Site icon Vistara News

Modi Mega Roadshow | ಗುಜರಾತ್‌ ರೋಡ್‌ ಶೋ ವೇಳೆ ಕಾರು ನಿಲ್ಲಿಸಿ ಆಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಟ್ಟ ಮೋದಿ

Modi Roadshow In Gujarat

ಗಾಂಧಿನಗರ: ಗುಜರಾತ್‌ನಲ್ಲಿ ಬಿಜೆಪಿಯು ಸತತ ಏಳನೇ ಬಾರಿಗೆ ಗದ್ದುಗೆ ಹಿಡಿಯುವ ದಿಸೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮೆಗಾ ರೋಡ್‌ ಶೋ (Modi Mega Roadshow) ನಡೆಸಿದ್ದಾರೆ. ೧೬ ವಿಧಾನಸಭೆ ಕ್ಷೇತ್ರಗಳ ಮೂಲಕ, ೫೦ ಕಿ.ಮೀ ದೂರ ರೋಡ್‌ ಶೋ ಸಾಗಿದ್ದು, ಜನರಿಂದ ಅಭೂತಪೂರ್ವ ಸ್ವಾಗತ ದೊರೆತಿದೆ. ಅಲ್ಲದೆ, ರೋಡ್‌ ಶೋ ವೇಳೆ ನರೇಂದ್ರ ಮೋದಿ ಅವರು ಆಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಟ್ಟಿದ್ದಾರೆ.

ಗುಜರಾತ್‌ನ ಅಹಮದಾಬಾದ್‌ನಲ್ಲಿ ಮೋದಿ ಭರ್ಜರಿ ರೋಡ್‌ಶೋ ನಡೆಸುತ್ತಿದ್ದರು. ರಸ್ತೆ ಪಕ್ಕ ನಿಂತ ಸಾವಿರಾರು ಜನರು ಮೋದಿ ಅವರ ಮೇಲೆ ಹೂವುಗಳನ್ನು ಸುರಿದು ಸ್ವಾಗತಿಸುತ್ತಿದ್ದರು. ರೋಡ್‌ ಶೋ ಸಾಗುವ ಮಾರ್ಗದಲ್ಲಿ ಇದೇ ವೇಳೆ ಆಂಬ್ಯುಲೆನ್ಸ್‌ ಒಂದು ತೆರಳಿದೆ. ಇದನ್ನು ತಿಳಿದ ಮೋದಿ ಅವರು ತಮ್ಮ ಬೆಂಗಾವಲು ಪಡೆಯನ್ನು ನಿಲ್ಲಿಸಿ, ಆಂಬ್ಯುಲೆನ್ಸ್‌ ತೆರಳಲು ಅನುವು ಮಾಡಿಕೊಟ್ಟಿದ್ದಾರೆ. ಇದರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಯ ಮಾತುಗಳು ವ್ಯಕ್ತವಾಗಿವೆ. ಇತ್ತೀಚೆಗೆ ಹಿಮಾಚಲ ಪ್ರದೇಶದಲ್ಲಿ ರೋಡ್‌ ಶೋ ನಡೆಸುವ ವೇಳೆಯೂ ಮೋದಿ ಅವರು ಆಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಟ್ಟಿದ್ದರು.

ಇದನ್ನೂ ಓದಿ | Modi Mega Roadshow | 3 ಗಂಟೆ, 50 ಕಿ.ಮೀ, 16 ಕ್ಷೇತ್ರಗಳಲ್ಲಿ ಮೋದಿ ರೋಡ್‌ ಶೋ, ಗುಜರಾತ್‌ನಲ್ಲಿ ಪ್ರಧಾನಿ ಇತಿಹಾಸ

Exit mobile version