Site icon Vistara News

Independence Day 2023: ಪ್ರತಿ ಮನೆಯಲ್ಲೂ ತಿರಂಗಾ ಹಾರಿಸಲು ಮೋದಿ ಕರೆ; ನೀವೂ ಫೋಟೊ ಕಳುಹಿಸಿ

Narendra Modi On Har Ghar Tiranga

Narendra Modi urges people to take part in Har Ghar Tiranga campaign, You Can Send Photos

ನವದೆಹಲಿ: ಸ್ವಾತಂತ್ರ್ಯ ದಿನಾಚರಣೆಗೆ ದೇಶಕ್ಕೆ ದೇಶವೇ ಸಿದ್ಧವಾಗುತ್ತಿದೆ. ಅದರಲ್ಲೂ, ದೆಹಲಿಯಲ್ಲಿ ಅದ್ಧೂರಿ ಕಾರ್ಯಕ್ರಮಕ್ಕೆ ಇನ್ನಿಲ್ಲದ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಹಾಗಾಗಿ, ದೇಶದ ಸ್ವಾತಂತ್ರ್ಯ ದಿನಾಚರಣೆ (Independence Day 2023) ಹಿನ್ನೆಲೆಯಲ್ಲಿ ಆಗಸ್ಟ್‌ 13ರಿಂದ 15ರವರೆಗೆ ಮೂರು ದಿನ ನಡೆಯುವ ಹರ್‌ ಘರ್‌ ತಿರಂಗಾ (ಪ್ರತಿ ಮನೆಯಲ್ಲೂ ತಿರಂಗಾ) (Har Ghar Tiranga) ಅಭಿಮಯಾನದಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಕರೆ ನೀಡಿದ್ದಾರೆ.

ಅಭಿಯಾನದ ಕುರಿತು ಟ್ವೀಟ್‌ (ಈಗ X) ಮಾಡಿದ ಅವರು, “ರಾಷ್ಟ್ರಧ್ವಜವು ದೇಶದ ಸ್ವಾತಂತ್ರ್ಯ ಹಾಗೂ ರಾಷ್ಟ್ರೀಯ ಏಕತೆಯ ಸಂಕೇತವಾಗಿದೆ. ದೇಶದ ಪ್ರತಿಯೊಬ್ಬ ನಾಗರಿಕರೂ ತಿರಂಗಾ ಜತೆ ಭಾವನಾತ್ಮಕ ಸಂಬಂದ ಹೊಂದಿದ್ದು, ಇದು ಹೆಚ್ಚು ಪರಿಶ್ರಮ ವಹಿಸಿ ದೇಶವನ್ನು ಏಳಿಗೆಯತ್ತ ಕೊಂಡೊಯ್ಯಲು ಸ್ಫೂರ್ತಿ ನೀಡುತ್ತದೆ. ಹಾಗಾಗಿ, ಆಗಸ್ಟ್‌ 13ರಿಂದ 15ರವರೆಗೆ ಕೈಗೊಳ್ಳುವ ಹರ್‌ ಘರ್‌ ತಿರಂಗಾ ಅಭಿಯಾನದಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು. ಹಾಗೆಯೇ, ತಿರಂಗಾ ಜತೆಗಿನ ನಿಮ್ಮ ಫೋಟೊ ಅಪ್‌ಲೋಡ್‌ ಮಾಡಿ” ಎಂದು ಕರೆ ನೀಡಿದರು.

ನರೇಂದ್ರ ಮೋದಿ ಟ್ವೀಟ್‌ (X)

ನೀವೂ ತಿರಂಗಾ ಜತೆಗಿನ ಫೋಟೊ ಅಪ್‌ಲೋಡ್‌ ಮಾಡಿ

ಮನೆಯ ಮೇಲೆ ಅಥವಾ ಮನೆಯ ಅಂಗಳದಲ್ಲಿ ತಿರಂಗಾ ಹಾರಿಸುವುದು, ನೀವು ತಿರಂಗಾ ಜತೆಗೆ ನಿಂತಿರುವ ಫೋಟೊಗಳನ್ನು ಹರ್‌ ಘರ್‌ ತಿರಂಗಾ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡುವ ಮೂಲಕ ದೇಶದ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ಪಾಲ್ಗೊಳ್ಳಬಹುದಾಗಿದೆ. ದೇಶದ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಕಳೆದ ವರ್ಷವೂ ಹರ್‌ ಘರ್‌ ತಿರಂಗಾ ಅಭಿಯಾನ ಕೈಗೊಳ್ಳಲಾಗಿತ್ತು. ಈ ಬಾರಿಯೂ ಅಭಿಯಾನ ಕೈಗೊಳ್ಳಲಾಗುತ್ತಿದ್ದು, ನೀವು ಕೂಡ https://harghartiranga.com ಗೆ ಭೇಟಿ ನೀಡಿ ಸುಲಭವಾಗಿ ಫೋಟೊ ಅಪ್‌ಲೋಡ್‌ ಮಾಡಬಹುದಾಗಿದೆ.

ಇದನ್ನೂ ಓದಿ: Independence Day 2023: ಮುಂಬಯಿ ಕರ್ನಾಟಕದಾದ್ಯಂತ ವ್ಯಾಪಿಸಿತ್ತು ಸ್ವಾತಂತ್ರ್ಯ ಹೋರಾಟದ ಜ್ವಾಲೆ

ದೆಹಲಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಗೆ ತಯಾರಿ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್‌ 15ರಂದು ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ದೇಶಾದ್ಯಂತ ಸುಮಾರು 1,800 ವಿಶೇಷ ಅತಿಥಿಗಳು ಸ್ವಾತಂತ್ರ್ಯ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ದೆಹಲಿಯಾದ್ಯಂತ ಬಿಗಿ ಬಂದೋಬಸ್ತ್‌ ಕೈಗೊಳ್ಳಲಾಗುತ್ತಿದೆ.

Exit mobile version