Site icon Vistara News

India TV-CNX Opinion Poll: 3ನೇ ಅವಧಿಗೆ ಮೋದಿ ಪಿಎಂ! ‘ಇಂಡಿಯಾ’ಗಿಲ್ಲ ಲಕ್! ನೆಹರು ದಾಖಲೆ ಸರಿಗಟ್ಟಲಿರುವ ಮೋದಿ

PM Modi

ನವದೆಹಲಿ: ಎರಡು ಅವಧಿಗಳನ್ನು ಯಶಸ್ವಿಯಾಗಿ ಪೂರೈಸುತ್ತಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಮೂರನೇ ಅವಧಿಗೂ ಯಾವುದೇ ಅಡೆ-ತಡೆ ಇಲ್ಲದೇ ಚುನಾವಣೆ ಗೆಲ್ಲಲಿದ್ದಾರೆಂದು ಇಂಡಿಯಾ ಟವಿ-ಸಿಎನ್ಎಕ್ಸ್ ಸಮೀಕ್ಷೆ ತಿಳಿಸಿದೆ(India TV-CNX Opinion Poll). ಮೂರನೇ ಅವಧಿಗೆ ಪ್ರಧಾನಿಯಾಗುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಮೊದಲ ಪ್ರಧಾನಿ ಪಂಡಿತ ಜವಾಹರ್ ಲಾಲ್ ನೆಹರು (Pandit Jawaharlal Nehru) ಅವರ ದಾಖಲೆಯನ್ನು ಸರಿಗಟ್ಟಲಿದ್ದಾರೆ.

ಇನ್ನು ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಬಿಜೆಪಿ 20 ಹಾಗೂ ಕಾಂಗ್ರೆಸ್ 7 ಮತ್ತು ಜೆಡಿಎಸ್ 1 ಲೋಕಸಭೆ ಸ್ಥಾನವನ್ನು ಗೆಲ್ಲುವ ಸಾಧ್ಯತೆ ಇದೆ.

ಇಂದೇ ಲೋಕಸಭೆ ಚುನಾವಣೆ ನಡೆದರೆ, ಬಿಜೆಪಿ ನೇತೃತ್ವದ ಎನ್‌ಡಿಎ 318 ಹಾಗೂ ಪ್ರತಿಪಕ್ಷಗಳ ಕೂಟ ಇಂಡಿಯಾ 175 ಹಾಗೂ ಇತರರು 57 ಸ್ಥಾನಗಳನ್ನು ಗೆಲ್ಲಲಲಿದ್ದಾರೆ. ಸಮೀಕ್ಷೆಯ ಪ್ರಕಾರ, ಕರ್ನಾಟಕ, ಗುಜರಾತ್, ಗೋವಾ, ಉತ್ತರಾಖಂಡ, ಹಿಮಾಚಲಪ್ರದೇಶ, ಹರ್ಯಾಣ, ದಿಲ್ಲಿ, ಮಧ್ಯಪ್ರದೇಶ, ಛತ್ತೀಸ್‌ಗಢ, ಜಾರ್ಖಂಡ್, ಈಶಾನ್ಯ ರಾಜ್ಯಗಳಲ್ಲಿ ಸ್ಪಷ್ಟ ಮುನ್ನಡೆಯನ್ನು ಕಾಯ್ದುಕೊಳ್ಳಲಿದೆ.

ಅದೇ ರೀತಿ, ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷ ಕೂಟ ಇಂಡಿಯಾ, ಪಶ್ಚಿಮ ಬಂಗಾಳ, ತಮಿಳುನಾಡು, ಮಣಿಪುರ, ಪಂಜಾಪ್, ಬಿಹಾರ ಹಾಗೂ ಮಣಿಪುರದಲ್ಲಿ ಪ್ರಾಬಲ್ಯ ಮೆರೆಯಲಿದೆ. ಹಾಗಿದ್ದೂ, 2024ರ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಲು ಪ್ರತಿಪಕ್ಷಗಳಿಗೆ ಸಾಧ್ಯವಾಗುವುದಿಲ್ಲ.

ಯಾವ ಪಕ್ಷಕ್ಕೆ ಎಷ್ಟು ಸೀಟು?

ಇಂದೇ ಲೋಕಸಭೆಗೆ ಚುನಾವಣೆ ನಡೆದರೆ ಎನ್‌ಡಿಎಗೆ ಸ್ಪಷ್ಟ ಬಹುಮತ ದೊರೆಯಲಿದೆ. ಆದರೆ, ಕಳೆದ ಲೋಕಸಭೆ ಚುನಾವಣೆಗೆ ಹೋಲಿಸಿದರೆ ಬಿಜೆಪಿ ಒಟ್ಟು ಸೀಟುಗಳಲ್ಲಿ 13 ಸೀಟುಗಳು ಕಡಿಮೆಯಾಗಬಹುದು. ಅಂದರೆ, ಈ ಬಾರಿ ಬಿಜೆಪಿ 290 ಸೀಟು ಗೆದ್ದರೆ, ಕಾಂಗ್ರೆಸ್ ಪಕ್ಷದ ಪಾಲಿಗೆ 66 ಸೀಟುಗಳು ದೊರೆಯಲಿವೆ.

ಇನ್ನುಳಿದಂತೆ ಟಿಎಂಸಿ 29, ಆಪ್ 10, ಬಿಜೆಡಿ 13, ಶಿವಸೇನೆ(ಶಿಂಧೆ) 2, ಶಿವಸೇನೆ (ಉದ್ಧವ್) 11, ಸಮಾಜವಾದಿ ಪಾರ್ಟಿ 4, ಬಹುಜನ ಸಮಾಜವಾದಿ ಪಾರ್ಟಿ 0, ರಾಷ್ಟ್ರೀಯ ಜನತಾದಳ 7, ಜೆಡಿಯು 7, ಡಿಎಂಕೆ 19, ಎಐಎಡಿಎಂಕೆ 8, ಎನ್‌ಸಿಪಿ(ಶರದ್) 4, ಎನ್‌ಸಿಪಿ (ಅಜಿತ್) 2, ವೈಎಸ್ಆರ್ ಕಾಂಗ್ರೆಸ್ 18, ಟಿಡಿಪಿ 7, ಎಡಪಕ್ಷಗಳು 8, ಬಿಆರೆಸ್ 8, ಸ್ವತಂತ್ರ ಸೇರಿ ಇನ್ನುಳಿದಂತೆ 30 ಸ್ಥಾನಗಳನ್ನು ಗೆಲ್ಲಲಿದೆ. ಲೋಕಸಭೆಯು 543 ಪ್ಲಸ್ 2 ಸದಸ್ಯ ಬಲವನ್ನು ಹೊಂದಿದೆ.

Exit mobile version