ಗಾಂಧಿನಗರ: ಗುಜರಾತ್ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಸಾಲು ಸಾಲು ರ‍್ಯಾಲಿಗಳನ್ನು ನಡೆಸುತ್ತಿದ್ದು, ಭಾನುವಾರ (ನವೆಂಬರ್ 20) ಚುನಾವಣೆ ರ‍್ಯಾಲಿ ಆರಂಭಕ್ಕೂ ಮುನ್ನ ಸೋಮನಾಥ ದೇವಾಲಯಕ್ಕೆ (Somnath Temple) ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಶಿವನಿಗೆ ವಿಶೇಷ ಪೂಜೆ ಹಾಗೂ ಅಭಿಷೇಕ ನೆರವೇರಿಸಿದರು.
ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ
ಸೋಮನಾಥ ದೇವಾಲಯಕ್ಕೆ ಭೇಟಿ ನೀಡಿದ ಬಳಿಕ ರಾಜಕೋಟ್ ಜಿಲ್ಲೆಯಲ್ಲಿ ಆಯೋಜಿಸಿದ್ದ ಬೃಹತ್ ರ‍್ಯಾಲಿಯಲ್ಲಿ ಮಾತನಾಡಿದ ಮೋದಿ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು. “ಯಾವ ಮಹಿಳೆಯೊಬ್ಬರು ಗುಜರಾತ್ ಕುರಿತು ಕೆಟ್ಟದಾಗಿ ಮಾತನಾಡಿದ್ದರೋ, ನರ್ಮದಾ ಅಣೆಕಟ್ಟು ಯೋಜನೆಯನ್ನು ಮೂರು ದಶಕಗಳವರೆಗೆ ವಿರೋಧಿಸಿದ್ದರೋ, ಆ ಮಹಿಳೆ (ಮೇಧಾ ಪಾಟ್ಕರ್) ಜತೆ ಕಾಂಗ್ರೆಸ್ ನಾಯಕರೊಬ್ಬರು (ರಾಹುಲ್ ಗಾಂಧಿ) ಇತ್ತೀಚೆಗೆ ಪಾದಯಾತ್ರೆ (ಭಾರತ್ ಜೋಡೋ ಯಾತ್ರೆ) ಕೈಗೊಂಡಿದ್ದರು” ಎಂದು ಟೀಕಿಸಿದರು.
“ಗುಜರಾತ್‌ನಲ್ಲಿ ಕಾಂಗ್ರೆಸ್ ನಾಯಕರು ಮತ ಹಾಕಿ ಎಂಬುದಾಗಿ ಮನವಿ ಮಾಡಲು ಬಂದಾಗ ನರ್ಮದಾ ಡ್ಯಾಮ್ ಯೋಜನೆ ವಿರೋಧಿಸಿದವರ ಜತೆ ನೀವು ಏಕೆ ಪಾದಯಾತ್ರೆ ಕೈಗೊಂಡಿರಿ ಎಂದು ಜನ ಪ್ರಶ್ನಿಸಬೇಕು” ಎಂದರು. ಗುಜರಾತ್‌ನಲ್ಲಿ ಡಿಸೆಂಬರ್ 1 ಹಾಗೂ ಡಿಸೆಂಬರ್ 5ರಂದು ಎರಡು ಹಂತದಲ್ಲಿ ಮತದಾನ ನಡೆಯಲಿದೆ.
ಇದನ್ನೂ ಓದಿ | ಪ್ರಧಾನಿ ಮೋದಿ ಆರ್ಎಸ್ಎಸ್ ಸ್ವಯಂಸೇವಕ ಹೌದು, ಆದರೆ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಾರೆ ಎಂದ ಮೋಹನ್ ಭಾಗವತ್