ಭುವನೇಶ್ವರ: ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಸದ್ಯ ವಿವಿಧ ರಾಜ್ಯಗಳ ಪ್ರವಾಸದಲ್ಲಿದ್ದಾರೆ. ಸೋಮವಾರ ಮತ್ತು ಮಂಗಳವಾರ ಅವರು ತೆಲಂಗಾಣ ಮತ್ತು ಒಡಿಶಾದಲ್ಲಿ 26,000 ಕೋಟಿ ರೂ. ಮೌಲ್ಯದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಲಿದ್ದಾರೆ. ಇದರಲ್ಲಿ ತೆಲಂಗಾಣದಲ್ಲಿ 6,800 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಮತ್ತು ಒಡಿಶಾದಲ್ಲಿ 19,600 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಸೇರಿದೆ. ಈ ಯೋಜನೆಗಳು ರಸ್ತೆ, ರೈಲು, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲದಂತಹ ಹಲವಾರು ಪ್ರಮುಖ ಕ್ಷೇತ್ರಗಳಿಗೆ ಸಂಬಂಧಿಸಿವೆ ಎನ್ನುವುದು ವಿಶೇಷ.
#WATCH | Telangana: Prime Minister Narendra Modi visits and offers prayers at Ujjaini Mahankali temple in Secunderabad. pic.twitter.com/zijxd4LYAX
— ANI (@ANI) March 5, 2024
ಉಜ್ಜಯಿನಿ ದೇಗುಲಕ್ಕೆ ಭೇಟಿ
ಸೋಮವಾರ ಬೆಳಗ್ಗೆ ತೆಲಂಗಾಣದ ಉಜ್ಜಯಿನಿ ಮಹಾಕಾಳಿ ದೇವಸ್ಥಾನಕ್ಕೆ ಭೇಟಿ ನೀಡಿದ ಮೋದಿ ಅವರು ಅಲ್ಲಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಇತರ ಯೋಜನೆಗಳ ಜತೆಗೆ ಪೆದ್ದಪಲ್ಲಿಯಲ್ಲಿನ ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಷನ್ ತೆಲಂಗಾಣ ಸೂಪರ್ ಥರ್ಮಲ್ ಪವರ್ ಪ್ರಾಜೆಕ್ಟ್ನ 800 ಎಂಡಬ್ಲ್ಯು ಅನ್ನು ಲೋಕಾರ್ಪಣೆಗೊಳಿಸಿದರು. ಈ ಹಿಂದೆ ಈ ಯೋಜನೆಗೆ ಮೋದಿ ಅವರೇ ಶಂಕು ಸ್ಥಾಪನೆ ನೆರವೇರಿಸಿದ್ದರು.
#WATCH | Telangana: Prime Minister Narendra Modi to shortly address a public gathering in Sangareddy. pic.twitter.com/GCPdiNDxWg
— ANI (@ANI) March 5, 2024
ಇಂದಿನ ಕಾರ್ಯಕ್ರಮ
ಮೋದಿ ಅವರು ಇಂದು ತೆಲಂಗಾಣ ಮತ್ತು ಒಡಿಶಾದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಹಲವು ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಅದರ ವಿವರ ಇಲ್ಲಿದೆ.
ತೆಲಂಗಾಣ
- ಬೇಗಂಪೇಟೆ ವಿಮಾನ ನಿಲ್ದಾಣದಲ್ಲಿ ಸ್ಥಾಪಿಸಲಾಗಿರುವ ಹೈದರಾಬಾದ್ನ ನಾಗರಿಕ ವಿಮಾನಯಾನ ಸಂಶೋಧನಾ ಸಂಸ್ಥೆ (CARO) ಕೇಂದ್ರವನ್ನು ಮೋದಿ ಉದ್ಘಾಟಿಸಲಿದ್ದಾರೆ. 350 ಕೋಟಿ ರೂ. ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗಿದೆ.
- ಪ್ರಧಾನಿ ಮೂರು ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ರಾಷ್ಟ್ರೀಯ ಹೆದ್ದಾರಿ 65ರ 29 ಕಿ.ಮೀ ಉದ್ದದ ಪುಣೆ-ಹೈದರಾಬಾದ್ ವಿಭಾಗದ ಆರು ಪಥದ ರಸ್ತೆಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು.
- ಘಾಟ್ಕೇಸರ್-ಲಿಂಗಂಪಲ್ಲಿಯಿಂದ ಮೌಲಾ ಅಲಿ-ಸನತನಗರ ಮಾರ್ಗವಾಗಿ ಸಾಗುವ ಬಹು ಮಾದರಿ ಸಾರಿಗೆ ಸೇವೆ(ಗೆMMTS) ಪ್ರಧಾನಮಂತ್ರಿ ಹಸಿರು ನಿಶಾನೆ ತೋರಲಿದ್ದಾರೆ.
- 4.5 ಎಂಎಂಟಿಪಿಎ ಸಾಮರ್ಥ್ಯದ 1,212 ಕಿ.ಮೀ. ಉದ್ದದ ಪಾರಾದೀಪ್-ಹೈದರಾಬಾದ್ ಇಂಡಿಯನ್ ಆಯಿಲ್ ಉತ್ಪನ್ನ ಸಾಗಾಟದ ಪೈಪ್ಲೈನ್ ಅನ್ನು ಮೋದಿ ಉದ್ಘಾಟಿಸಲಿದ್ದಾರೆ. ಈ ಪೈಪ್ಲೈನ್ ಒಡಿಶಾ (329 ಕಿ.ಮೀ.), ಆಂಧ್ರಪ್ರದೇಶ (723 ಕಿ.ಮೀ.) ಮತ್ತು ತೆಲಂಗಾಣ (160 ಕಿ.ಮೀ.) ಮೂಲಕ ಹಾದುಹೋಗುತ್ತದೆ.
ಒಡಿಶಾ
- ಪಾರಾದೀಪ್ ಸಂಸ್ಕರಣಾಗಾರದಲ್ಲಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ನ ಮೊನೊ ಎಥಿಲೀನ್ ಗ್ಲೈಕಾಲ್ ಯೋಜನೆಯನ್ನು ಮೋದಿ ಉದ್ಘಾಟಿಸಲಿದ್ದಾರೆ. ಜತೆಗೆ ಒಡಿಶಾದ ಪಾರಾದೀಪ್ನಿಂದ ಪಶ್ಚಿಮ ಬಂಗಾಳದ ಹಲ್ದಿಯಾವರೆಗಿನ ಪೈಪ್ಲೈನ್ ಅನ್ನು ರಾಷ್ಟ್ರಕ್ಕೆ ಸಮರ್ಪಿಸಲಾಗುವುದು.
- ರಾಷ್ಟ್ರೀಯ ಹೆದ್ದಾರಿ 49ರ ಸಿಂಘಾರದಿಂದ ಬಿಂಜಬಹಲ್ ವಿಭಾಗ, ರಾಷ್ಟ್ರೀಯ ಹೆದ್ದಾರಿ 49ರ ಬಿಂಜಬಹಾರ್ನಿಂದ ತಿಲೇಬಾನಿ ವಿಭಾಗ, ರಾಷ್ಟ್ರೀಯ ಹೆದ್ದಾರಿ 18ರ ಬಾಲಸೋರ್-ಜಾರ್ಪೋಖಾರಿಯಾ ವಿಭಾಗ ಮತ್ತು ರಾಷ್ಟ್ರೀಯ ಹೆದ್ದಾರಿ 16ರ ತಂಗಿ-ಭುವನೇಶ್ವರ ವಿಭಾಗವನ್ನು ಚತುಷ್ಪಥಗೊಳಿಸುವ ಕಾಮಗಾರಿಯನ್ನೂ ಅವರು ಉದ್ಘಾಟಿಸಲಿದ್ದಾರೆ. ಮಾತ್ರವಲ್ಲ ಚಂಡಿಖೋಲ್-ಪಾರಾದೀಪ್ ರಸ್ತೆಯ ಎಂಟು ಪಥದ ರಸ್ತೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
- 162 ಕಿ.ಮೀ. ಉದ್ದದ ಬನ್ಸಪಾನಿ-ದೈತಾರಿ-ತೋಮ್ಕಾ-ಜಖಾಪುರ ರೈಲು ಮಾರ್ಗವನ್ನು ಅವರು ಲೋಕಾರ್ಪಣೆಗೊಳಿಸಲಿದ್ದಾರೆ. ಪ್ರಸ್ತುತ ಸಾಮರ್ಥ್ಯವನ್ನು ಹೆಚ್ಚಿಸುವುದರ ಹೊರತಾಗಿ, ಇದು ಕಿಯೋಂಜಾರ್ನಿಂದ ಬಂದರು ಮತ್ತು ಉಕ್ಕಿನ ಸ್ಥಾವರಗಳಿಗೆ ಕಬ್ಬಿಣ ಮತ್ತು ಮ್ಯಾಂಗನೀಸ್ ಅದಿರನ್ನು ಸಮರ್ಥವಾಗಿ ಸಾಗಿಸಲು ಅನುವು ಮಾಡಿಕೊಡುತ್ತದೆ.
- ಒಡಿಶಾ ಸ್ಯಾಂಡ್ಸ್ ಕಾಂಪ್ಲೆಕ್ಸ್ನಲ್ಲಿರುವ ಇಂಡಿಯನ್ ರೇರ್ ಅರ್ಥ್ಸ್ ಲಿಮಿಟೆಡ್ (Indian Rare Earths Ltd)ನ 5 ಎಂಎಲ್ಡಿ ಸಾಮರ್ಥ್ಯದ ಸಮುದ್ರದ ಉಪ್ಪುನೀರು ಶುದ್ಧೀಕರಣ ಘಟಕವನ್ನೂ ಪ್ರಧಾನಿ ಉದ್ಘಾಟಿಸಲಿದ್ದಾರೆ.
ಇದನ್ನೂ ಓದಿ: Narendra Modi : ಭಾರತ್ ಶಕ್ತಿಯಲ್ಲಿ ಭಾಗಿಯಾಗಲಿದ್ದಾರೆ ಪ್ರಧಾನಿ ಮೋದಿ; ಏನಿದು ಮಿಲಿಟರಿ ಶಕ್ತಿ ಪ್ರದರ್ಶನ