ನವದೆಹಲಿ: ದೇಶದ ಯುವಕ-ಯುವತಿಯರು ಸಾಮಾಜಿಕ ಮಾಧ್ಯಮಗಳ ಮೂಲಕ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತಂದಿದ್ದು, ಕೆಲವು ಪ್ರಮುಖ ಸಾಧಕರಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ದೆಹಲಿಯಲ್ಲಿ ನ್ಯಾಷನಲ್ ಕ್ರಿಯೇಟರ್ಸ್ ಅವಾರ್ಡ್ (National Creators Award 2024) ಪ್ರದಾನ ಮಾಡಿದ್ದಾರೆ. ಅದರಲ್ಲೂ, ಇನ್‌ಸ್ಟಾಗ್ರಾಂ ಸೇರಿ ಸಾಮಾಜಿಕ ಜಾಲತಾಣದಲ್ಲಿ ಕಾರ್ಪೊರೇಟ್ ಕಾಮಿಡಿ, ಹ್ಯೂಮರ್ ಮಾಡುತ್ತ ಮನಸೂರೆಗೊಳ್ಳುವ ʼಅಯ್ಯೋ ಶ್ರದ್ಧಾʼ (Aiyyo Shraddha) ಅವರಿಗೆ ಮೋದಿ ಅವರು ಕ್ರಿಯೇಟಿವ್ ಕ್ರಿಯೇಟರ್ (Creative Creator) ಪ್ರಶಸ್ತಿ ನೀಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಬೇರೆ ಬೇರೆ ಭಾಷೆಗಳಲ್ಲಿ ಹಾಸ್ಯದ ವಿಡಿಯೊಗಳ ಮೂಲಕ ಗಮನ ಸೆಳೆದಿರುವ ಅಯ್ಯೋ ಶ್ರದ್ಧಾ ಅವರು ವೇದಿಕೆ ಮೇಲೆ ಆಗಮಿಸುತ್ತಲೇ ಮೋದಿ ಅವರು, “ಅಯ್ಯೋ” ಎಂದು ಹೇಳಿ ತಮಾಷೆ ಮಾಡಿದರು. “ದೇಶದಲ್ಲಿ ಉದ್ಯೋಗ, ಸಮಾಜದ ಪರಿಸ್ಥಿತಿ ಸೇರಿ ಹಲವು ಕಾರಣಗಳಿಂದ ಜೀವನಶೈಲಿಯು ಗಂಭೀರವಾಗುತ್ತದೆ. ಆದರೂ, ನಾವು ಭಾರತೀಯರು ಎಂತಹ ಗಂಭೀರ ಪರಿಸ್ಥಿತಿಯ ಮಧ್ಯೆಯೂ ಹಾಸ್ಯವನ್ನು ಹುಡುಕುತ್ತೇವೆ” ಎಂದು ಅಯ್ಯೋ ಶ್ರದ್ಧಾ ಹೇಳಿದರು. ಮೋದಿ ಅವರು ಕೂಡ ಹಾಸ್ಯದ ಬಗ್ಗೆ ಬಣ್ಣಿಸಿದರು.
#WATCH | Delhi: At the first ever National Creators Award, Prime Minister Narendra Modi presents the Most Creative Creator- Female award to Shraddha at Bharat Mandapam. pic.twitter.com/EY6jyP8zdw
— ANI (@ANI) March 8, 2024
2023ರ ಫೆಬ್ರವರಿಯಲ್ಲಿ ಅಯ್ಯೋ ಶ್ರದ್ಧಾ ಅವರು ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದರು. ಏರೋ ಇಂಡಿಯಾದ 14ನೇ ಆವೃತ್ತಿಯನ್ನು ಉದ್ಘಾಟನೆ ಮಾಡಲು ಪ್ರಧಾನಿ ಮೋದಿ ಆಗಮಿಸಿದ್ದರು. ಇದೇ ವೇಳೆ ರಾಕಿಂಗ್ ಸ್ಟಾರ್ ಯಶ್, ನಿರ್ಮಾಪಕ ವಿಜಯ್ ಕಿರಗಂದೂರ್, ನಟ ರಿಷಭ್ ಶೆಟ್ಟಿ, ನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್ ಜತೆಗೆ ರಾಜಭವನದಲ್ಲಿ ಭೇಟಿ ಮಾಡುವ ಜತೆಗೆ ಭೋಜನ ಸ್ವೀಕರಿಸಿದ್ದರು. ಈ ಭೇಟಿಯನ್ನೂ ಮೋದಿ ಅವರು ಅಯ್ಯೋ ಶ್ರದ್ಧಾ ಅವರಿಗೆ ನೆನಪಿಸಿದರು.
#WATCH | Delhi: At the first ever National Creators Award, Prime Minister Narendra Modi presents the Most Creative Creator-Male award to RJ Raunac (Bauaa) at Bharat Mandapam. pic.twitter.com/Lae2L8ABNx
— ANI (@ANI) March 8, 2024
ಏನಿದು ನ್ಯಾಷನಲ್ ಕ್ರಿಯೇಟರ್ಸ್ ಅವಾರ್ಡ್?
ದೇಶದಲ್ಲಿ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳನ್ನು ಬಳಸುವುದು ಸೇರಿ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಗೆ ಕಾರಣವಾದ ಯುವಕರು, ಯುವತಿಯರು ಸೇರಿ ಹಲವರಿಗೆ ಪ್ರಶಸ್ತಿ ನೀಡುವುದೇ ನ್ಯಾಷನಲ್ ಕ್ರಿಯೇಟರ್ಸ್ ಅವಾರ್ಡ್ ಆಗಿದೆ. ಫಿಟ್‌ನೆಸ್, ದೇಶದ ಸಂಸ್ಕೃತಿ, ಇತಿಹಾಸ, ಪರಂಪರೆ ಪಸರಿಸುವುದು, ಪರಿಸರ ರಕ್ಷಣೆ, ಆರೋಗ್ಯಯುತ ಜೀವನ ಶೈಲಿ ಸೇರಿ ಹಲವು ರೀತಿಯಲ್ಲಿ ಸಮಾಜಮುಖಿಯಾಗಿ ಕಾರ್ಯನಿರ್ವಹಿಸಿದವರಿಗೆ ಪ್ರಶಸ್ತಿ ನೀಡಲಾಗಿದೆ.
ಇದನ್ನೂ ಓದಿ: Creators Award 2024: ಯುವ ಸಾಧಕರಿಗೆ ಕ್ರಿಯೇಟರ್ಸ್ ಪ್ರಶಸ್ತಿ ನೀಡಿದ ಮೋದಿ; ಇಲ್ಲಿದೆ ಪಟ್ಟಿ
ಪ್ರಶಸ್ತಿ ಪಡೆದ ಪ್ರಮುಖ ಸಾಧಕರು
ಬೆಸ್ಟ್ ಸ್ಟೋರಿ ಟೆಲ್ಲರ್- ಕೀರ್ತಿಕಾ ಗೋವಿಂದಸ್ವಾಮಿ
ದಿ ಡಿಸ್ರಪ್ಟರ್: ರಣವೀರ್ ಅಲಹಾಬಾದಿಯಾ
ಗ್ರೀನ್ ಚಾಂಪಿಯನ್-ಪಂಕ್ತಿ ಪಾಂಡೆ
ಬೆಸ್ಟ್ ಕ್ರಿಯೇಟರ್ ಫಾರ್ ಸೋಷಿಯಲ್ ಚೇಂಜ್- ಜಯಾ ಕಿಶೋರಿ
ಮೋಸ್ಟ್ ಇಂಪ್ಯಾಕ್ಟ್‌ಫುಲ್ ಅಗ್ರಿ ಕ್ರಿಯೇಟರ್- ಲಕ್ಷ್ಯ ದಬಾಸ್
ಕಲ್ಚುರಲ್ ಅಂಬಾಸಿಡರ್- ಮೈಥಿಲಿ ಠಾಕೂರ್
ಬೆಸ್ಟ್ ಇಂಟರ್‌ನ್ಯಾಷನಲ್ ಕ್ರಿಯೇಟರ್- ಕ್ರಿಪಾಲ್, ಕೆಸೆಂಟ್ರಾ, ಡ್ರ್ಯೂ ಹಿಕ್ಸ್
ಬೆಸ್ಟ್ ಟ್ರಾವೆಲ್ ಕ್ರಿಯೇಟರ್- ಕಾಮಿಯಾ ಜಾನಿ
ಬೆಸ್ಟ್ ಕ್ರಿಯೇಟರ್ ಇನ್ ಟೆಕ್ ಕೆಟಗರಿ- ಗೌರವ್ ಚೌಧರಿ
ಸ್ವಚ್ಛತಾ ಅಂಬಾಸಿಡರ್-ಮಲ್ಹಾರ್ ಕಲಾಂಬೆ
ಹೆರಿಟೇಜ್ ಫ್ಯಾಷನ್ ಐಕಾನ್- ಜಾಹ್ನವಿ ಸಿಂಗ್
ಕ್ರಿಯೇಟಿವ್ ಕ್ರಿಯೇಟರ್- ಶ್ರದ್ಧಾ
ಮೋಸ್ಟ್ ಕ್ರಿಯೇಟಿವ್ ಕ್ರಿಯೇಟರ್ (ಪುರುಷ)- ಆರ್‌ಜೆ ರೌನಕ್
ಬೆಸ್ಟ್ ಕ್ರಿಯೇಟರ್ ಇನ್ ಫುಡ್ ಕೆಟಗರಿ- ಕವಿತಾ ಸಿಂಗ್
ಬೆಸ್ಟ್ ಹೆಲ್ತ್ & ಫಿಟ್‌ನೆಸ್ ಕ್ರಿಯೇಟರ್- ಅಂಕಿತ್ ಬೈಯಾನ್‌ಪುರಿಯಾ
ಬೆಸ್ಟ್ ಕ್ರಿಯೇಟರ್ ಇನ್ ಗೇಮಿಂಗ್ ಕೆಟಗರಿ- ನಿಶ್ಚಯ್
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ