ನವದೆಹಲಿ: ದೇಶದ ಮೊದಲ ರಕ್ಷಣಾ ಸಿಬ್ಬಂದಿ ಮುಖ್ಯಸ್ಥರಾಗಿದ್ದ ಜನರಲ್ ಬಿಪಿನ್ ರಾವತ್ (Bipin Rawat) ಅವರ ಸ್ಮರಣಾರ್ಥ ನೌಕಾಪಡೆಯು ಎರಡು ಟ್ರೋಫಿಗಳನ್ನು ಘೋಷಿಸಿದೆ. ರಾವತ್ ಅವರ 65ನೇ ಜಯಂತಿಯಂದೇ ನೌಕಾಪಡೆಯು ಟ್ರೋಫಿಗಳನ್ನು ಘೋಷಿಸಿದೆ.
ಮೊದಲ ಟ್ರೋಫಿಯಾದ ‘ಜನರಲ್ ಬಿಪಿನ್ ರಾವತ್ ರೋಲಿಂಗ್ ಟ್ರೋಫಿ’ಯನ್ನು ಅಗ್ನಿವೀರ್ ತರಬೇತಿ ಪಡೆಯುತ್ತಿರುವ ಮಹಿಳೆಯರಲ್ಲಿ ದಕ್ಷ ಮಹಿಳಾ ಅಧಿಕಾರಿಗೆ ನೀಡಲಾಗುತ್ತದೆ. ನೌಕಾಪಡೆಯ ಮುಖ್ಯಸ್ಥರು ನೌಕಾಪಡೆಯ ಅಗ್ನಿವೀರರಿಗೆ ಮಾರ್ಚ್ 28ರಂದು ಟ್ರೋಫಿ ನೀಡಲಿದ್ದಾರೆ.
ಎರಡನೇ ಟ್ರೋಫಿಯಾದ ʼಜನರಲ್ ಬಿಪಿನ್ ರಾವತ್ ರೋಲಿಂಗ್ ಟ್ರೋಫಿʼಯನ್ನು ಗೋವಾದಲ್ಲಿರುವ ನೇವಲ್ ವಾರ್ ಕಾಲೇಜ್‌ನಲ್ಲಿ ನೇವಲ್ ಹೈಯರ್ ಕಮಾಂಡ್ ಕೋರ್ಸ್ ಮಾಡುತ್ತಿರುವವರಲ್ಲಿ ‘ಅತ್ಯಂತ ಹುರುಪಿನ ಅಧಿಕಾರಿ’ಗೆ ನೀಡಲಾಗುತ್ತದೆ.
ದೇಶದ ಸೇನಾ ಮುಖ್ಯಸ್ಥರಾಗಿ, ಮೊದಲ ರಕ್ಷಣಾ ಸಿಬ್ಬಂದಿಯ ಮುಖ್ಯಸ್ಥರಾಗಿ ಜನರಲ್ ಬಿಪಿನ್ ರಾವತ್ ನೀಡಿದ ಕೊಡುಗೆ ಸ್ಮರಣಾರ್ಥ ನೌಕಾಪಡೆಯು ಪ್ರಶಸ್ತಿ ಘೋಷಿಸಿದೆ. ರಾವತ್ ಅವರು ಸರ್ಜಿಕಲ್ ಸ್ಟ್ರೈಕ್, ಬಾಲಾಕೋಟ್ ದಾಳಿ, ಮ್ಯಾನ್ಮಾರ್ ಆಪರೇಷನ್ ಸೇರಿ ಹಲವು ಪ್ರಮುಖ ಆಪರೇಷನ್‌ಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ರಾವತ್ ಅವರು 2021ರ ಡಿಸೆಂಬರ್ 8ರಂದು ತಮಿಳುನಾಡಿನಲ್ಲಿ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ನಿಧನರಾಗಿದ್ದಾರೆ.
ಇದನ್ನೂ ಓದಿ: ರಾಜ ಮಾರ್ಗ ಅಂಕಣ | ರಾಷ್ಟ್ರ ಪ್ರೇಮಿಗಳ ಪಾಲಿಗೆ ಸ್ಫೂರ್ತಿಯ ಚಿಲುಮೆ ಬಿಪಿನ್ ರಾವತ್: ಅವರಿಲ್ಲದೆ ಒಂದು ವರ್ಷ