Site icon Vistara News

Narendra Modi : ಆಸ್ಕರ್‌ ವಿಜೇತ ʼದಿ ಎಲಿಫೆಂಟ್ ವಿಸ್ಪರರ್ಸ್ʼ ಸಿನಿ ತಂಡವನ್ನು ಭೇಟಿ ಮಾಡಿದ ಮೋದಿ

#image_title

ನವದೆಹಲಿ: ಈ ಬಾರಿಯ ಆಸ್ಕರ್‌ ಪ್ರಶಸ್ತಿ ಭಾರತಕ್ಕೆ ಹರ್ಷ ತಂದುಕೊಟ್ಟಿದೆ. ʼದಿ ಎಲಿಫೆಂಟ್ ವಿಸ್ಪರರ್ಸ್ʼ ಡಾಕ್ಯುಮೆಂಟರಿ ಸಾಕ್ಷ್ಯಚಿತ್ರ ಮತ್ತು ಆರ್‌ಆರ್‌ಆರ್‌ ಸಿನಿಮಾದ ನಾಟು ನಾಡು ಹಾಡಿಗೆ ಆಸ್ಕರ್‌ ಪ್ರಶಸ್ತಿಗಳು ಬಂದಿವೆ. ಅದೇ ಸಂತಸದಲ್ಲಿರುವ ದಿ ಎಲಿಫೆಂಟ್ ವಿಸ್ಪರರ್ಸ್ ಚಿತ್ರತಂಡವನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಗುರುವಾರ ಭೇಟಿಯಾಗಿದ್ದಾರೆ.

ಇದನ್ನೂ ಓದಿ: Amit Shah: ನರೇಂದ್ರ ಮೋದಿ ನೇತೃತ್ವದಿಂದ ಮಾತ್ರ ಕರ್ನಾಟಕದ ಕಲ್ಯಾಣ: ಬೀದರ್‌ನ ಗೊರಟಾದಲ್ಲಿ ಅಮಿತ್‌ ಶಾ
ಈ ಬಗ್ಗೆ ಪ್ರಧಾನಿಯವರೇ ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಸಿನಿಮಾದ ನಿರ್ದೇಶಕಿ ಕಾರ್ತಿಕಿ ಗೊನ್ಸಲ್ವೆಸ್‌ ಮತ್ತು ನಿರ್ಮಾಪಕಿ ಗುನೀತ್‌ ಮೊಂಗಾ ಅವರೊಂದಿಗಿರುವ ಫೋಟೋವನ್ನು ಹಂಚಿಕೊಂಡಿರುವ ಮೋದಿ ಅವರು, “ದಿ ಎಲಿಫೆಂಟ್ ವಿಸ್ಪರರ್ಸ್ ಸಿನಿಮಾದ ತೇಜಸ್ಸು ಮತ್ತು ಯಶಸ್ಸು ಜಾಗತಿಕ ಗಮನ ಸೆಳೆಯುವುದರ ಜೊತೆಗೆ ಮೆಚ್ಚುಗೆಯನ್ನೂ ಗಳಿಸಿದೆ. ಇಂದು, ಅದಕ್ಕೆ ಸಂಬಂಧಿಸಿದ ಅದ್ಭುತ ತಂಡವನ್ನು ಭೇಟಿ ಮಾಡುವ ಅವಕಾಶ ನನಗೆ ಸಿಕ್ಕಿತು. ಅವರು ಭಾರತವನ್ನು ಹೆಮ್ಮೆಪಡುವಂತೆ ಮಾಡಿದ್ದಾರೆ”ಎಂದು ಅವರು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: Viral Video: ಐಸ್​ ಕ್ರೀಂ ತಯಾರಿಸೋಕೆ ಫ್ರಿಜ್​ ಬೇಡ್ವೇ ಬೇಡ; ಸೀಲಿಂಗ್ ಫ್ಯಾನ್ ಇದ್ದರೂ ಸಾಕು ಎನ್ನುತ್ತಿದ್ದಾರೆ ಈ ಮಹಿಳೆ
ಈ ಸಾಕ್ಷ್ಯಚಿತ್ರವು ದಂಪತಿಯೊಂದಕ್ಕೆ ಅನಾಥ ಆನೆ ಮರಿಯೊಂದಿಗೆ ಬಾಂಧವ್ಯ ಬೆಳೆಸಿಕೊಳ್ಳುವ ಕಥೆಯನ್ನು ಕಟ್ಟಿಕೊಡುತ್ತದೆ. ಈ ಚಿತ್ರ 2022ರ ನವೆಂಬರ್‌ 9ರಂದು ನ್ಯೂಯಾರ್ಕ್‌ ಚಲನಚಿತ್ರೋತ್ಸವದಲ್ಲಿ ತೆರೆ ಕಂಡಿತು. ಅದೇ ವರ್ಷ ಡಿಸೆಂಬರ್‌ 8ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಯಿತು.

Exit mobile version