾಲ ನೀಡಲಾಗುತ್ತದೆ. ಯೋಜನೆ ಅಡಿಯಲ್ಲಿ ಮೊದಲ ವರ್ಷ 5 ಲಕ್ಷ ಕುಟುಂಬಗಳಿಗೆ ಹಾಗೂ ಮುಂದಿನ 5 ವರ್ಷದಲ್ಲಿ 30 ಲಕ್ಷ ಕುಟುಂಬಗಳಿಗೆ ಅನುಕೂಲ ಕಲ್ಪಿಸುವುದು ಕೇಂದ್ರ ಸರ್ಕಾರದ ಗುರಿಯಾಗಿದೆ.

ಇದನ್ನೂ ಓದಿ: Narendra Modi: ಜನ್ಮದಿನದಂದು ಮೆಟ್ರೋದಲ್ಲಿ ಮೋದಿ ಸಂಚಾರ; ಸಂಸ್ಕೃತದಲ್ಲಿ ಶುಭಕೋರಿದ ಯುವತಿ

ಸೌಲಭ್ಯ ಪಡೆಯುವುದು ಹೇಗೆ?

ವಿಶ್ವಕರ್ಮ ಯೋಜನೆ ಅಡಿಯಲ್ಲಿ ಸೌಲಭ್ಯ ಪಡೆಯಲು ಮೊದಲು ವಿಶ್ವಕರ್ಮ ಯೋಜನೆಯ ವೆಬ್‌ ಪೋರ್ಟಲ್‌ಗೆ (ನೋಂದಣಿಗೆ ಇಲ್ಲಿ ಕ್ಲಿಕ್‌ ಮಾಡಿ- https://pmvishwakarma.gov.in/) ಭೇಟಿ ನೀಡಿ ನೋಂದಣಿ ಮಾಡಿಕೊಳ್ಳಬೇಕು. ಹೌ ಟು ರಿಜಿಸ್ಟರ್‌ (How To Register) ಆಯ್ಕೆ ಮೇಲೆ ಕ್ಲಿಕ್‌ ಮಾಡಿ, ಮೊಬೈಲ್‌ ಹಾಗೂ ಆಧಾರ್‌ ಸಂಖ್ಯೆ ನಮೂದಿಸಬೇಕು. ಇದಾದ ಬಳಿಕ ರಿಜಿಸ್ಟ್ರೇಷನ್‌ ಫಾರಂ ತುಂಬಿದ ಮೇಲೆ ವಿಶ್ವಕರ್ಮ ಡಿಜಿಟಲ್‌ ಐಡಿ ಹಾಗೂ ಸರ್ಟಿಫಿಕೇಟ್‌ ಡೌನ್‌ಲೋಡ್‌ ಮಾಡಿಕೊಳ್ಳಬೇಕು. ನಂತರ ಆಯಾ ಸೌಲಭ್ಯಗಳನ್ನು ಪಡೆಯಬಹುದು.

Exit mobile version