Viral Video: ಐಸ್​ ಕ್ರೀಂ ತಯಾರಿಸೋಕೆ ಫ್ರಿಜ್​ ಬೇಡ್ವೇ ಬೇಡ; ಸೀಲಿಂಗ್ ಫ್ಯಾನ್ ಇದ್ದರೂ ಸಾಕು ಎನ್ನುತ್ತಿದ್ದಾರೆ ಈ ಮಹಿಳೆ - Vistara News

ವೈರಲ್ ನ್ಯೂಸ್

Viral Video: ಐಸ್​ ಕ್ರೀಂ ತಯಾರಿಸೋಕೆ ಫ್ರಿಜ್​ ಬೇಡ್ವೇ ಬೇಡ; ಸೀಲಿಂಗ್ ಫ್ಯಾನ್ ಇದ್ದರೂ ಸಾಕು ಎನ್ನುತ್ತಿದ್ದಾರೆ ಈ ಮಹಿಳೆ

ಮಹಿಳೆ ಮೊದಲು ಹಾಲನ್ನು ಕಾಯಿಸಿಕೊಂಡು, ಐಸ್​ಕ್ರೀಂ ಮಾಡಲು ಹಾಕಬೇಕಾದ ಪದಾರ್ಥಗಳನ್ನೆಲ್ಲ ಅದಕ್ಕೆ ಹಾಕಿ, ಗ್ಯಾಸ್ ಸ್ಟವ್​ ಮೇಲಿಟ್ಟು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳುತ್ತಾರೆ. ಆ ಮಿಶ್ರಣವನ್ನು ಒಂದು ಚಿಕ್ಕ ಸ್ಟೀಲ್​ ಕ್ಯಾನ್​ಗೆ ಸುರಿಯುತ್ತಾರೆ. ಆಮೇಲೆ ಏನು ಮಾಡಿದರು ಎಂಬುದನ್ನು ಕೆಳಗಿನ ವಿಡಿಯೊದಲ್ಲೇ ನೋಡಿ !

VISTARANEWS.COM


on

woman making ice cream using fan viral video
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮೊದಲು ಐಸ್​ಕ್ರೀಂ ಎಂದರೆ ಅದು ಹೊರಗೆ ಅಂಗಡಿಗಳಲ್ಲಿ ಮಾತ್ರ ಸಿಗುತ್ತದೆ ಎಂಬ ಕಾಲವಿತ್ತು. ಆದರೆ ಈಗ ಫ್ರಿಜ್ ಇರುವ ಮನೆಗಳಲ್ಲೆಲ್ಲ ಸಾಮಾನ್ಯವಾಗಿ ಐಸ್​​ಕ್ರೀಂ ತಯಾರಿ ಮಾಡುತ್ತಾರೆ. ಅದೇನೇ ಇದ್ದರೂ, ಐಸ್​ಕ್ರೀಂ ಮಾಡಲು ಫ್ರಿಜ್​ ಅಂತೂ ಬೇಕೇಬೇಕು. ಆದರೆ ಫ್ರಿಜ್ ಇಲ್ಲದೆಯೂ ನಾನು ಐಸ್​ಕ್ರೀಂ ತಯಾರಿ ಮಾಡುತ್ತೇನೆ ಎನ್ನುತ್ತಾರೆ ಈ ಮಹಿಳೆ. ಈಕೆಯ ಐಡಿಯಾ ನೋಡಿ ನೆಟ್ಟಿಗರು ಅಚ್ಚರಿಯಿಂದ ಹುಬ್ಬೇರಿಸಿದ್ದಾರೆ. ಉದ್ಯಮಿ ಆನಂದ್​ ಮಹೀಂದ್ರಾ ಅವರು ಟ್ವಿಟರ್​ನಲ್ಲಿ ವಿಡಿಯೊ ಶೇರ್ (Viral Video) ಮಾಡಿಕೊಂಡಿದ್ದಾರೆ. ನೀವು ಒಮ್ಮೆ ನೋಡಿಬಿಡಿ.

ಮಹಿಳೆ ಮೊದಲು ಹಾಲನ್ನು ಕಾಯಿಸಿಕೊಂಡು, ಐಸ್​ಕ್ರೀಂ ಮಾಡಲು ಹಾಕಬೇಕಾದ ಪದಾರ್ಥಗಳನ್ನೆಲ್ಲ ಅದಕ್ಕೆ ಹಾಕಿ, ಗ್ಯಾಸ್ ಸ್ಟವ್​ ಮೇಲಿಟ್ಟು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳುತ್ತಾರೆ. ಆ ಮಿಶ್ರಣವನ್ನು ಒಂದು ಚಿಕ್ಕ ಸ್ಟೀಲ್​ ಕ್ಯಾನ್​ಗೆ ಸುರಿಯುತ್ತಾರೆ. ಇಷ್ಟಾದ ಮೇಲೆ ಆಕೆ ಆ ಕ್ಯಾನ್​ಗೆ ಮುಚ್ಚಲು ಹಾಕಿ, ಮತ್ತೊಂದು ದೊಡ್ಡದಾದ ಅಲ್ಯೂಮೀನಿಯಂ ಪಾತ್ರೆಯಲ್ಲಿ ಅದನ್ನು ಇಡುತ್ತಾರೆ ಮತ್ತು ಹಾಲಿನ ಮಿಶ್ರಣ ಇರುವ ಕ್ಯಾನ್​​ಗೆ ಇರುವ ಹಿಡಿಕೆಗೆ ಒಂದು ಹಗ್ಗ ಕಟ್ಟುತ್ತಾರೆ. ಇದಾದ ಮೇಲೆ ಆಕೆ ಅಲ್ಯೂಮಿನಿಯಂ ಪಾತ್ರೆಯಲ್ಲಿ, ಸ್ಟೀಲ್​ ಕ್ಯಾನ್ ಸುತ್ತಲೂ ದೊಡ್ಡದೊಡ್ಡ ಐಸ್​ ತುಂಡುಗಳನ್ನು ಹಾಕುತ್ತಾರೆ. ಅಷ್ಟಾದ ಮೇಲೆ ಫ್ಯಾನ್​ ಸ್ವಿಚ್​ ಆನ್ ಮಾಡುತ್ತಾರೆ. ಅರೆ, ಅವರೇಕೆ ಫ್ಯಾನ್ ಆನ್​ ಮಾಡುತ್ತಾರೆ ಎಂದು ನಿಮಗೆ ಅನ್ನಿಸಬಹುದು. ಅಲ್ಲೇ ಇರುವುದು ಟ್ವಿಸ್ಟ್​…!

ಸ್ಟೀಲ್​ ಕ್ಯಾನ್​ ಹಿಡಿಕೆಗೆ ಕಟ್ಟಿರುವ ಹಗ್ಗದ ಇನ್ನೊಂದು ತುದಿಯನ್ನು ಸೀಲಿಂಗ್ ಫ್ಯಾನ್​ಗೆ ಕಟ್ಟಲಾಗಿರುತ್ತದೆ. ಫ್ಯಾನ್​ ತಿರುಗುತ್ತಿದ್ದಂತೆ ಇತ್ತ ಅಲ್ಯೂಮೀನಿಯಂ ಪಾತ್ರೆಯಲ್ಲಿರುವ ಸ್ಟೀಲ್​ ಕ್ಯಾನ್​ ಗಿರಗಿರನೆ ತಿರುಗುತ್ತದೆ. ಐಸ್​ ತುಂಡುಗಳ ಮಧ್ಯೆ ಅದು ತಿರುಗುತ್ತಿದ್ದಂತೆ, ಅದರೊಳಗೆ ಇರುವ ಹಾಲಿನ ಮಿಶ್ರಣ ಐಸ್​ಕ್ರೀಂ ಆಗಿ ಬದಲಾಗುತ್ತದೆ. ಮಹಿಳೆ ಕೆಲ ಹೊತ್ತು ಕ್ಯಾನ್​ಗೆ ಮುಚ್ಚಳವನ್ನು ಹಾಕಿ ತಿರುಗಿಸಿ, ಮತ್ತೆ ಕೆಲ ನಿಮಿಷಗಳ ಕಾಲ ಮುಚ್ಚಳವನ್ನು ತೆಗೆದು ತಿರುಗಲು ಬಿಡುತ್ತಾರೆ. ಬಳಿಕ ಅದನ್ನು ಅಲ್ಲಿಂದ ತೆಗೆದು, ಐಸ್​ ಕ್ರೀಂ ಎಂದು ಸರ್ವ್ ಮಾಡುತ್ತಾರೆ.

ವಿಡಿಯೊ ಶೇರ್ ಮಾಡಿಕೊಂಡ ಆನಂದ್ ಮಹೀಂದ್ರಾ ಅವರು, ‘ಮನಸ್ಸಿದ್ದಲ್ಲಿ ಮಾರ್ಗ. ಇದು ಹ್ಯಾಂಡ್​ ಮೇಡ್​ ಮತ್ತು ಫ್ಯಾನ್ ಮೇಡ್​ ಐಸ್​ ಕ್ರೀಂ. ಇದೆಲ್ಲ ಸಾಧ್ಯವಾಗುವುದು ಭಾರತದಲ್ಲಿ ಮಾತ್ರ’ ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ. ಮಾರ್ಚ್​ 29ರಂದು ಈ ವಿಡಿಯೊವನ್ನು ಆನಂದ್ ಮಹೀಂದ್ರಾ ಶೇರ್ ಮಾಡಿಕೊಂಡಿದ್ದು, ಇಲ್ಲಿಯವರೆಗೆ 1.1 ಮಿಲಿಯನ್​ಗಳಷ್ಟು ವೀವ್ಸ್ ಬಂದಿದೆ. ಸಾವಿರಾರು ಜನರು ಲೈಕ್ಸ್ ಕೊಟ್ಟಿದ್ದಾರೆ. ವಿಶ್ವದಲ್ಲೇ ಅತ್ಯುತ್ತಮವಾದ ಐಸ್​ಕ್ರೀಂ ತಯಾರಿಸುವ ವಿಧಾನ ಎಂದು ಒಬ್ಬರು ಬರೆದಿದ್ದರೆ, ಇನ್ನೊಬ್ಬರು, ಮಹಿಳೆಯ ಪ್ರಯತ್ನ ನಿಜಕ್ಕೂ ಶ್ಲಾಘನೀಯ ಎಂದಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

MS Dhoni: ಸಿಟ್ಟಿನಲ್ಲಿ ಕ್ಯಾಮೆರಾಗೆ ನೀರಿನ ಬಾಟಲ್​ ಎಸೆಯಲು ಮುಂದಾದ ಧೋನಿ; ವಿಡಿಯೊ ವೈರಲ್​

MS Dhoni: ಮೊಣಕಾಲು ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಧೋನಿ ಕಳೆದ ವರ್ಷ ಮುಂಬೈಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈ ಬಾರಿಯ ಐಪಿಎಲ್​ನ ಮೊದಲ ಪಂದ್ಯದಲ್ಲಿಯೇ ಧೋನಿ ಗಾಯದ ಸಮಸ್ಯೆಯಿಂದ ಬಳಲುತ್ತಿರುವುದು ಕಂಡು ಬಂದಿತ್ತು.

VISTARANEWS.COM


on

MS Dhoni
Koo

ಚೆನ್ನೈ: ವಿದಾಯದ ಐಪಿಎಲ್(IPL 2024)​ ಟೂರ್ನಿ ಆಡುತ್ತಿರುವ ಚೆನ್ನೈ ಸೂಪರ್​ ಕಿಂಗ್ಸ್(CSK)​ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ(MS Dhoni) ಅವರ ಬ್ಯಾಟಿಂಗ್​ ಕುಣ್ತುಂಬಿಕೊಳ್ಳಲು ಅವರ ಅಭಿಮಾನಿಗಳು ಪ್ರತಿ ಪಂದ್ಯದ ವೇಳೆಯೂ ಬಹಳ ನಿರೀಕ್ಷೆಯಿಂದ ಕಾಯುತ್ತಿರುತ್ತಾರೆ. ಕ್ಯಾಮೆರಾಮೆನ್​ಗಳು ಧೋನಿಯನ್ನು ಪಂದ್ಯದ ನಡುವೆ ತೋರಿಸಿದಾಗಲೆಲ್ಲವೂ ಸ್ಟೇಡಿಯಂನಲ್ಲಿ ಧೋನಿಯ ಹೆಸರು ಜೋರಾಗಿ ಕೇಳಿ ಬರುತ್ತದೆ. ಮಂಗಳವಾರದ ಲಕ್ನೋ(Lucknow Super Giants) ವಿರುದ್ಧದ ಪಂದ್ಯದ ವೇಳೆಯೂ ಧೋನಿ ಬ್ಯಾಟಿಂಗ್​ಗೆ ರೆಡಿಯಾಗಿ ಡ್ರೆಸ್ಸಿಂಗ್​ ರೂಮ್​ನಲ್ಲಿ ಇರುವುದನ್ನು ದೊಡ್ಡ ಪರದೆಯಲ್ಲಿ ತೋರಿಸಲಾಯಿತು. ಈ ವೇಳೆ ಧೋನಿ ಕೋಪಗೊಂಡು ಕ್ಯಾಮೆರಾಗೆ ನೀರಿನ ಬಾಟಲ್​ ಎಸೆಯಲು ಮುಂದಾಗಿದ್ದಾರೆ. ತಕ್ಷಣ ಕ್ಯಾಮೆರಾಮೆನ್​ ತನ್ನ ಕ್ಯಾಮೆರಾವನ್ನು ಬೇರೆಡೆಗೆ ತಿರುಗಿಸಿದ್ದಾನೆ. ಈ ವಿಡಿಯೊ ವೈರಲ್(viral video)​ ಆಗಿದೆ.

ಎಂ.ಎಸ್.ಧೋನಿ(MS Dhoni), ಕ್ಯಾಪ್ಟನ್‌ ಕೂಲ್‌, ಮಾಹಿ, ತಾಲಾ… ಎಂದೆಲ್ಲ ಪ್ರೀತಿಯಿಂದ ಕರೆಸಿಕೊಳ್ಳುವ ಮಹೇಂದ್ರ ಸಿಂಗ್‌ ಧೋನಿ ಎಂದರೆ ಅಭಿಮಾನಿಗಳಿಗೊಂದು ಎಮೋಷನ್ (ಭಾವನೆ). ಅವರು ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಕಳೆದ ವರ್ಷವೇ ಧೋನಿ ಅವರು ಐಪಿಎಲ್​ಗೆ ವಿದಾಯ ಹೇಳಲು ನಿರ್ಧರಿಸಿದ್ದರು. ಆದರೆ ಅಭಿಮಾನಿಗಳ ಒತ್ತಾಯದ ಮೇರೆಗೆ ತಮ್ಮ ನಿವೃತ್ತಿಯನ್ನು ಮುಂದೆ ಹಾಕಿದ್ದರು. ಈ ಬಾರಿಯ ಟೂರ್ನಿ ಅವರಿಗೆ ವಿದಾಯದ ಟೂರ್ನಿಯಾಗಲಿದೆ. ಈ ಮೂಲಕ ಧೋನಿ ಎಲ್ಲ ಮಾದರಿಯ ಕ್ರಿಕಟ್​ಗೂ ಗುಡ್​ಬೈ ಹೇಳಲಿದ್ದಾರೆ.

ಮೊಣಕಾಲು ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಧೋನಿ ಕಳೆದ ವರ್ಷ ಮುಂಬೈಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈ ಬಾರಿಯ ಐಪಿಎಲ್​ನ ಮೊದಲ ಪಂದ್ಯದಲ್ಲಿಯೇ ಧೋನಿ ಗಾಯದ ಸಮಸ್ಯೆಯಿಂದ ಬಳಲುತ್ತಿರುವುದು ಕಂಡು ಬಂದಿತ್ತು. ಕಳೆದ ಮುಂಬೈ ಮತ್ತು ಕೆಕೆಆರ್​ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್​ ನಡೆಸಿದ ವೇಳೆ ಕುಂಟುತಾ ನಡೆದಾಡಿದ ಫೋಟೊ ಮತ್ತು ವಿಡಿಯೊ ವೈರಲ್​ ಆಗಿತ್ತು. ಕಳೆದ ಮುಂಬೈ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್​ ಪಾಂಡ್ಯಗೆ ಹ್ಯಾಟ್ರಿಕ್​ ಸಿಕ್ಸರ್​ಗಳ ರುಚಿ ತೋರಿಸಿದ್ದರು. ವಯಸ್ಸು 42 ಆದರೂ, ತಮ್ಮ ಬ್ಯಾಟಿಂಗ್​ ಫಾರ್ಮ್​ ಮಾತ್ರ ಈ ಹಿಂದಿನಂತೆಯೇ ಇದೆ.​

ಇದನ್ನೂ ಓದಿ IPL 2024: 13 ವರ್ಷದ ಐಪಿಎಲ್​ ದಾಖಲೆ ಮುರಿದ ಮಾರ್ಕಸ್​ ಸ್ಟೋಯಿನಿಸ್

ಧೋನಿ ಅವರು ಲಕ್ನೋ ವಿರುದ್ಧ ಕೇವಲ ಒಂದು ಎಸೆತ ಎದುರಿಸಿ ಬೌಂಡರಿ ಮೂಲಕ ಅಜೇಯ 4 ರನ್ ಗಳಿಸಿದರು. ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಇತ್ತಂಡಗಳ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಚೆನ್ನೈ 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 210 ರನ್‌ ಗಳಿಸಿತು. ಇದನ್ನು ಬೆನ್ನತ್ತಿದ ಲಕ್ನೋ 19.3 ಓವರ್‌ ಗಳಲ್ಲಿ 4 ವಿಕೆಟ್‌ಗೆ 213 ರನ್‌ ಗಳಿಸಿ, 6 ವಿಕೆಟ್‌ ಗಳಿಂದ ಜಯಭೇರಿ ಬಾರಿಸಿತು.

Continue Reading

ವೈರಲ್ ನ್ಯೂಸ್

Viral News: ತಂಗಿಗೆ ಟಿವಿ ಗಿಫ್ಟ್‌ ಕೊಡಲು ಮುಂದಾದ ಪತಿಯನ್ನು ಕೊಲ್ಲಿಸಿದ ಪತ್ನಿ!

Viral News: ಉತ್ತರಪ್ರದೇಶದ ಬಾರಾಬಂಕಿ ಗ್ರಾಮದಲ್ಲಿ ಮದುವೆ ಮನೆಯೊಂದರಲ್ಲಿ ಉಡುಗೊರೆ ವಿಚಾರದಲ್ಲಿ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ತನ್ನ ಸಹೋದರಿಯ ಮದುವೆಯ ಸಂದರ್ಭದಲ್ಲಿ ಆಕೆಗೆ ಚಿನ್ನದ ಉಂಗುರ ಮತ್ತು ಟಿವಿಯನ್ನು ಉಡುಗೊರೆಯಾಗಿ ನೀಡಲು ಮುಂದಾಗಿದ್ದ ಚಂದ್ರಪ್ರಕಾಶ್ ಮಿಶ್ರಾನನ್ನು ಪತ್ನಿ ಮನೆಯವರು ಕೊಲೆ ಮಾಡಿದ್ದಾರೆ.

VISTARANEWS.COM


on

Viral News
Koo

ಲಕ್ನೋ: ಇತ್ತೀಚಿನ ದಿನಗಳಲ್ಲಿ ಸಣ್ಣ-ಪುಟ್ಟ ಕಾರಣಕ್ಕೂ ಜಗಳ ನಡೆಯುವುದು ಸಾಮಾನ್ಯ ಎಂಬಂತಾಗಿದೆ. ಮದುವೆ ಮನೆಯಲ್ಲಿ ನೆಚ್ಚಿನ ತಿಂಡಿ ಬಡಿಸಲಿಲ್ಲ, ಸರಿಯಾಗಿ ಉಪಚಾರ ಮಾಡಲಿಲ್ಲ ಎಂಬಿತ್ಯಾದಿ ಕಾರಣಕ್ಕೆ ಜಗಳ ನಡೆದು ಸಂಭ್ರಮದ ಮನೆ ಸ್ಮಶಾನವಾಗಿ ಮಾರ್ಪಟ್ಟಿದ್ದನ್ನು ನೋಡಿದ್ದೇವೆ. ಇಲ್ಲೂ ಅಂತಹದ್ದೇ ಘಟನೆಯೊಂದು ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ನಡೆದ ಕಲಹ ವ್ಯಕ್ತಿಯೊಬ್ಬನ ಜೀವವನ್ನೇ ಬಲಿ ಪಡೆದಿದೆ. ಉತ್ತರಪ್ರದೇಶದ ಬಾರಾಬಂಕಿ ಗ್ರಾಮದಲ್ಲಿ ಮದುವೆ ಮನೆಯೊಂದರಲ್ಲಿ ಉಡುಗೊರೆ ವಿಚಾರದಲ್ಲಿ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಆ ಮೂಲಕ ಸಂಭ್ರಮದಿಂದ ಕೂಡಿದ್ದ ಮನೆಯಲ್ಲಿ ಈಗ ದುಃಖ ಮಡುಗಟ್ಟಿದೆ (Viral News).

ಘಟನೆ ವಿವರ

ಚಂದ್ರಪ್ರಕಾಶ್ ಮಿಶ್ರಾ (35) ಕೊಲೆಯಾದ ವ್ಯಕ್ತಿ. ತನ್ನ ಸಹೋದರಿಯ ಮದುವೆಯ ಸಂದರ್ಭದಲ್ಲಿ ಆಕೆಗೆ ಚಿನ್ನದ ಉಂಗುರ ಮತ್ತು ಟಿವಿಯನ್ನು ಉಡುಗೊರೆಯಾಗಿ ನೀಡಲು ಮುಂದಾಗಿದ್ದೇ ಆತ ಮಾಡಿದ ದೊಡ್ಡ ತಪ್ಪು! ಹೌದು, ಚಂದ್ರಪ್ರಕಾಶ್ ಮಿಶ್ರಾ ತನ್ನ ತಂಗಿಗೆ ಚಿನ್ನದ ಉಂಗುರ ಮತ್ತು ಟಿವಿಯನ್ನು ನೀಡಲು ಚಿಂತನೆ ನಡೆಸಿದ್ದರು. ಇದರಿಂದ ಕೋಪಗೊಂಡ ಆತನ ಪತ್ನಿ ಚಾಬಿ ಈ ವಿಚಾರವನ್ನು ತನ್ನ ಕುಟುಂಬದವರಿಗೆ ತಿಳಿಸಿದ್ದಳು. ಇದರಿಂದ ಅಸಮಾಧಾನಗೊಂಡ ಆಕೆಯ ಮನೆಯವರು ಚಂದ್ರಪ್ರಕಾಶ್ ಮಿಶ್ರಾ ಅವರನ್ನು ಚೆನ್ನಾಗಿ ಥಳಿಸಿದ್ದರು. ಗಂಭೀರ ಗಾಯಗೊಂಡ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ʼʼಏಪ್ರಿಲ್‌ 26ಕ್ಕೆ ಚಂದ್ರಪ್ರಕಾಶ್ ಮಿಶ್ರಾ ಅವರ ತಂಗಿಯ ಮದುವೆ ನಿಗದಿಯಾಗಿದೆ. ಹೀಗಾಗಿ ಅವರು ಪ್ರೀತಿಯ ತಂಗಿಗೆ ಚಿನ್ನದ ಉಂಗುರ ಮತ್ತು ಟಿವಿಯನ್ನು ಉಡುಗೊರೆಯಾಗಿ ಕೊಡಲು ಯೋಜನೆ ಹಾಕಿಕೊಂಡಿದ್ದರು. ಅದನ್ನು ಪತ್ನಿ ಚಾಬಿ ಬಳಿ ಹೇಳಿಕೊಂಡಿದ್ದರು. ಆದರೆ ಇದನ್ನು ಕೇಳಿ ಚಾಬಿ ಉರಿದು ಬಿದ್ದಳು. ಈ ವಿಚಾರವಾಗಿ ದಂಪತಿಯ ಮಧ್ಯೆ ಮಾತಿಗೆ ಮಾತು ಬೆಳೆದು ಜಗಳವೇ ನಡೆಯಿತುʼʼ ಎಂದು ಪೊಲೀಸರು ತಿಳಿಸಿದ್ದಾರೆ.

ʼʼಅಷ್ಟಕ್ಕೇ ಸುಮ್ಮನಾಗದ ಚಾಬಿ ತನ್ನ ಸಹೋದರರನ್ನು ಕರೆದು ಚಂದ್ರಪ್ರಕಾಶ್‌ಗೆ ಪಾಠ ಕಲಿಸುವಂತೆ ಹೇಳಿದ್ದಾಳೆ. ತಂಗಿಯ ಕರೆಗೆ ಓಗೊಟ್ಟು ಬಂದ ಚಾಬಿಯ ಸಹೋದರರು ಚಂದ್ರಪ್ರಕಾಶ್‌ ಮೇಲೆ ಹಲ್ಲೆ ನಡೆಸಿದ್ದಾರೆ. ಸುಮಾರು ಒಂದು ಗಂಟೆಗಳ ಕಾಲ ಕೋಲುಗಳಿಂದ ಥಳಿಸಿದ್ದಾನೆ. ಕೊನೆಗೆ ಚಂದ್ರಪ್ರಕಾಶ್‌ ಕುಟುಂಬದ ಸದಸ್ಯರು ಅವರನ್ನು ಆಸ್ಪತ್ರೆಗೆ ಕರೆದೊಯ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದರೆ ಆಸ್ಪತ್ರೆಯಲ್ಲಿ ನಿಧನರಾದರುʼʼ ಎಂದು ಅಧಿಕಾರಿಗಳು ಘಟನೆಯನ್ನು ವಿವರಿಸಿದ್ದಾರೆ.

ಸದ್ಯ ಪೊಲೀಸರು ಘಟನೆಯ ಸಂಬಂಧ ಐವರನ್ನು ಬಂಧಿಸಿದ್ದಾರೆ. ಚಾಬಿ ಮತ್ತು ಆಕೆಯ ಸಹೋದರರು ಸೇರಿ 5 ಮಂದಿಯ ವಿರುದ್ಧ ದೂರು ದಾಖಲಿಸಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.

ಇದನ್ನೂ ಓದಿ: ಮದುವೆ ಮನೇಲಿ ರಸಗುಲ್ಲಾಗಾಗಿ ಹೊಡೆದಾಟ; ಆರು ಮಂದಿಯ ಪರಿಸ್ಥಿತಿ ಗಂಭೀರ!

ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿಯೂ ಇಂತಹದ್ದೇ ಘಟನೆ ನಡೆದಿತ್ತು. ವಿವಾಹ ವಾರ್ಷಿಕೋತ್ಸವದ ಉಡುಗೊರೆಯನ್ನು ನೀಡದ ಕಾರಣಕ್ಕೆ ಕೋಪಗೊಂಡ ಮಹಿಳೆಯೊಬ್ಬಳು ತನ್ನ ಪತಿಗೆ ಚಾಕುವಿನಿಂದ ಇರಿದಿದ್ದಳು. ಕೂಡಲೇ ಎಚ್ಚೆತ್ತುಕೊಂಡ ಆತ ತಪ್ಪಿಸಿಕೊಂಡು ಪಾರಾಗಿದ್ದ. ಬಳಿಕ ನೆರೆಮನೆಯವರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ತನ್ನ ಅಜ್ಜ ನಿಧನ ಹೊಂದಿದ್ದರಿಂದ ಪತ್ನಿಗೆ ಉಡುಗೊರೆ ನೀಡಿರಲಿಲ್ಲ. ಇದೇ ಕಾರಣಕ್ಕೆ ಆಕೆ ಹಲ್ಲೆ ನಡೆಸಿದ್ದಳು ಎಂದು ಬಳಿಕ ಆತ ದೂರು ನೀಡಿದ್ದ.

Continue Reading

ವೈರಲ್ ನ್ಯೂಸ್

Board Exam Result: 93.5% ಫಲಿತಾಂಶ ನೋಡಿ ಮೂರ್ಛೆ ಹೋದ ವಿದ್ಯಾರ್ಥಿ! ಐಸಿಯುಗೆ ದಾಖಲು

Board Exam Result: ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳು ಸಂತೋಷದಿಂದ ಜಿಗಿಯುವುದು ಸ್ವಾಭಾವಿಕ. ವಿಶೇಷವಾಗಿ, 90%ಕ್ಕಿಂತ ಹೆಚ್ಚಿರುವಾಗ ಇನ್ನಷ್ಟು ಸಂತಸವಾಗುತ್ತದೆ. ಆದರೆ ಮೀರತ್‌ನ 10ನೇ ತರಗತಿಯ ವಿದ್ಯಾರ್ಥಿ ತನ್ನ ಫಲಿತಾಂಶಗಳನ್ನು ನೋಡಿದ ನಂತರ ಮೂರ್ಛೆ ಹೋದ.

VISTARANEWS.COM


on

board exam tension viral news
Koo

ಲಖನೌ: ತನ್ನ ಯುಪಿ ಬೋರ್ಡ್ (UP Board Exam, Public Exam) 10ನೇ ತರಗತಿಯ ಪರೀಕ್ಷೆಯಲ್ಲಿ 93.5% ಅಂಕಗಳನ್ನು ಪಡೆದ ಪಾಸಾದ ವಿದ್ಯಾರ್ಥಿಯೊಬ್ಬ (Student), ಫಲಿತಾಂಶ ನೋಡಿದ ಕ್ಷಣವೇ ನಂಬಲಾಗದೆ ಮೂರ್ಛೆ ಹೋಗಿದ್ದಾನೆ. ನಂತರ ಈತನನ್ನು ತೀವ್ರ ನಿಗಾ ಘಟಕಕ್ಕೆ (ICU) ದಾಖಲಿಸಲಾಯಿತು.

ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳು ಸಂತೋಷದಿಂದ ಜಿಗಿಯುವುದು ಸ್ವಾಭಾವಿಕ. ವಿಶೇಷವಾಗಿ, 90%ಕ್ಕಿಂತ ಹೆಚ್ಚಿರುವಾಗ ಇನ್ನಷ್ಟು ಸಂತಸವಾಗುತ್ತದೆ. ಆದರೆ ಮೀರತ್‌ನ 10ನೇ ತರಗತಿಯ ವಿದ್ಯಾರ್ಥಿ ತನ್ನ ಫಲಿತಾಂಶಗಳನ್ನು ನೋಡಿದ ನಂತರ ಮೂರ್ಛೆ ಹೋದ. ಬೋರ್ಡ್ ಪರೀಕ್ಷೆಗಳ ಸಮಯದಲ್ಲಿ ವಿದ್ಯಾರ್ಥಿಗಳು ಅನುಭವಿಸುವ ಒತ್ತಡವನ್ನು ಇದು ಎತ್ತಿ ತೋರಿಸಿದೆ.

ತನ್ನ ಯುಪಿ ಬೋರ್ಡ್ 10ನೇ ತರಗತಿಯ ಪರೀಕ್ಷೆಯಲ್ಲಿ 93.5% ಪಡೆದ ನಂತರ, ಐಸಿಯುಗೆ ದಾಖಲಾದ ವಿದ್ಯಾರ್ಥಿ ನಂತರ ಚೇತರಿಸಿಕೊಂಡಿದ್ದಾನೆ. ಮೀರತ್‌ನ ಮೋದಿಪುರಂನಲ್ಲಿರುವ ಮಹರ್ಷಿ ದಯಾನಂದ ಇಂಟರ್ ಕಾಲೇಜಿನ 16 ವರ್ಷದ ಅನ್ಶುಲ್ ಕುಮಾರ್ ತನ್ನ ಪರೀಕ್ಷೆಗಳಲ್ಲಿ 93.5% ಅಂಕಗಳನ್ನು ಗಳಿಸಿದ್ದಾನೆ. ಆದರೆ ಸಂತೋಷದ ಕ್ಷಣವೇ ಆತನ ಕುಟುಂಬಕ್ಕೆ ದುಃಖದಾಯಕವಾಯಿತು. ಆತನ ಸ್ಥಿತಿ ಸುಧಾರಿಸದ ಕಾರಣ ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆಯ ನಂತರ ಕುಮಾರ್ ಬೇಗನೆ ಪ್ರಜ್ಞೆಯನ್ನು ಪಡೆದ.

ಉತ್ತರ ಪ್ರದೇಶದಲ್ಲಿ 10ನೇ ತರಗತಿ ಮತ್ತು 12ನೇ ತರಗತಿಯ ಫಲಿತಾಂಶಗಳನ್ನು ಏಪ್ರಿಲ್ 20, 2024ರಂದು ಬಿಡುಗಡೆ ಮಾಡಲಾಯಿತು. 10 ನೇ ತರಗತಿಯಲ್ಲಿ 89.55% ಮತ್ತು 12 ನೇ ತರಗತಿಯಲ್ಲಿ 82.60% ಮಂದಿ ಉತ್ತೀರ್ಣರಾಗಿದ್ದಾರೆ. ಶುಭಂ ವರ್ಮಾ ಮತ್ತು ಪ್ರಾಚಿ ನಿಗಮ್ ಯುಪಿಎಂಎಸ್‌ಪಿ 10 ಮತ್ತು 12 ನೇ ತರಗತಿಯಲ್ಲಿ ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದರು.

ಇದನ್ನೂ ಓದಿ: Drought Relief: ಒಂದು ವಾರದಲ್ಲಿ ಕರ್ನಾಟಕಕ್ಕೆ ಬರ ಪರಿಹಾರ; ಸುಪ್ರೀಂಗೆ ಕೇಂದ್ರ ಮಹತ್ವದ ಮಾಹಿತಿ

Continue Reading

ಪ್ರಮುಖ ಸುದ್ದಿ

Look between H and L : ಸೋಶಿಯಲ್​ ಮೀಡಿಯಾಗಳಲ್ಲಿ ಟ್ರೆಂಡ್​ ಆದ H ಮತ್ತು L; ಏನಿದರ ಗಮ್ಮತ್ತು?

Look between H and L : ನಿಮ್ಮ ಕೀಬೋರ್ಡ್​​ನಲ್ಲಿ ಎಚ್ ಮತ್ತು ಎಲ್ ನಡುವೆ ನೋಡಿ” ಟ್ರೆಂಡ್ ಕೂಡ ಗೊಂದಲ ಸೃಷ್ಟಿಸಿತು. ಯಾಕೆಂದರೆ ಸ್ವಿಗ್ಗಿ, ಯೂಟ್ಯೂಬ್, ಬ್ಲಿಂಕಿಟ್ ಮತ್ತು ಇತರ ಬ್ರಾಂಡ್​ಗಳು ಕೂಡ ತಮ್ಮದೂ ಇರಲಿ ಎಂದು ಪೋಸ್ಟ್​​ ಮಾಡಿದವು. ಹೀಗಾಗಿ ವಿಷಯವೇನೆಂದು ತಿಳಿದುಕೊಳ್ಳುವುದು ಅಗತ್ಯ.

VISTARANEWS.COM


on

ook between H and L
Koo

ಬೆಂಗಳೂರು: ಮೇಣದ ಅರಮನೆಗೆ ಬೆಂಕಿ ಹಿಡಿದಷ್ಟೇ ವೇಗವಾಗಿ ಸೋಶಿಯಲ್​ ಮೀಡಿಯಾಗಳಲ್ಲಿ ಟ್ರೆಂಡ್ ಗಳು ಸೃಷ್ಟಿಯಾಗುತ್ತವೆ. ವ್ಯಕ್ತಿಯೊಬ್ಬರು ಶೇರ್ ಮಾಡುವ ಯಾವುದೊ ಒಂದು ಕಾನ್ಸೆಪ್ಟ್​ ಬೆಳೆಬೆಳೆದು ವಿಶ್ವ ವ್ಯಾಪಿಯಾಗುತ್ತದೆ. ಆ ವಿಷಯಕ್ಕೆ ತಲೆ, ಕಾಲು ಮತ್ತು ಬಾಲಗಳೂ ಸೇರಿಕೊಳ್ಳುತ್ತವೆ. ಮುಂದೆ ಅದು ಎಲ್ಲರ ಮನಸ್ಸನ್ನೂ ಗೆಲ್ಲುವ ಸೋಶಿಯಲ್​ ಮೀಡಿಯಾ ಟ್ರೆಂಡ್ ಆಗಿ ಉಳಿಯುತ್ತದೆ. ಅಂತೆಯೇ ಮಂಗಳವಾರ (ಏಪ್ರಿಲ್ 23ರಂದು) ಸೋಶಿಯಲ್​ ಮೀಟಿಯಾ ವೇದಿಕೆಯಾಗಿರುವ ಎಕ್ಸ್​​ನಲ್ಲಿ ಎಚ್​​ ಮತ್ತು ಎಲ್ ಮಧ್ಯೆ ನೋಡಿ (Look between H and L) ಟ್ರೆಂಡ್​ ಕಿಡಿ ಹಚ್ಚಿತ್ತು. ಎಲ್ಲಿ ನೋಡಿದರೂ ಇದೇ ರೀತಿಯ ಪೋಸ್ಟ್​ಗಳು ಕಾಣಿಸುತ್ತಿದ್ದವು. ಆರಂಭದಲ್ಲಿ ಪೋಸ್ಟ್​​ ನೋಡಿ ಗಾಬರಿ ಬಿದ್ದಿದ್ದರು ಹಲವರು. ಅರ್ಥ ಮಾಡಿಕೊಂಡ ಬಳಿಕ ಅದು ದೊಡ್ಡ ವಿನೋದವಾಗಿ ಮಾರ್ಪಾಡಾಯಿತು.

ಸೋಶಿಯಲ್​ ಮೀಡಿಯಾಗಳಲ್ಲಿ ಆಗಾಗ್ಗೆ ಮೀಮ್ ಗಳು, ವೀಡಿಯೊಗಳು ಮತ್ತು ನೆಟ್ಟಿಗರು ಹಂಚಿಕೊಳ್ಳುವ ವಿಷಯಗಳು ಸಮೃದ್ಧವಾಗಿರುತ್ತವೆ. ಆದಾಗ್ಯೂ, ಈ ಕೆಲವು ಸಂಗತಿಗಳ ಅರ್ಥದ ಬಗ್ಗೆ ತಿಳಿದಿಲ್ಲದ ಬಹಳಷ್ಟು ಜನರಿಗೆ ಇದೇನು ಅನಿಸುವುದು ಸಹಜ. ಅಂತೆಯೇ “ನಿಮ್ಮ ಕೀಬೋರ್ಡ್​​ನಲ್ಲಿ ಎಚ್ ಮತ್ತು ಎಲ್ ನಡುವೆ ನೋಡಿ” ಟ್ರೆಂಡ್ ಕೂಡ ಗೊಂದಲ ಸೃಷ್ಟಿಸಿತು. ಯಾಕೆಂದರೆ ಸ್ವಿಗ್ಗಿ, ಯೂಟ್ಯೂಬ್, ಬ್ಲಿಂಕಿಟ್ ಮತ್ತು ಇತರ ಬ್ರಾಂಡ್​ಗಳು ಕೂಡ ತಮ್ಮದೂ ಇರಲಿ ಎಂದು ಪೋಸ್ಟ್​​ ಮಾಡಿದವು. ಹೀಗಾಗಿ ವಿಷಯವೇನೆಂದು ತಿಳಿದುಕೊಳ್ಳುವುದು ಅಗತ್ಯ.

ಏನಿದು Look between H and L?

ನಿಮ್ಮ ಕಂಪ್ಯೂಟರ್ ಅಥವಾ ಮೊಬೈಲ್ ಕಿ ಪ್ಯಾಡ್​ನಲ್ಲಿ ಇಂಗ್ಲಿಷ್​ನ H ಮತ್ತು L ನಡುವೆ J ಮತ್ತು K ಇದೆ. ಹಾಗಾದರೆ ಜೆ.ಕೆ ಎಂದರೇನು? ಇಂಗ್ಲಿಷ್​ನಲ್ಲಿ Just Kidding ( ಕೇವಲ ತಮಾಷೆಗಾಗಿ) ಎಂಬ ಮಾತಿದೆ. ಅದನ್ನು ನೇರವಾಗಿ ಹೇಳುವ ಬದಲು Look between H and L ಟ್ರೆಂಡ್​ ಸೃಷ್ಟಿ ಮಾಡಲಾಗಿದೆ. ಅಂದ ಹಾಗೆ ಇದಕ್ಕೂ ಒಂದು ಕಾರಣವಿದೆ. ಇತ್ತೀಚೆಗೆ ಮಲಯಾಳಂನಲ್ಲಿ ‘ಪ್ರೇಮಾಲು’ ಎಂಬ ಸಿನಿಮಾ ಬಿಡುಗಡೆಯಾಗಿತ್ತು. ಅದು ಈಗ ಒಟಿಟಿಯಲ್ಲೂ ಲಭ್ಯ. ಅದಲ್ಲಿ ಭಗ್ನ ಪ್ರೇಮಿ ಹಾಗೂ ಐಟಿ ಕಂಪನಿಯೊಂದರ ಪ್ರಾಜೆಕ್ಟ್​ ಮ್ಯಾನೇಜರ್​ ಆದಿ ಎಂಬ ಪಾತ್ರವನ್ನು Just Kidding ಅನ್ನು ಪದೇ ಪದೆ ಬಳಸುತ್ತಾನೆ. ಗಂಭೀರವಾದ ವಿಷಯವನ್ನು ಹೇಳಿ just kidding ಎಂದು ಹೇಳುತ್ತಿದ್ದಾನೆ.

ಇದನ್ನೂ ಓದಿ: Virat kohli : ಅಂಪೈರ್​ಗಳ ಕೈ ಕುಲುಕಲೂ ನಿರಾಕರಿಸಿದ್ದ ವಿರಾಟ್​ ಕೊಹ್ಲಿ; ವಿಡಿಯೊ ಇದೆ

ಇದೇ ವೇಳೆ Look Between T and O ಟ್ರೆಂಡ್​ ಕೂಡ ಆಗಿದೆ. ಇದು 2021ರಲ್ಲಿ ಆರಂಭಗೊಂಡಿತು. 4Chan ಎಂಬ ಚಿತ್ರ ಆಧಾರಿತ ವೆಬ್​​ ಸರಣಿಯದ್ದಾಗಿದೆ. ಕೀಬೋರ್ಡ್​​ನಲ್ಲಿ T ಮತ್ತು O ನಡುವಿನ Y, U ಮತ್ತು I ಅಕ್ಷರಗಳಿವೆ. ಇದು ಅನಿಮೆ ಸರಣಿಯ ಪಾತ್ರವಾದ Yui ಹೆಸರಾಗಿದೆ. ಇದು ತಮ್ಮ ಪ್ರೌಢ ಶಾಲೆಯ ಸಂಗೀತ ಕ್ಲಬ್ ಮೂಲಕ ಬ್ಯಾಂಡ್ ನುಡಿಸುವು ಹುಡುಗಿಯ ಕುರಿತದ್ದು.

ಬಹಳಷ್ಟು ಜನರು ಈ ಟ್ರೆಂಡ್​ ತಮ್ಮ ಪ್ರತಿಕ್ರಿಯೆಗಳನ್ನು ಸಹ ವ್ಯಕ್ತಪಡಿಸಿದರು. ಕೆಲವರು ಅದರ ಬಗ್ಗೆ ಗೊಂದಲಕ್ಕೊಳಗಾಗಿದ್ದರೆ ಇತರರು ಇದು “ಕಿರಿಕಿರಿ” ಎಂದು ಎಂದೂ ಕಾಮೆಂಟ್​ ಮಾಡಿದ್ದಾರೆ.

Continue Reading
Advertisement
Lok Sabha Election 2024 DK Shivakumar IT raids on Suresh close aides and Congress protests
Lok Sabha Election 20246 mins ago

Lok Sabha Election 2024: ಡಿ.ಕೆ. ಸುರೇಶ್‌ ಆಪ್ತರ ಮನೆ ಮೇಲೆ ಐಟಿ ರೇಡ್;‌ ಕಾಂಗ್ರೆಸ್‌ ಪ್ರತಿಭಟನೆ, ವಾಗ್ವಾದ

RCB vs SRH
ಕ್ರೀಡೆ9 mins ago

RCB vs SRH: 300 ರನ್​ ಹೊಡೆಸಿಕೊಳ್ಳದಿರಲಿ ಆರ್​ಸಿಬಿ; ನಾಳೆ ಸನ್​ರೈಸರ್ಸ್ ವಿರುದ್ಧ ಕಣಕ್ಕೆ

Mens Neck Chains Fashion
ಫ್ಯಾಷನ್10 mins ago

Mens Neck Chains Fashion: ಹುಡುಗರ ಕ್ರೇಜಿ ಫ್ಯಾಷನ್‌ಗೆ ಬಂತು ಫಂಕಿ ನೆಕ್‌ ಚೈನ್ಸ್‌

Summer Tour
ಪ್ರವಾಸ14 mins ago

Summer Tour: ಬೇಸಿಗೆ ಪ್ರವಾಸಕ್ಕೆ ಸೂಕ್ತ ಈ 5 ಅದ್ಭುತ ಗಿರಿಧಾಮಗಳು!

Congress leader Rahul Gandhi election campaign on April 26 in Ballari
ಬಳ್ಳಾರಿ18 mins ago

Lok Sabha Election 2024: ಏ.26ರಂದು ರಾಹುಲ್‌ ಗಾಂಧಿ ಬಳ್ಳಾರಿಗೆ; ಕಾಂಗ್ರೆಸ್‌ ಅಭ್ಯರ್ಥಿ ತುಕಾರಾಂ ಪರ ಪ್ರಚಾರ

on April 26 Namma Metro Service extended till late night
Lok Sabha Election 202431 mins ago

Namma Metro: ಏಪ್ರಿಲ್‌ 26ರಂದು ಮೆಟ್ರೋ ಪ್ರಯಾಣಿಕರಿಗೆ ಗುಡ್‌ ನ್ಯೂಸ್‌; ತಡರಾತ್ರಿವರೆಗೂ ಸೇವೆ ವಿಸ್ತರಣೆ

Davanagere Lok Sabha constituency BJP candidate Gayatri Siddeshwar election campaign
ದಾವಣಗೆರೆ33 mins ago

Lok Sabha Election 2024: ಹರಿಹರದ ವಿವಿಧೆಡೆ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಮತಯಾಚನೆ

Lok sabha election 2024
ಕರ್ನಾಟಕ37 mins ago

Lok Sabha Election 2024: ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿದ ರಾಜ್ಯ ಒಕ್ಕಲಿಗ ಸಂಘ; ಡಿಕೆಶಿಯನ್ನು ಸಿಎಂ ಮಾಡುವುದಾಗಿ ಶಪಥ

Top 10 Puddings
ಆಹಾರ/ಅಡುಗೆ40 mins ago

Top 10 Puddings: ಭಾರತದ ಫಿರ್ನಿ, ಖೀರು, ಸಿಹಿ ಪೊಂಗಲ್‌ಗೆ ವಿಶ್ವದ ಟಾಪ್‌ 10 ತಿಂಡಿ ಪಟ್ಟಿಯಲ್ಲಿ ಸ್ಥಾನ!

Nitin Gadkari
ದೇಶ48 mins ago

Nitin Gadkari: ಚುನಾವಣೆ ಪ್ರಚಾರದ ವೇಳೆ ದಿಢೀರ್ ಕುಸಿದು ಬಿದ್ದ ನಿತಿನ್‌ ಗಡ್ಕರಿ; ತುರ್ತು ಚಿಕಿತ್ಸೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ13 hours ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು2 days ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ2 days ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು2 days ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET Exam 2024
ಬೆಂಗಳೂರು2 days ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

Dina Bhavishya
ಭವಿಷ್ಯ3 days ago

Dina Bhavishya : ಸಹೋದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ಮಾಡುವ ಸಾಧ್ಯತೆ; ಈ ರಾಶಿಯವರು ಎಚ್ಚರ

Dina Bhavishya
ಭವಿಷ್ಯ4 days ago

Dina Bhavishya : ಅಮೂಲ್ಯ ವಸ್ತುಗಳು ಕೈ ತಪ್ಪಬಹುದು; ಈ ರಾಶಿಯವರು ಇಂದು ಎಚ್ಚರವಹಿಸಿ

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ4 days ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20244 days ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

ಟ್ರೆಂಡಿಂಗ್‌