Site icon Vistara News

Oscars 2023 Nominations: ಆರ್‌ಆರ್‌ಆರ್‌ ಚಿತ್ರದ ನಾಟು ನಾಟು ಹಾಡು ಆಸ್ಕರ್‌ಗೆ ನಾಮನಿರ್ದೇಶನ, ಮಹತ್ವದ ಮನ್ನಣೆ

RRR Movie

ಲಾಸ್‌ ಏಂಜಲೀಸ್‌: ಇತ್ತೀಚೆಗಷ್ಟೇ ಜಾಗತಿಕ ಗೋಲ್ಡನ್‌ ಗ್ಲೋಬ್‌ ಅವಾರ್ಡ್‌ ಪಡೆದಿದ್ದ ಆರ್‌ಆರ್‌ಆರ್‌ ಚಿತ್ರದ ನಾಟು ನಾಟು ಹಾಡು ಈಗ ಆಸ್ಕರ್‌ನ (Oscars 2023 Nominations) ಬೆಸ್ಟ್‌ ಒರಿಜಿನಲ್‌ ಸಾಂಗ್‌ ಕೆಟಗರಿಗೆ ನಾಮ ನಿರ್ದೇಶನಗೊಂಡಿದೆ. ಆ ಮೂಲಕ ಭಾರತದ ಚಿತ್ರವೊಂದು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಜೂನಿಯರ್‌ ಎನ್‌ಟಿಆರ್‌, ರಾಮ್‌ ಚರಣ್‌ ಅಭಿನಯದ ಆರ್‌ಆರ್‌ಆರ್‌ ಚಿತ್ರವನ್ನು ಎಸ್‌.ಎಸ್‌.ರಾಜಮೌಳಿ ನಿರ್ದೇಶನ ಮಾಡಿದ್ದಾರೆ.

ಪ್ರಶಸ್ತಿ ಘೋಷಣೆ ಯಾವಾಗ?
ನಾಮಿನೇಷನ್‌ಗೆ ಆಯ್ಕೆಯಾದ ಸಿನಿಮಾಗಳಲ್ಲಿ ಮತ್ತೆ ಪ್ರಶಸ್ತಿಗೆ ಸಿನಿಮಾಗಳನ್ನು ಆಯ್ಕೆ ಮಾಡಲಾಗುವುದು. ಈ ರೀತಿ ಆಯ್ಕೆಯಾದ ಸಿನಿಮಾಗಳ ಘೋಷಣೆಯನ್ನು ಮಾರ್ಚ್‌ ತಿಂಗಳ 12ನೇ ತಾರೀಖಿನಂದು ನಡೆಸಲಾಗುವುದು. ಆ ಕಾರ್ಯಕ್ರಮ ಯೂಟ್ಯೂಬ್‌, Hulu Live TV ಮತ್ತು ABC.com ನಲ್ಲಿ ಪ್ರಸಾರವಾಗಲಿದೆ.

80ನೇ ಗೋಲ್ಡನ್ ಗ್ಲೋಬ್ ಪ್ರಶಸ್ತಿಯ ಅಂತಿಮ ಸುತ್ತಿನಲ್ಲಿ‌ ಮಿಂಚಿದ RRR, ಎರಡು ವಿಭಾಗಗಳಿಗೆ ನಾಮನಿರ್ದೇಶನಗೊಂಡಿತ್ತು. ಅವು ʼಅತ್ಯುತ್ತಮ ಆಂಗ್ಲೇತರ ಚಿತ್ರʼ ಹಾಗೂ ʼಅತ್ಯುತ್ತಮ ಹಾಡುʼ ವಿಭಾಗಗಳಾಗಿವೆ.

ಅತ್ಯುತ್ತಮ ಹಾಡು ಪ್ರಶಸ್ತಿಯನ್ನು ಆರ್‌ಆರ್‌ಆರ್‌ನ ʼನಾಟು ನಾಟುʼ ಗೆದ್ದುಕೊಂಡಿತ್ತು. ಈಗ ರಾಜಮೌಳಿ ನಿರ್ದೇಶನದ ಸಿನಿಮಾವು ಪ್ರಶಸ್ತಿಯ ಅಂತಿಮ ಸುತ್ತಿಗೆ ನಾಮನಿರ್ದೇಶನಗೊಂಡಿದೆ.

ಇದನ್ನೂ ಓದಿ: Oscar award | ಆಸ್ಕರ್‌ ಪ್ರಶಸ್ತಿ ಕಣದಲ್ಲಿ ಕನ್ನಡದ ಕಾಂತಾರ, ವಿಕ್ರಾಂತ್‌ ರೋಣ | ಇನ್ಯಾವ ಸಿನಿಮಾಗಳಿವೆ?

Exit mobile version