Site icon Vistara News

Nawazuddin Siddiqui: ದುಬೈನಲ್ಲಿ ಮಕ್ಕಳ ಆರೈಕೆಗೆ ನವಾಜುದ್ದೀನ್‌ ಸಿದ್ದಿಕಿ ನೇಮಿಸಿದ ಯುವತಿಗೆ ಊಟಕ್ಕೂ ದಿಕ್ಕಿಲ್ಲ, ಏನಿದು ಕೇಸ್?

Nawazuddin Siddiqui's house help says she's stranded in Dubai without food, money because of him

ನವಾಜುದ್ದೀನ್‌ ಸಿದ್ದಿಕಿ

ಅಬುಧಾಬಿ/ಮುಂಬೈ: ಬಾಲಿವುಡ್‌ ನಟ ನವಾಜುದ್ದೀನ್‌ ಸಿದ್ದಿಕಿ (Nawazuddin Siddiqui) ಹಾಗೂ ಅವರ ಕುಟುಂಬಸ್ಥರು ನೀಡುತ್ತಿದ್ದ ಕಿರುಕುಳದ ಬಗ್ಗೆ ಅವರ ಪತ್ನಿ ಆಲಿಯಾ ಸಿದ್ದಿಕಿ ಆರೋಪ ಮಾಡಿದ ಬೆನ್ನಲ್ಲೇ ನಟನ ವಿರುದ್ಧ ಮತ್ತೊಂದು ಆರೋಪ ಕೇಳಿಬಂದಿದೆ. ದುಬೈನಲ್ಲಿರುವ ಮಕ್ಕಳ ಆರೈಕೆಗೆ ನೇಮಿಸಿದ್ದ ಯುವತಿಯನ್ನು ನವಾಜುದ್ದೀನ್‌ ಸಿದ್ದಿಕಿ ಅವರು ನಡುನೀರಿನಲ್ಲಿ ಕೈಬಿಟ್ಟಿದ್ದಾರೆ. ಈಗ ಯುವತಿಗೆ ಊಟಕ್ಕೂ ಹಣವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ಯುವತಿ ಮಾತನಾಡಿದ ವಿಡಿಯೊ ವೈರಲ್‌ ಆಗಿದೆ.

ನವಾಜುದ್ದೀನ್‌ ಸಿದ್ದಿಕಿ ಪತ್ನಿ ಆಲಿಯಾ ಸಿದ್ದಿಕಿ ಅವರು ನವೆಂಬರ್‌ನಲ್ಲಿ ದುಬೈನಿಂದ ಭಾರತಕ್ಕೆ ಬಂದಿದ್ದಾರೆ. ದುಬೈನಲ್ಲಿಯೇ ಉಳಿದ ಮಕ್ಕಳನ್ನು ನೋಡಿಕೊಳ್ಳಲು ೨೦ ವರ್ಷದ ಸಪ್ನಾ ರಾಬಿನ್‌ ಮಾಸಿಹ್‌ ಎಂಬ ಯುವತಿಯನ್ನು ನವಾಜುದ್ದೀನ್‌ ನೇಮಿಸಿದ್ದಾರೆ. ಅವರಿಗೆ ವೀಸಾ ಕೊಡಿಸಿ, ದುಬೈನಲ್ಲಿರಲು ವ್ಯವಸ್ಥೆ ಮಾಡಿದ್ದಾರೆ. ಆದರೆ, ಜನವರಿಯಲ್ಲಿ ನವಾಜುದ್ದೀನ್‌ ಸಿದ್ದಿಕಿ ಅವರ ಮಕ್ಕಳು ಕೂಡ ಭಾರತಕ್ಕೆ ಬಂದಿದ್ದು, ಈಗ ಸಪ್ನಾ ರಾಬಿನ್‌ ದುಬೈನಲ್ಲಿಯೇ ಉಳಿದಿದ್ದಾರೆ.

“ನವಾಜುದ್ದೀನ್‌ ಸಿದ್ದಿಕಿ ಅವರು ನನ್ನನ್ನು ದುಬೈಗೆ ಕಳುಹಿಸಿ, ಈಗ ನಡುನೀರಿನಲ್ಲಿ ಕೈಬಿಟ್ಟಿದ್ದಾರೆ. ನಾನಿರುವ ಮನೆಯ ಬಾಡಿಗೆಯನ್ನೂ ಕಟ್ಟಿಲ್ಲ. ನನಗೆ ಊಟಕ್ಕೂ ಗತಿ ಇಲ್ಲ” ಎಂಬುದಾಗಿ ಯುವತಿ ಹೇಳಿರುವ ವಿಡಿಯೊವನ್ನು ಆಕೆಯ ಪರ ವಕೀಲ ರಿಜ್ವಾನ್‌ ಸಿದ್ದಿಕಿ ಟ್ವೀಟ್ ಮಾಡಿದ್ದಾರೆ. ಅಂದಹಾಗೆ, ರಿಜ್ವಾನ್‌ ಸಿದ್ದಿಕಿ ಅವರು ಆಲಿಯಾ ಸಿದ್ದಿಕಿ ಪರ ವಕೀಲರೂ ಹೌದು. ಇತ್ತೀಚೆಗೆ, ಆಲಿಯಾ ಸಿದ್ದಿಕಿ ಅವರು ನವಾಜುದ್ದೀನ್‌ ಹಾಗೂ ಅವರ ಕುಟುಂಬಸ್ಥರ ವಿರುದ್ಧ ಗಂಭೀರ ಆರೋಪ ಮಾಡಿದ್ದರು.

ಇದನ್ನೂ ಓದಿ: Nawazuddin Siddiqui: ಹೆಂಡತಿಗೆ ಚಿತ್ರಹಿಂಸೆ ನೀಡಿ, ಟಾಯ್ಲೆಟ್ ಹೋಗುವುದಕ್ಕೂ ಅವಕಾಶ ನೀಡದ ನವಾಜುದ್ದೀನ್: ವಕೀಲರು ಹೇಳಿದ್ದೇನು?

Exit mobile version