ನವದೆಹಲಿ: ದೇಶದ ಪ್ರಧಾನಿಯಾದರೂ ನರೇಂದ್ರ ಮೋದಿ ಅವರು ಆಗಾಗ ಮೆಟ್ರೋ ರೈಲುಗಳಲ್ಲಿ ಸಂಚರಿಸುತ್ತಾರೆ. ಸಾಮಾನ್ಯರಂತೆ ಕ್ಯೂನಲ್ಲಿ ನಿಂತು ಟಿಕೆಟ್ ಖರೀದಿಸಿ, ಮೆಟ್ರೋದಲ್ಲಿ ಸಂಚರಿಸುವ ಜತೆಗೆ ಜನರೊಂದಿಗೆ ಆಪ್ತವಾಗಿ ಬೆರೆಯುತ್ತಾರೆ. ಅವರ ಜತೆ ಹಲವು ವಿಷಯಗಳನ್ನು ಚರ್ಚಿಸುತ್ತಾರೆ. ಶುಕ್ರವಾರ ಬೆಳಗ್ಗೆ ಬೆಳಗ್ಗೆಯೇ ನರೇಂದ್ರ ಮೋದಿ ಅವರು (Narendra Modi) ದೆಹಲಿ ಮೆಟ್ರೋದಲ್ಲಿ ಸಂಚರಿಸಿದ್ದಾರೆ. ಅಲ್ಲದೆ, ಸಹ ಪ್ರಯಾಣಿಕರ ಜತೆ ಮುಕ್ತವಾಗಿ ಮಾತುಕತೆ ನಡೆಸಿದ್ದಾರೆ.
ದೆಹಲಿ ವಿಶ್ವವಿದ್ಯಾಲಯದ ಶತಮಾನೋತ್ಸವ ಸಮಾರಂಭಗಳ ಸಮಾರೋಪದಲ್ಲಿ ಭಾಗವಹಿಸಲು ನರೇಂದ್ರ ಮೋದಿ ಅವರು ಮೆಟ್ರೋದಲ್ಲಿ ಸಂಚರಿಸಿದ್ದಾರೆ. ಸಾಮಾನ್ಯರಂತೆ ಟಿಕೆಟ್ ಖರೀದಿಸಿ ಮೆಟ್ರೋದಲ್ಲಿ ಚಲಿಸಿದ ಮೋದಿ, ಪ್ರಯಾಣದ ವೇಳೆ ಯುವಕರು, ವಿದ್ಯಾರ್ಥಿಗಳ ಜತೆ ಹೆಚ್ಚಿನ ಸಮಯ ಕಳೆದರು. ಪ್ರಯಾಣಿಕರ ಜತೆ ಮೋದಿ ಚರ್ಚಿಸುವ ವಿಡಿಯೊ ಹಾಗೂ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಮೆಟ್ರೋದಲ್ಲಿ ಸಂಚರಿಸಿದ ಮೋದಿ ಅವರೀಗ ದೆಹಲಿ ವಿಶ್ವವಿದ್ಯಾಲಯ ತಲುಪಿದ್ದಾರೆ. ಅವರು ದೆಹಲಿ ವಿವಿಯ ಶತಮಾನೋತ್ಸವ ಸಂಭ್ರಮದಲ್ಲಿ ಭಾಗಿಯಾಗಲಿದ್ದಾರೆ. ಮೋದಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ದೆಹಯಲ್ಲಿ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ.
ಆದರೆ, ಯೂನಿವರ್ಸಿಟಿಗೆ ಪ್ರಧಾನಿ ಮೋದಿ ಬರುತ್ತಿರುವ ಹಿನ್ನೆಲೆಯಲ್ಲಿ ಈ ಯೂನಿವರ್ಸಿಟಿ ವಿದ್ಯಾರ್ಥಿಗಳು ಮತ್ತು ದೆಹಲಿ ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ಎಲ್ಲ ಕಾಲೇಜುಗಳ ವಿದ್ಯಾರ್ಥಿಗಳಿಗೆ ಕೆಲವು ಮಾರ್ಗಸೂಚಿ ಹೊರಡಿಸಿದ್ದು, ಕಟ್ಟುನಿಟ್ಟಾಗಿ ಪಾಲಿಸುವಂತೆ ಯೂನಿವರ್ಸಿಟಿ ಸೂಚನೆ ನೀಡಿದೆ ಎಂದು ಹೇಳಲಾಗಿದೆ. ಆದರೆ ಈ ಗೈಡ್ ಲೈನ್ಸ್ ವಿಚಾರದಲ್ಲಿ ಗೊಂದಲವಾಗಿದೆ.
On the way to the DU programme by the Delhi Metro. Happy to have youngsters as my co-passengers. pic.twitter.com/G9pwsC0BQK
— Narendra Modi (@narendramodi) June 30, 2023
ಇದನ್ನೂ ಓದಿ: Putin Praises Modi: ಭಾರತದ ಏಳಿಗೆಗೆ ʼಮೇಕ್ ಇನ್ ಇಂಡಿಯಾ’ ಕಾರಣ, ಮೋದಿಯನ್ನು ಹಾಡಿ ಹೊಗಳಿದ ಪುಟಿನ್
ಯೂನಿವರ್ಸಿಟಿ ಅಡಿಯಲ್ಲಿ ಬರುವ ಹಿಂದು ಕಾಲೇಜ್, ಡಾ.ಭೀಮ್ ರಾವ್ ಅಂಬೇಡ್ಕರ್ ಕಾಲೇಜ್, ಜಾಕಿರ್ ಹುಸೇನ್ ಕಾಲೇಜ್ ಗಳ ವಿದ್ಯಾರ್ಥಿಗಳು ಜೂನ್ 30 ರಂದು ಬೆಳಗ್ಗೆ 10-12ಗಂಟೆವರೆಗೆ ಕಡ್ಡಾಯವಾಗಿ ಕಾಲೇಜಲ್ಲಿ ಹಾಜರಿರಬೇಕು. ದೆಹಲಿ ಯೂನಿವರ್ಸಿಟಿಯಲ್ಲಿ ಪ್ರಧಾನಿ ಮೋದಿ ಭಾಗವಹಿಸುವ ಕಾರ್ಯಕ್ರಮವನ್ನು ನೇರ ಪ್ರಸಾರದಲ್ಲಿ ವೀಕ್ಷಿಸುವ ವ್ಯವಸ್ಥೆಯನ್ನು ಕಾಲೇಜಿನಲ್ಲಿ ಮಾಡಲಾಗಿದೆ. ಎಲ್ಲ ವಿದ್ಯಾರ್ಥಿಗಳು ಕಡ್ಡಾಯವಾಗಿ ಈ ಸಮಾರಂಭ ವೀಕ್ಷಿಸಬೇಕು. ಯಾರೂ ಕಪ್ಪು ಬಣ್ಣದ ಬಟ್ಟೆ ಧರಿಸಿ ಬರುವಂತಿಲ್ಲ. ಐಡಿ ಕಾರ್ಡ್ ತರಲೇಬೇಕು. ಅಷ್ಟೇ ಅ ಲ್ಲ ಈ ಲೈವ್ ಸ್ಟ್ರೀಮ್ ನಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಐದು ಹಾಜರಾತಿ ಕೊಡಲಾಗುವುದು ಎಂಬಿತ್ಯಾದಿ ಸೂಚನೆಗಳನ್ನು ಈ ಗೈಡ್ ಲೈನ್ ಒಳಗೊಂಡಿದೆ.