ಚಂಡೀಗಢ: ಕಾಂಗ್ರೆಸ್ ನಾಯಕ, ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಅವರ ಪತ್ನಿ ನವಜೋತ್ ಕೌರ್ (Navjot Kaur) ಅವರಿಗೆ ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ನವಜೋತ್ ಕೌರ್ ಅವರೇ ಮಾಹಿತಿ ನೀಡಿದ್ದಾರೆ. ಹಾಗೆಯೇ, ಜೈಲಿನಲ್ಲಿರುವ ಪತಿಯನ್ನು ಟ್ವೀಟ್ ಮೂಲಕ ಭಾವನಾತ್ಮಕವಾಗಿ ಸ್ಮರಿಸಿದ್ದಾರೆ. ಅವರಿಗಿರುವ ಕ್ಯಾನ್ಸರ್ ಎರಡನೇ ಹಂತದಲ್ಲಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
“ನಾನು ನಿಮಗಾಗಿ ಇಲ್ಲಿ ಕಾಯುತ್ತಿದ್ದೇನೆ. ನನಗೆ ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ಅದು ಎರಡನೇ ಹಂತದಲ್ಲಿದೆ ಎಂಬುದಾಗಿ ವೈದ್ಯರು ತಿಳಿಸಿದ್ದಾರೆ. ನಾನು ನಿಮಗಾಗಿ ಕಾಯುತ್ತಲೇ ಇದ್ದೇನೆ. ಆದರೆ, ಸತ್ಯ ಯಾವಾಗಲೂ ತುಂಬ ಪ್ರಬಲವಾಗಿರುತ್ತದೆ. ಹಾಗಾಗಿ ನಿಮಗೆ ಅಷ್ಟೊಂದು ಅಗ್ನಿಪರೀಕ್ಷೆಗಳು ಎದುರಾಗಿವೆ. ಅಷ್ಟಕ್ಕೂ ಇದು ಕಲಿಯುಗ. ಆದರೆ, ನಾವು ಯಾರನ್ನೂ ದೂರುವಂತಿಲ್ಲ. ಏಕೆಂದರೆ, ಇದು ದೇವರ ಆಟ” ಎಂದು ನವಜೋತ್ ಕೌರ್ ಅವರು ಪತಿಯನ್ನು ನೆನೆದು ಭಾವುಕರಾಗಿದ್ದಾರೆ.
ನವಜೋತ್ ಕೌರ್ ಟ್ವೀಟ್
ಮಾಡದ ತಪ್ಪಿಗೆ ಶಿಕ್ಷೆ
ನವಜೋತ್ ಸಿಂಗ್ ಸಿಧು ಅವರು ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿದ್ದಾರೆ ಎಂದು ಕೌರ್ ಹೇಳಿದ್ದಾರೆ. “ಅವರು ಯಾವುದೇ ತಪ್ಪು ಮಾಡಿಲ್ಲ. ಆದರೂ ಶಿಕ್ಷೆ ಅನುಭವಿಸುತ್ತಿದ್ದಾರೆ. ಆದರೂ, ಅವರೆಲ್ಲರನ್ನೂ ಕ್ಷಮಿಸೋಣ. ನಾನಿಲ್ಲಿ ಅನುಕ್ಷಣವೂ ನಿಮಗಾಗ ಕಾಯುತ್ತಿರುವೆ. ನಿಮಗಿಂತ ಹೆಚ್ಚು ನೋವು ಅನುಭವಿಸುತ್ತಿದ್ದೇನೆ. ಆದರೂ, ನಿಮ್ಮ ನೋವೂ ನನಗೆ ಕೊಡಿ ಎಂದು ಬೇಡುವೆ. ನೋವು ಹಂಚಿಕೊಳ್ಳಿ ಎಂಬುದಾಗಿ ಹೇಳುವೆ” ಎಂದು ಕೌರ್ ಟ್ವೀಟ್ ಮಾಡಿದ್ದಾರೆ. ನವಜೋತ್ ಕೌರ್ ಸಿಧು ಅವರು ವೈದ್ಯೆಯಾಗಿ ವೃತ್ತಿ ಆರಂಭಿಸಿ, ಬಳಿಕ ರಾಜಕೀಯ ಪ್ರವೇಶಿಸಿದರು. ಸಿಧು ದಂಪತಿಗೆ ಒಬ್ಬ ಪುತ್ರ ಹಾಗೂ ಒಬ್ಬ ಪುತ್ರಿ ಇದ್ದಾರೆ.
ನವಜೋತ್ ಕೌರ್ ಅವರು ಕ್ಯಾನ್ಸರ್ ಕುರಿತು ಟ್ವೀಟ್ ಮಾಡುತ್ತಲೇ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಅವರು ಪ್ರತಿಕ್ರಿಯಿಸಿದ್ದಾರೆ. “ನೀವು ಸರ್ಜರಿಗೆ ಒಳಗಾಗುತ್ತಿರುವು ಕೇಳಿ ಬೇಸರವಾಯಿತು. ಆದರೂ, ಆರಂಭಿಕ ಹಂತದಲ್ಲಿಯೇ ಕ್ಯಾನ್ಸರ್ ಪತ್ತೆಯಾಗಿದೆ. ನೀವು ಬೇಗನೆ ಗುಣಮುರಾಗಲಿ ಎಂಬುದಾಗಿ ಪ್ರಾರ್ಥಿಸುತ್ತೇನೆ” ಎಂದು ಹೇಳಿದ್ದಾರೆ.
1988ರಲ್ಲಿ ನಡೆದಿದ್ದ ರಸ್ತೆ ಜಗಳ (Road Rage Case) ಪ್ರಕರಣಕ್ಕೆ ಸಂಬಂಧಪಟ್ಟಂತೆ ನವಜೋತ್ ಸಿಂಗ್ ಸಿಧು ಅವರಿಗೆ 2022ರ ಮೇ 22ರಂದು 1988ರ ಡಿಸೆಂಬರ್‌ನಲ್ಲಿ ಪಟಿಯಾಲಾದ ಪಾರ್ಕಿಂಗ್ ಸ್ಥಳವೊಂದರಲ್ಲಿ ನವಜೋತ್ ಸಿಂಗ್ ಸಿಧು ಮತ್ತು ಅವರ ಸಹಚರ ರೂಪಿಂದರ್ ಸಿಂಗ್ ಸಂಧು ಸೇರಿ, ಹಿರಿಯ ನಾಗರಿಕ ಗುರ್ನಾಮ್ ಸಿಂಗ್‌ರಿಗೆ ಬೈದಿದ್ದಲ್ಲದೆ, ಅವರನ್ನು ಕಾರಿನಿಂದ ಕೆಳಗೆ ಇಳಿದು ತಲೆಗೆ ಹೊಡೆದಿದ್ದರು. ಅದಾದ ಕೆಲವು ದಿನಗಳಲ್ಲಿ ಗುರ್ನಾಮ್ ಸಿಂಗ್ ಮೃತಪಟ್ಟಿದ್ದರು. ಈ ಪ್ರಕರಣ ಸುಪ್ರೀಂ ಕೋರ್ಟ್‌ತನಕ ಹೋಗಿತ್ತು.
ಇದನ್ನೂ ಓದಿ: ಪಟಿಯಾಲಾ ಜೈಲಿನಲ್ಲಿ ನವಜೋತ್ ಸಿಂಗ್ ಸಿಧು ಗುಮಾಸ್ತ; ಶೀಘ್ರ ಫಿಕ್ಸ್ ಆಗಲಿದೆ ಸಂಬಳ