Site icon Vistara News

Narendra Modi: ಸಂತಾಪ ಸೂಚಿಸಿ, ಪ್ರಧಾನಿಗೆ ಪತ್ರ ಬರೆದ ಬೆಂಗಳೂರಿನ 2ನೇ ತರಗತಿಯ ಬಾಲಕ! ಮೋದಿಯ ಉತ್ತರ ಏನು?

modi

ಬೆಂಗಳೂರು: ಕೆಲವೊಮ್ಮೆ ಸಣ್ಣ ಸಣ್ಣ ಸಾಂತ್ವನಗಳು ಕೂಡ ಮನಸ್ಸನ್ನು ಹಗುರಾಗಿಸುತ್ತವೆ. ಹಾಗೆಯೇ ಪುಟಾಣಿ ಬಾಲಕನೊಬ್ಬ ಬರೆದಿದ್ದ ಸಂತಾಪ ಪತ್ರ ದೇಶದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ತಲುಪಿದ್ದು, ಅವರ ಮನಸ್ಸು ಕೂಡ ಹಗುರಾಗಿದೆ. ಹಾಗಾಗಿ ಪ್ರಧಾನಿಯವರೇ ಬಾಲಕನಿಗೆ ಮರು ಪತ್ರ ಬರೆದು ವಂದನೆ ಅರ್ಪಿಸಿದ್ದಾರೆ.

ಇದನ್ನೂ ಓದಿ: Viral Video : ಅಪ್ಪ-ಮಗಳ ನೃತ್ಯಕ್ಕೆ ಮನಸೋಲದವರಿಲ್ಲ; ಹೇಗಿದೆ ನೋಡಿ ಈ ವೈರಲ್ ವಿಡಿಯೊ

ಹೌದು. ಬೆಂಗಳೂರಿನ ಮಲ್ಲೇಶ್ವರಂ ನಿವಾಸಿಯಾದ ಆರುಷ್ ಶ್ರೀವಸ್ತ ಕಳೆದ ವರ್ಷದ ಡಿಸೆಂಬರ್ 30ರಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರವೊಂದನ್ನು ಬರೆದಿದ್ದಾನೆ. ಈಗಿನ್ನೂ ಎರಡನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿರುವ ಆತ, “ನಿಮ್ಮ ತಾಯಿ ನಿಧನರಾದ ವಿಚಾರ ಟಿವಿಯಲ್ಲಿ ನೋಡಿ ಬಹಳ ನೋವಾಯಿತು. ನಾನು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ನನ್ನ ಸಂತಾಪವನ್ನು ದಯವಿಟ್ಟು ಸ್ವೀಕರಿಸಿ” ಎಂದು ಪತ್ರದಲ್ಲಿ ಬರೆದಿದ್ದಾನೆ.


ಈ ಪತ್ರ ಪ್ರಧಾನಿ ಅವರ ಕಚೇರಿ ತಲುಪಿದ್ದು, ಅದಕ್ಕೆ ಪ್ರತಿಯಾಗಿ ಅಲ್ಲಿಂದ ಇನ್ನೊಂದು ಪತ್ರ ಆರುಷ್ ಬಳಿ ಬಂದು ತಲುಪಿದೆ. “ನನ್ನ ತಾಯಿಗಾಗಿ ಪ್ರಾರ್ಥಿಸಿದ್ದಕ್ಕೆ ಧನ್ಯವಾದಗಳು. ತಾಯಿಯನ್ನು ಕಳೆದುಕೊಳ್ಳುವ ನೋವು ಬಣ್ಣಿಸಲು ಅಸಾಧ್ಯವಾದ ನೋವು. ಈ ರೀತಿಯ ಸಾಂತ್ವನ ನನ್ನನ್ನು ಬಲಪಡಿಸುತ್ತದೆ” ಎಂದು ಬರೆಯಲಾಗಿದೆ. ಅದರಲ್ಲಿ ಪ್ರಧಾನಿಯವರ ಸಹಿಯೂ ಇದೆ. ಈ ಎರಡೂ ಪತ್ರಗಳ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ವೈರಲ್ ಆಗಿವೆ.

Exit mobile version