ಮುಂಬೈ: ದೇಶದಲ್ಲಿ ಈಗಾಗಲೇ ಅಲ್ಪಸಂಖ್ಯಾತರ ಮೇಲೆ ಕುತಂತ್ರ ನಡೆಯುತ್ತಿದೆ ಎಂದು ಹಲವರು ಟೀಕಿಸುತ್ತಿದ್ದಾರೆ. ಇದರ ಬೆನ್ನಲ್ಲೇ, ದೇಶದಲ್ಲಿ ಹೇಗೆ ಕೋಮು ದ್ವೇಷ ಹರಡಿಸಲಾಗುತ್ತಿದೆ ಎಂಬುದರ ಕುರಿತು ಬಾಲಿವುಡ್ ನಟ ನಾಸೀರುದ್ದೀನ್ ಶಾ (Naseeruddin Shah) ಅವರು, ತಮಗೆ ಗೆಳೆಯರು ನೀಡಿದ ಸಲಹೆಯನ್ನು ಉಲ್ಲೇಖಿಸಿ ಮಾತನಾಡಿದ್ದಾರೆ.
“ದೇಶದಲ್ಲಿ ಕೋಮುದ್ವೇಷ ಹರಡಿಸಲಾಗುತ್ತಿದೆ. ಇತ್ತೀಚೆಗೆ ನನ್ನ ಗೆಳೆಯರು ಮಾತನಾಡುತ್ತ, ನಿಮ್ಮ ಸಮುದಾಯದವರಿಗೆ ಭಾರತ ಮುಸ್ಲಿಂ ಸುರಕ್ಷಿತ ರಾಷ್ಟ್ರವಲ್ಲ. ನೀವು ಇಲ್ಲಿರುವುದು ತರವಲ್ಲ ಎಂಬುದಾಗಿ ಹೇಳಿದರು. ಯಾರು ಧರ್ಮವನ್ನು ಹೆಚ್ಚು ನಂಬುತ್ತಾರೋ, ಅವರೇ ಈ ರೀತಿಯ ಮಾತುಗಳನ್ನು ಆಡುತ್ತಾರೆ. ಇದರಿಂದ ನನಗೆ ಬೇಸರವಾಯಿತು” ಎಂದು ತಾಜ್-ಡಿವೈಡೆಡ್ ಬೈ ಬ್ಲಡ್ ವೆಬ್ ಸಿರೀಸ್‌ನ ಪ್ರಮೋಷನ್‌ನಲ್ಲಿ ಹೇಳಿದರು.
ಇದನ್ನೂ ಓದಿ: Tukde Tukde Gang | ನಾಸಿರುದ್ದೀನ್, ಶಬಾನಾ ಟುಕ್ಡೆ ಗ್ಯಾಂಗ್ ಸದಸ್ಯರು ಎಂದು ಕರೆದಿದ್ದು ಯಾರು?
“ನಾನೊಬ್ಬ ಕಲಾವಿದೆ. ನನಗೆ ಯಾವುದೇ ಜಾತಿ-ಧರ್ಮ ಇಲ್ಲವೆಂದೇ ನಾನು ನಂಬಿದ್ದೇನೆ. ರಾಜಕೀಯ ಅನುಭವ, ಬಹುಸಂಖ್ಯಾತರಾಗಿರುವ ನನ್ನ ಗೆಳೆಯರು ಹೀಗೆ ಹೇಳಿದರೂ ಅವರು ನನಗೆ ಗೆಳೆಯರೇ. ನಾನು ಇದನ್ನು ವೈಯಕ್ತಿಕವಾಗಿ ತೆಗೆದುಕೊಳ್ಳುವುದಿಲ್ಲ. ನನಗೆ ಮಾನವತೆ, ಮನುಷ್ಯದಲ್ಲಿ ಮಾತ್ರ ನಂಬಿಕೆ” ಎಂದರು.